ಗುರುವಾರ , ಜನವರಿ 30, 2020
22 °C

‘ಐಆರ್‌ಸಿಟಿಸಿ’ನಿಂದ ಥಾಯ್ಲೆಂಡ್‌ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಡಿಯನ್‌ ರೈಲ್ವೆ ಕೇಟರಿಂಗ್‌ ಅಂಡ್‌ ಟೂರಿಸಂ  ಕಾರ್ಪೊ­ರೇಷನ್‌ (ಐಆರ್‌ಸಿಟಿಸಿ) ಥಾಯ್ಲೆಂಡ್‌ ಪ್ರವಾಸ ಪ್ಯಾಕೇಜ್‌ ಪ್ರಕಟಿಸಿದೆ. ಈ ಪ್ರವಾಸದ ವೆಚ್ಚ ಓರ್ವ ವ್ಯಕ್ತಿಗೆ ರೂ.35,670. ಹೋಗುವ ಮತ್ತು ಬರುವ ವಿಮಾನ  ಟಿಕೆಟ್‌ಗಳು, ಊಟ, ವಸತಿ, ಪ್ರವಾಸಿ ವಿಮೆ ಇದರಲ್ಲಿ ಸೇರಿದೆ.ಸ್ಪೈಸ್‌ ಜೆಟ್‌  ವಿಮಾನದ ಮೂಲಕ  ಮೊದಲ 30 ಜನರ ತಂಡವನ್ನು ಜನವರಿ 29­ರಂದು ಥಾಯ್ಲೆಂಡ್‌ಗೆ ಕರೆದೊಯ್ಯಲು  ಯೋಜನೆ ರೂಪಿ­ಸಲಾಗಿದೆ ಎಂದು  ‘ಐಆರ್‌­ಸಿಟಿಸಿ’ನ ಬೆಂಗಳೂರು  ಪ್ರಾದೇಶಿಕ  ಕಚೇರಿಯ  ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಟಿ.ಆರ್‌.ಬೋಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)