ಭಾನುವಾರ, ಜೂನ್ 20, 2021
25 °C

‘ಕಡ್ಡಾಯ ಮತದಾನ ಕಾಯ್ದೆ ಜಾರಿಗೆ ತನ್ನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶೇ 100 ಮತದಾನ ಆಗಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು ಎಂದು ಸಾರ್ವಜನಿಕರು ಸಹಾಯಕ ಚುನಾವಣಾಧಿಕಾರಿಗೆ  ಸಲಹೆ ನೀಡಿದರು.ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಗುರುವಾರ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ  ಪ್ರತಿಜ್ಞಾವಿಧಿ ಸ್ವೀಕರಿಸಿ ಸಲಹೆ ನೀಡಿದರು.ಮತದಾನ ಮಾಡದವರಿಗೆ ಸರ್ಕಾರಿ ಸೌಲಭ್ಯ ಕಡಿತಗೊಳಿಸಬೇಕು. ಮತದಾನ ಕಡ್ಡಾಯವಾಗಿ ಮಾಡಲೇಬೇಕು ಎನ್ನುವ ಕಾನೂನು ಜಾರಿಗೆ ತರಬೇಕು. ಹಾಗಾದಾಗ ಮಾತ್ರ ಶೇ 100ರಷ್ಟು ಮತದಾನ ಆಗಲು ಸಾಧ್ಯ ಎಂದರು.ಇದು ಪರೀಕ್ಷಾ ಸಮಯ ಆಗಿರುವುದರಿಂದ ಯಾವುದೇ ವಿದ್ಯಾರ್ಥಿಗಳನ್ನು ಚುನಾವಣಾ ಜಾಗೃತಿ ಜಾಥಾಗಳಿಗೆ ಬಳಸಿಕೊಳ್ಳಬಾರದು. ಸಂತೆ, ಸಾರ್ವಜನಿಕ ಸ್ಥಳಗಳಲ್ಲಿ ದ್ವನಿವರ್ಧಕ, ಭಿತ್ತಿಪತ್ರ, ಸೂಚನಾ ಫಲಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷ ಟಿ. ಮಲ್ಲೇಶ್‌, ಎಸ್‌.ಎನ್‌. ನಂಜಪ್ಪ, ಮುಜಾಹಿದ್‌, ವಿತರಕ ಸಂಘದ ಅಧ್ಯಕ್ಷ ವಾಸುದೇವಮೂರ್ತಿ, ಲಯನ್ಸ್‌ ಸಂಸ್ಥೆಯ ಶ್ರೀನಾಥ್‌, ವರ್ತಕ ಸಂಘದ ಭರತ್‌ಕುಮಾರ್‌, ಮಂಜುನಾಥ್ ಗುಪ್ತಾ, ಬಟ್ಟೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್‌, ಮುರಳೀಧರ ಗುಪ್ತಾ, ಪತಂಜಲಿ ಯೋಗ ಕೂಟದ ಮಂಜಶೆಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.ಸಹಾಯಕ ಚುನಾವಣಾಧಿಕಾರಿ ಸುಜ್ಞಾನ ಮೂರ್ತಿ, ತಹಶೀಲ್ದಾರ್‌ ರಾಘವೇಂದ್ರ, ಆರ್‌. ನರಸಿಂಹಯ್ಯ, ಶಿವಮಾದಪ್ಪ, ಇದ್ದರು.‘ಮತದಾನದ ಘನತೆ ಗೌರವಿಸಿ’

ಆಲೂರು:
ಯುವಕರು ಮತದಾನದ ಘನತೆಯನ್ನು ಗೌರವಿಸಬೇಕಾದ ಅವಶ್ಯಕತೆ ಇದೆ ಎಂದು ತಹಶೀಲ್ದಾರ್‌ ಮಹದೇವಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬುಧವಾರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.‘ರಾಜಕೀಯ ನಾಯಕರು ನೀಡುವ ಆಮೀಷಗಳಿಗೆ ಯುವಕರು ಒಳಗಾಗದೆ ಸಮರ್ಥ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಬಿ. ಚಂದ್ರಪ್ಪ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು’ ಎಂದರು.ತಾಲ್ಲೂಕು ಚುನಾವಣಾ ನೋಡಲ್‌ ಅಧಿಕಾರಿ ಸುಮಲತಾ, ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ, ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.