ಕಮಲನಗರ: ಸಮಾಜದ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿ ಸಮಾಜಕ್ಕೆ ನೈತಿಕ ಶಿಕ್ಷಣದ ಸಂದೇಶಗಳನ್ನು ನೀಡಿದ ಕನಕದಾಸರು, ಸಾಮಾಜಿಕ ಪರಿವರ್ತನೆಯ ಹರಿಕಾರ ಎಂದು ಮುಖಂಡ ಪಂಡಿತರಾವ್ ಚಿದ್ರಿ ಹೇಳಿದರು.

ಇಲ್ಲಿಗೆ ಸಮೀಪದ ಹೊಳಸಮುದ್ರ ಗ್ರಾಮದ ಬೀರಗೊಂಡೇಶ್ವರ ಮಂದಿರದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಕನಕದಾಸರ 526ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಸಮಾನತೆ ಸಾರುವ ಮೂಲಕ ಮಹಾನ್ ಕ್ರಾಂತಿ ಮಾಡಿದ ಕನಕದಾಸರ ತತ್ವ, ಆದರ್ಶಗಳನ್ನು ಎಲ್ಲರೂ ಮೂಗೂಡಿಸಿಕೊಳ್ಳಬೇಕು ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಮೃತರಾವ್ ಚಿಮಕೋಡೆ ಮಾತನಾಡಿ, ದಾಸಶ್ರೇಷ್ಠ ಕನಕದಾಸರು ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮತರಲ್ಲ. ಜಾತಿ, ಭೇದ ಮರೆತು ಬದುಕಬೇಕೆಂದು ಸಾರಿದ ಅವರ ಕೀರ್ತನೆಗಳ ಸಾರ ಎಲ್ಲರೂ ಅರಿತುಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮಹಾದೇವ ಕೋಟೆ, ಜಿಲ್ಲಾ ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾಲಾಜಿ ಮೇತ್ರೆ, ಮುಖಂಡ ಅನಿಲ ಕುಲಕರ್ಣಿ, ಬಾಲಾಜಿ ನರೋಟೆ, ರವೀಂದ್ರ ಬಳತ್ ಮಾತನಾಡಿದರು.

ಮುಖಂಡ ಗೋಪಾಲರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ರಮೇಶ ಬಿರಾದಾರ್, ಸಂತೋಷ ಜೋಳದಾಬಕೆ, ನಾರಾಯಣ ರಾಂಪುರೆ, ನಿರಂಜಪ್ಪ ಪತ್ರೆ, ತಾನಾಜಿ ತೋರಣೇಕರ್, ಗುಂಡಪ್ಪ ಮುಧಾಳೆ, ಶಿವಾಜಿ ಮೇತ್ರೆ, ಭಾಲ್ಕೇಶ್ವರ್ ಹುಡಗೆ, ಶಾಲಿವಾನ ವಳಗಣೆ ಮತ್ತಿತರರು ಇದ್ದರು.

ಎಂ.ಮಲ್ಲಿಕಾರ್ಜುನ್ ಸ್ವಾಗತಿಸಿದರು. ತುಕಾರಾಮ ಯರೋಳೆ ವಂದಿಸಿದರು. ದೀಪಕ್ ಏಕಾತಪುರೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.