ಬುಧವಾರ, ಜೂನ್ 16, 2021
27 °C

‘ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ವಿಶ್ವಾಸ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ: ‘ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಅಭ್ಯರ್ಥಿಗಳಿಬ್ಬರೂ ಬರುವ ಚುನಾವಣೆಯಲ್ಲಿ ವಿಜಯ ಗಳಿಸಲಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಪ್ರಕಾಶ ಹುಕ್ಕೇರಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ದಿನದಂದೇ ಅವರ ಆಯ್ಕೆ ನಿಶ್ಚಿತಗೊಂಡಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ವೀರಕುಮಾರ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು."ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಎಂಟು ತಿಂಗಳಿನಲ್ಲಿ ಬಡವರ, ದೀನದಲಿತರ ಪರ ಕೈಗೊಂಡ ₨ 750 ಕೋಟಿಗಳ ಯೋಜನೆಗಳು ಬರುವ ಚುನಾವಣೆಯಲ್ಲಿ ನೆರವಾಗಲಿವೆ. ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಾರ್ಯವೈಖರಿಗೆ ಬೇಸತ್ತ ನಾಗರಿಕರು ಕಾಂಗ್ರೆಸ್‌ ಜೊತೆಗೆ ಇರಲು ನಿರ್ಧರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪರಾಜಿತಗೊಂಡ ಮತಗಳ ಎರಡುಪಟ್ಟು ಮತಗಳಿಂದ ಸಚಿವ ಪ್ರಕಾಶ ಹುಕ್ಕೇರಿ ಜಯ ಗಳಿಸಲಿದ್ದಾರೆ ಎಂದರು.ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ‘ಬರುವ ಲೋಕಸಭೆ ಚುನಾವಣೆಯಲ್ಲಿ ಜೇಷ್ಠ ಧುರೀಣ ರಘುನಾಥರಾವ್‌ ಕದಮ್‌ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿ ಪ್ರಚಾರವನ್ನು ಚುರುಕುಗೊಳಿಸಲಿದ್ದೇವೆ. ಸಚಿವ ಪ್ರಕಾಶ ಹುಕ್ಕೇರಿ ಅವರು ನಾಮಪತ್ರ ಸಲ್ಲಿಸಿದ ನಂತರ ಏಪ್ರಿಲ್‌ 2 ರಂದು ಇಲ್ಲಿನ ಮರಾಠಾ ಮಂಡಳದ ಸಾಂಸ್ಕೃತಿಕ ಭವನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಮೇಳ ನಡೆಸಲಾಗುವುದು’ ಎಂದರು.ಲಕ್ಷ್ಮಣರಾವ ಚಿಂಗಳೆ, ದಲಿತ ಮುಖಂಡ ಅಶೋಕ ಅಸೂದೆ, ನಗರಸಭೆ ಸದಸ್ಯ ರಾಜ ಪಠಾಣ ರಾಜೇಶ ಕದಮ್‌, ಪಂಕಜ ಪಾಟೀಲ, ಗೋಪಾಳ ನಾಯಿಕ, ಪುಷ್ಪಾತಾಯಿ ಕುಂಬಾರ, ಶೈಲಜಾ ಚಡಚಾಳೆ, ಕಿರಣ ಪಾಟೀಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.