ವಿಜಯಪುರ: ‘ಕೆಟ್ಟ ದಿನಗಳು ಆರಂಭ ವಾಗಿ ಬರೋಬ್ಬರಿ ವರ್ಷ ಕಳೆಯಿತು. ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಈ ರಗಳೆ ಮುಗಿಯಲು ಇನ್ನೆಷ್ಟು ದಿನವೋ... ‘ಮನೆ ಮಂದಿ ಮಾನಸಿಕರಾಗಿದ್ದಾರೆ. ಪೊಲೀಸರ ಬೂಟಿನ ಸದ್ದು ಕೇಳಿದರೆ ಬೆಚ್ಚಿ ಬೀಳುತ್ತಾರೆ. ಸಾಲದ ಹೊರೆ ಹೆಚ್ಚುತ್ತಿದೆ. ಇನ್ನೂ ಹೈರಾಣ ತಪ್ಪದು. ನಮಗೆ ಬದುಕಲು ಒಂದು ದಾರಿ ತೋರಿಸಿರಿ...’

ಇದು ವಿಜಯಪುರ ತಾಲ್ಲೂಕು ದ್ಯಾಬೇರಿ ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ವಾಸವಿರುವ ದಲಿತ ಕುಟುಂಬ ರಾಮಚಂದ್ರ ಹಳ್ಳಿ ಅವರು ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಮಾಡಿಕೊಂಡ ಮನವಿಯ ಪರಿ.

2014 ಜೂನ್ 17ರಂದು ಸಂಜೆ ತೆರೆದ ಕೊಳವೆಬಾವಿಗೆ ಬಿದ್ದು ಸತತ 52 ತಾಸು ಕಾರ್ಯಾಚರಣೆ ನಡೆಸಿದರೂ, ಬದುಕುಳಿಯದ ಅಕ್ಷತಾ ಹನುಮಂತ ಮಾಲಿ ಪಾಟೀಲ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜಮೀನಿನ ಮಾಲೀಕ ರಾಮಚಂದ್ರ ಹಳ್ಳಿ ಕುಟುಂಬ, ವರ್ಷ ಕಳೆದರೂ ಘಟನೆಯಿಂದ ಕೊಂಚವೂ ಚೇತರಿಸಿಕೊಂಡಿಲ್ಲ. ಇಂದಿಗೂ ಆಘಾತದಿಂದ ಜರ್ಝರಿತಗೊಂಡಿದೆ.

‘ಹೊಲದ ಮಾಲೀಕ ನಾನು. ತಪ್ಪಿಗೆ ನನಗೆ ಶಿಕ್ಷೆ ನೀಡಲಿ. ಆದರೆ ದುಡಿದು ತಿನ್ನುವ ನನ್ನ ಮಕ್ಕಳು ಏನು ಮಾಡಿ ದ್ದಾರೆ. ಪೊಲೀಸರು ನನ್ನ ಜತೆಗೆ ಮೂವರು ಮಕ್ಕಳ ಮೇಲೂ ದಾವೆ ಹಾಕಿದ್ದಾರೆ. ಆರಂಭದ ದಿನಗಳಲ್ಲಿ ಠಾಣೆಯಲ್ಲಿ ಬಡಿದಿದ್ದಕ್ಕೆ ತಿಪ್ಪರಾಯ ಮಾನಸಿಕನಾಗಿದ್ದಾನೆ. ಮನೆಯಿಂದ ಹೊರ ಬರಲು ಹೆದರುತ್ತಾನೆ. ಇಡೀ ಮನೆ ಮಂದಿಯೆಲ್ಲ ಹೈರಾಣಾಗಿದ್ದೇವೆ’ ಎಂದು ರಾಮಚಂದ್ರ ಗದ್ಗದಿ ತರಾದರು.

‘ಘಟನೆ ನಡೆದ ಬಳಿಕ ಕೋರ್ಟ್ಗೆ ಅಲೆದಾಡುವುದು ಹೆಚ್ಚಿರುವುದರಿಂದ ಕೃಷಿ ಚಟುವಟಿಕೆ ನಡೆಸಲು ಆಗಿಲ್ಲ. ಕೂಲಿಯೇ ನಮ್ಮ ಕುಟುಂಬಕ್ಕೆ ಆಧಾರ. ನಿತ್ಯ ಹೊರಗೆ ದುಡಿಯಬೇಕು. ಮನೆಗೆ ಬಂದೇ ಊಟ ಮಾಡಬೇಕಿದೆ. ತಿಂಗಳಿ ಗೊಮ್ಮೆ ವಿಜಯಪುರ ನಗರದ ನ್ಯಾಯಾ ಲಯಕ್ಕೆ ಹೋಗಿ ಬರುವ ಖರ್ಚು ಹೊಂದಿಸಲೇ ಆಗುತ್ತಿಲ್ಲ.

‘ಮಗಳನ್ನು ಕಳೆದುಕೊಂಡ ಹನು ಮಂತ, ಸರ್ಕಾರ ಕೊಟ್ಟ ರೊಕ್ಕ ತೆಗೆದು ಕೊಂಡು ಊರಿಗೆ ಹೋದ. ಆದರೆ 20 ಮಂದಿಯಿರುವ ನಮ್ಮ ಕುಟುಂಬ ಬೀದಿಗೆ ಬಿತ್ತು. ಗಂಡ–ಮಕ್ಕಳು ಜೈಲು ಪಾಲಾದರು. ಮಗಳ ಮದುವೆ 5 ತಿಂಗಳ ಬಳಿಕ ನಡೆಯಿತು. ಮದುವೆ– ಜಾಮೀ ನಿಗಾಗಿ ಮಾಡಿದ ಸಾಲ ದಿನ ದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ರಾಮಚಂದ್ರ ಅವರ ಪತ್ನಿ ರತ್ನಾಬಾಯಿ ರೋದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.