ಭಾನುವಾರ, ಜೂನ್ 13, 2021
21 °C

‘ಕೈ’ ಯತ್ತ ಜೆಡಿಎಸ್‌, ಬಿಜೆಪಿ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಲೋಕಸಭೆ ಚುನಾವಣೆ ಹಿನ್ನೆಲೆ­ಯಲ್ಲಿ ವಿವಿಧ ಪಕ್ಷಗಳ ಮುಖಂಡರು ಮತ್ತು ಅಸಮಾಧಾನಿಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ ಪ್ರಮುಖರಿಗೆ ಗಾಳ ಹಾಕಿದೆ.ಜೆಡಿಎಸ್‌ ಪಕ್ಷದ ಜಿ.ಪಂ. ಮಾಜಿ ಅಧ್ಯಕ್ಷೆ ಮಾಲತಿ ನಾಯಕ್‌, ಮಾಜಿ ಸದ­ಸ್ಯ­ರಾದ ಪ್ರಕಾಶ್‌ ರಾಠೋಡ್‌, ಕೆಜೆಪಿ ಮುಖಂಡ ಮತ್ತು ಜಿ.ಪಂ ಮಾಜಿ ಸದಸ್ಯ ಫಕೀರಪ್ಪ ಚಳಗೇರಿ, ಹಾಲಿ ಜಿ.ಪಂ. ಸದಸ್ಯೆ ಹನಮಕ್ಕ ಚೌಡ್ಕಿ ಅವರ ಪತಿ ಹನಮಂತಪ್ಪ ಚೌಡ್ಕಿ ಮತ್ತಿತರರನ್ನು ಭೇಟಿ ಮಾಡಿದ ಲೋಕಸಭೆ ಚುನಾವಣೆ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಹಿಟ್ನಾಳ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿದರು ಎಂದು ತಿಳಿಸಲಾಗಿದೆ.ಈ ವಿಷಯವನ್ನು ‘ಪ್ರಜಾವಾಣಿ’ಗೆ ದೃಢಪಡಿಸಿದ ಸಚಿವ ಶಿವರಾಜ ತಂಗ­ಡಗಿ, ಇನ್ನೂ ಅನೇಕ ಪ್ರಮುಖರು ಕಾಂಗ್ರೆಸ್‌ ಸೇರಲಿದ್ದಾರೆ. ಕನಕಗಿರಿ ಕ್ಷೇತ್ರ­ದಲ್ಲಿ ವಿಧಾನಸಭೆ ಚುನಾವಣೆ­ಯಲ್ಲಿ ತಮ್ಮ ಎದುರಾಳಿಯಾಗಿದ್ದ ಮುಕುಂದ­ರಾವ ಭವಾನಿಮಠ ಅವರನ್ನು ಹೊರ­ತುಪಡಿಸಿ ಉಳಿದೆಲ್ಲ ಬಿಎಸ್‌ಆರ್‌ ಕಾರ್ಯ­ಕರ್ತರು ಕಾಂಗ್ರೆಸ್ ಸೇರ್ಪಡೆಗೊಳ್ಳುವರು ಎಂದರು.ಅಲ್ಲದೇ ಜಿ.ಪಂ.ನ ಬಿಜೆಪಿ ಸದಸ್ಯ ಪರಸಪ್ಪ ಕತ್ತಿ ಸೇರಿದಂತೆ ಇನ್ನೂ ಕೆಲ ಜಿ.ಪಂ. ಸದಸ್ಯರು ಸಹ ಕಾಂಗ್ರೆಸ್‌­ನೊಂದಿಗೆ ಗುರುತಿಸಿ­ಕೊಳ್ಳಲಿದ್ದು ಕಾನೂ­ನಿನ ತಾಂತ್ರಿಕ ತೊಡಕು ಇರುವ ಕಾರ­ಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗೆ ಬಾಹ್ಯ­ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂಬದನ್ನು ತಂಗಡಗಿ ಬಹಿರಂಗಪಡಿಸಿ­ದರು. ಜಿ.ಪಂ. ಮಾಜಿ ಅಧ್ಯಕ್ಷೆ ಜೆಡಿಎಸ್‌ನ ಮಾಲತಿ ನಾಯಕ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.