ಭಾನುವಾರ, ಜೂನ್ 20, 2021
28 °C

‘ಗ್ರಾವಿಟಿ’ಗೆ ಏಳು ಆಸ್ಕರ್ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್ ಏಂಜಲೀಸ್‌ (ಐಎಎನ್‌ಎಸ್‌): ಬಾಹ್ಯಾಕಾಶ ಜಗತ್ತಿನ ಅಂಶಗಳ ಮೇಲೆ ಆಧಾರಿತ ‘ಗ್ರಾವಿಟಿ’ ಚಿತ್ರವು ನಾಮಕರಣಗೊಂಡಿದ್ದ 10ರಲ್ಲಿ ಏಳು ವಿಭಾಗಗಳಲ್ಲಿ 86ನೇ ವರ್ಷದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಆದರೆ ಅತ್ಯುತ್ತಮ ಚಿತ್ರ ವಿಭಾಗದ ಆಸ್ಕರ್‌ ಗರಿ ನೈಜ ಘಟನೆ ಆಧಾರಿತ ಚಿತ್ರ ‘12 ಇಯರ್ಸ್‌ ಅ ಸ್ಲೇವ್‌’ ಪಾಲಾಗಿದೆ.

ಅತ್ಯುತ್ತಮ ನಿರ್ದೇಶಕ, ಚಿತ್ರದ ಸಂಕಲನ, ಸಂಗೀತ, ಸೌಂಡ್‌ ಎಡಿಟಿಂಗ್‌, ಸೌಂಡ್‌ ಮಿಕ್ಸಿಂಗ್‌ ಹಾಗೂ ವಿಷವಲ್‌ ಎಫೆಕ್ಟ್ಸ್‌ಗಳಂತ ವಿಭಾಗಗಳಲ್ಲಿ ‘ಗ್ರಾವಿಟಿ’ ಪ್ರಶಸ್ತಿ ಗೆದ್ದಿದೆ.

‘12 ಇಯರ್ಸ್‌ ಅ ಸ್ಲೇವ್’ ಹಾಗೂ ‘ದಲ್ಲಾಸ್ ಬಯರ್ಸ್‌ ಕ್ಲಬ್‌’ ಚಿತ್ರಗಳು ತಲಾ ಮೂರು ಪ್ರಶಸ್ತಿಗಳನ್ನು ಪಡೆದಿವೆ.

‘12 ಇಯರ್ಸ್‌ ಅ ಸ್ಲೇವ್’  ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟಿ ಹಾಗೂ ಅತ್ಯುತ್ತಮ ಕಥಾ ವಸ್ತು ಬರವಣಿಗೆ ವಿಭಾಗದಲ್ಲಿ ಪ್ರಶಸ್ತಿಗಳನ್ನು ತನ್ನಾದಾಗಿಸಿಕೊಂಡಿದೆ.

ಏಡ್ಸ್‌ ಪೀಡಿತ ವ್ಯಕ್ತಿಯಾಗಿ ನಟಿಸಿದ ಮ್ಯಾಥಿವ್‌ ಮ್ಯಾಕ್‌ಕೊನೌಗೇಯ್ ಮೂಲಕ ‘ದಲ್ಲಾಸ್‌ ಬಯರ್ಸ್‌ ಕ್ಲಬ್‌’ ಚಿತ್ರ ಮೊದಲ ಪ್ರಶಸ್ತಿ ಗೆದ್ದರೆ, ಪೋಷಕ ನಟ ಮತ್ತು ಮೇಕಪ್‌ ಹಾಗೂ ಕೇಶವಿನ್ಯಾಸ ವಿಭಾಗದಲ್ಲಿ ಉಳಿದರೆಡು ಪ್ರಶಸ್ತಿಗಳನ್ನು ಬಾಚಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.