ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಕಪ್ಪು ಹಣದ ಚಲಾವಣೆ ನಿಯಂತ್ರಿಸಲು ಹಾಗೂ ಭದ್ರತೆಗೆ ಚುನಾವಣಾ ಆಯೋಗ ಹಲವು ಕಠಿಣ ಕ್ರಮ ಕೈಗೊಂಡಿದ್ದರೂ, ಸಾರ್ವಜನಿಕರು ಒಯ್ಯುವ ನಗದು ಹಣಕ್ಕೆ ಯಾವುದೇ ಮಿತಿ ನಿಗದಿ ಪಡಿಸಿಲ್ಲ.

ಆದರೆ, ಶಂಕಿತ ಹಣ ಸಾಗಣೆ ಪ್ರಕರಣಗಳಲ್ಲಿ ನಿಗಾ ತಂಡವು ಸಾರ್ವಜನಿಕರನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮಾರ್ಚ್ 5ರಂದು ಚುನಾವಣಾ ವೇಳಾಪಟ್ಟಿ ಪ್ರಕಟ ಮಾಡಿದ ತಕ್ಷಣ, ಚುನಾವಣಾ ಆಯೋಗವು ತಾತ್ಕಾಲಿಕ ನಿಗಾ ದಳ ಹಾಗೂ ಚುನಾವಣಾ ವೆಚ್ಚ ವೀಕ್ಷಕರ ತಂಡವನ್ನು ರಚಿಸಿತ್ತು.

ಚುನಾವಣೆಯ ಸಂದರ್ಭದಲ್ಲಿ ಕಪ್ಪು ಹಣದ ನಿಯಂತ್ರಣ ಮತ್ತು ಅಕ್ರಮ ಹಣ ಚಲಾವಣೆಯನ್ನು ಹತ್ತಿಕ್ಕುವುದಕ್ಕಾಗಿ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಧಿಸೂಚನೆ ಹೊರಡಿಸಿತ್ತು.

ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವುದಕ್ಕಾಗಿ ಈ ಬಾರಿ ಸಾರ್ವಜನಿಕರು ತಮ್ಮೊಂದಿಗೆ ಒಯ್ಯುವ ಅಥವಾ ಸಾಗಣೆ ಮಾಡುವ ನಗದು ಮೊತ್ತಕ್ಕೆ ಚುನಾವಣಾ ಆಯೋಗ ಮಿತಿ ಹೇರಿಲ್ಲ.

‘ಈ ಬಾರಿ ಜನರು ಒಯ್ಯುವ ಹಣಕ್ಕೆ ಮಿತಿ ನಿಗದಿ ಪಡಿಸಲಾಗಿಲ್ಲ. ಆದರೆ, ವ್ಯಕ್ತಿಯೊಬ್ಬರು ₨50,000ಕ್ಕಿಂತಲೂ ಹೆಚ್ಚು ಮೊತ್ತವನ್ನು ಹೊಂದಿದ್ದರೆ, ಅಂತಹವರನ್ನು ಆಯೋಗ ನೇಮಿಸಿರುವ ನಿಗಾ ದಳದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ. ಹೊಂದಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ಆ ವ್ಯಕ್ತಿ ಒದಗಿಸಬೇಕಾಗುತ್ತದೆ. ₨10 ಲಕ್ಷಕ್ಕೂ ಹೆಚ್ಚು ಮೊತ್ತವಿದ್ದರೆ, ಅದನ್ನು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಲಾಗುವುದು’ ಎಂದು ಚುನಾವಣಾ ಆಯೋಗದ ಅಧಿಕಾರಿ ಹೇಳಿದ್ದಾರೆ.

ಚುನಾವಣಾ ಸಮಯದಲ್ಲಿ, ಮದುವೆ ಸೇರಿದಂತೆ ಇತರ ಸಾಮಾಜಿಕ ಕಾರ್ಯಕ್ರಮಗಳಿಗಾಗಿ, ವ್ಯಾಪಾರಕ್ಕಾಗಿ ಹಣ ಒಯ್ಯುತ್ತಿರುವಾಗ ವಿಚಾರಣೆ ನೆಪದಲ್ಲಿ ಅಧಿಕಾರಿಗಳಿಂದ ಎದುರಾಗುವ ತೊಂದರೆಗಳ ಬಗ್ಗೆ ಸಾರ್ವಜನಿಕರಿಂದ ಹಾಗೂ ವರ್ತಕರಿಂದ ದೂರುಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಆಯೋಗವು ಈ ಬಾರಿ ನಿಯಮಗಳನ್ನು ಸಡಿಲಗೊಳಿಸಿದೆ.

ಚುನಾವಣೆಯ ವೇಳೆ ಕಪ್ಪು ಹಣದ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದಲೇ ಕೆಲವು ವರ್ಷಗಳ ಹಿಂದೆ ಸ್ಥಾಪಿಸಲಾಗಿರುವ ಚುನಾವಣಾ ವೆಚ್ಚ ಮೇಲ್ವಿಚಾರಣಾ (ಇಇಎಂ) ಘಟಕವನ್ನು ಚುನಾವಣಾ ಆಯೋಗವು ಆದಾಯ ತೆರಿಗೆ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಇತರ ಗುಪ್ತಚರ ಸಂಸ್ಥೆಗಳ ವ್ಯಾಪ್ತಿಗೆ ತಂದಿದೆ. ಇವುಗಳು ಆಯೋಗಕ್ಕೆ ಕಪ್ಪು ಹಣದ ಚಲಾವಣೆ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಲಿವೆ.

ಕಪ್ಪುಹಣ: ಮತದಾರರೊಂದಿಗೆ ಆಯೋಗ ‘ಚರ್ಚೆ’
ನವದೆಹಲಿ (ಪಿಟಿಐ): ಕಪ್ಪು ಹಣ ಚಲಾವಣೆಯಾಗುವ ಅನುಮಾನ ಇರುವ ಪ್ರದೇಶಗಳಲ್ಲಿ ಕಪ್ಪು ಹಣದ ಚಲಾವಣೆ ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗವು ಮತದಾರರೊಂದಿಗೆ ಚರ್ಚೆ, ಸಂವಾದ ನಡೆಸಲು ಮುಂದಾಗಿದೆ.

ಈ ಚರ್ಚೆಯಲ್ಲಿ ಸೇರುವಂತೆ ಆಯೋಗವು ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಸರ್ಕಾರಿ ನೌಕರರು ಮತ್ತು ಪತ್ರಕರ್ತರಿಗೆ ಮನವಿ ಮಾಡಿದೆ.

ಗ್ರಾಮೀಣ ಮಟ್ಟ ಮತ್ತು ಪಟ್ಟಣ ಹಾಗೂ ನಗರಗಳಲ್ಲಿ ವಾರ್ಡ್ ಮಟ್ಟದ ಜಾಗೃತಿ ಗುಂಪುಗಳನ್ನು ರಚಿಸುವಂತೆ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಅದರಲ್ಲೂ ಮುಖ್ಯವಾಗಿ ಅಕ್ರಮ ಹಣ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಗುಂಪುಗಳನ್ನು ರಚನೆ ಮಾಡುವಂತೆ ಆಯೋಗ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.