ಮಂಗಳವಾರ, ಜನವರಿ 21, 2020
29 °C

‘ತತ್ವಾಧಾರಿತ ದೇಶ ಭಾರತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಪಟ್ಟಣಕ್ಕೆ ಶುಕ್ರವಾರ ಬಂದ ವಿವೇಕಾನಂದ ರಥಯಾತ್ರೆಗೆ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು ಸಂಭ್ರಮದ ಸ್ವಾಗತ ಕೋರಿದರು.ಬಳಿಕ ನಡೆದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್‌ ಸಿ.ಎನ್‌. ಜಗದೀಶ, ಪ್ರಕ್ಷುಬ್ಧಗೊಂಡಿರುವ ಸಮಾಜದ ಬದಲಾವಣೆಗೆ ವಿವೇಕಾನಂದರ ತತ್ವಾದರ್ಶಗಳ ಅನುಸರಣೆ ದಿವ್ಯ ಮದ್ದು ಆಗಿದೆ. ಯುವಜನರು ವಿವೇಕಾನಂದರ ಬರಹ ಬದುಕನ್ನು ಅಭ್ಯಸಿಸುವ ಮೂಲಕ ಅವರ ತತ್ವಾದರ್ಶಗಳ ಅನುಸರಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.ತ್ಯಾಗೀಶ್ವರಾನಂದ ಮಹಾರಾಜ್, ಮಹಾಕಾವ್ಯನಂದಾ ಮಹಾರಾಜ್ ಮಾತನಾಡಿದರು. ಎಂ.ಎಚ್‌. ಚನ್ನೇಗೌಡ, ವಿದ್ಯಾನಿಲಯದ ಕಾರ್ಯದರ್ಶಿ ಕೆ.ಟಿ. ಚಂದು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ತೈಲೂರು ವೆಂಕಟಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್‌. ಕಾಳೀರಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಸಿ. ಅಪೂರ್ವಚಂದ್ರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಚೆನ್ನರಾಜು, ಸದಸ್ಯೆ ನೀಲಮ್ಮ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತೀಶ್, ರೋಟರಿ ಕ್ಲಬ್ ಅಧ್ಯಕ್ಷ ರಾಮರಾಜು, ಭಾರತ ವಿಕಾಸ್ ಪರಿಷತ್ ಅಧ್ಯಕ್ಷ ಹರ್ಷ, ಮುಖಂಡ ರಾದ ಮುಟ್ಟನಹಳ್ಳಿ ವೆಂಕಟೇಶ್, ಲಾರಾ ಪ್ರಸನ್ನ, ಶಿವಾನಂದ, ಚಂದ್ರು, ಜಯಣ್ಣ ಹಾಜರಿದ್ದರು.ಮಳವಳ್ಳಿ ವರದಿ: ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಂಡಾಗಲೇ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಸ್ವಾಮಿ ತ್ಯಾಗೀಶ್ವರನಂದ ಮಹಾರಾಜ್ ಹೇಳಿದರು.ವಿವೇಕಾನಂದರ 150ನೇ ಜಯಂತಿ ಅಂಗವಾಗಿ ನಡೆಯುತ್ತಿರುವ ರಥೋತ್ಸವ ಶುಕ್ರವಾರ ಪಟ್ಟಣಕ್ಕೆ ಬಂದ ಸಂದರ್ಭದಲ್ಲಿ ಅವರು ಮಾತನಾಡಿ ದರು. ವಿವೇಕಾನಂದರ ಸ್ವಾಭಿಮಾನ, ದೇಶಾಭಿಮಾನ, ಇತರೆ ವಿಷಯಗಳನ್ನು ತಿಳಿಸುವ ಉದ್ದೇಶದಿಂದ ದೇಶವ್ಯಾಪಿ ಯಾತ್ರೆ ನಡೆಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರೂ 100 ಕೋಟಿ ವೆಚ್ಚ ಮಾಡುತ್ತಿದೆ. ಯುವಜನರಿಗೆ ವಿವೇಕಾನಂದರ ಚಿಂತನೆಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಬಳಿಯಿಂದ ಶಾಲಾ ಮಕ್ಕಳು, ಪೂಜಾ ಕುಣಿತ, ಬೊಂಬೆ ಕುಣಿತದೊಡನೆ ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆ ನಡೆಸಲಾಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಉಪಾಧ್ಯಕ್ಷೆ ಚಂದ್ರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ್, ತಹಶೀಲ್ದಾರ್ ಎಂ.ಆರ್. ರಾಜೇಶ್, ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಡಾ.ಕೃಷ್ಣೇಗೌಡ ಹುಸ್ಕೂರು, ತಾಲ್ಲೂಕು ಘಟಕದ ಅಧ್ಯಕ್ಷ ತಿ. ಮರಿಸ್ವಾಮಿಮಾದಹಳ್ಳಿ, ಶಿವನಂಜುಮಾದಹಳ್ಳಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಂ. ರಾಮು, ಅಪ್ಪಾಜಿಗೌಡ ಇತರರು ಹಾಜರಿದ್ದರು.ನಾಗಮಂಗಲ ವರದಿ: ‘ಭಾರತ ತತ್ವ ಆಧಾರಿತ ದೇಶ. ಭಾರತೀಯ ಸಂಸ್ಕೃತಿ ಸನಾತನವಾದುದು. ಇಂತಹ ದೇಶದ ಸಂಸ್ಕೃತಿ ಮತ್ತು ಭವ್ಯತೆಯನ್ನು ಜಗತ್ತಿನಾ­ದ್ಯಂತ ಪಸರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು’ ಎಂದು ಬೆಂಗಳೂರು ರಾಮಕೃಷ್ಣ ಆಶ್ರಮದ ತ್ಯಾಗೀಶ್ವರಾನಂದ ಮಹಾರಾಜ್ ಅಭಿಪ್ರಾಯಪಟ್ಟರು.ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ರಾಮಕೃಷ್ಣ ಮಿಷನ್‌ ಆಯೋಜಿಸಿರುವ ರಥಯಾತ್ರೆ ಗುರುವಾರ ಪಟ್ಟಣ ಪ್ರವೇಶಿಸಿದ ನಂತರ ಶ್ರೀ ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾ ನಂದರ ಸಂದೇಶವನ್ನು ಸಾರುತ್ತಾ ಮಾತನಾಡಿದರು.ಭವ್ಯ ಪರಂಪರೆ ಹೊಂದಿರುವ ನಮ್ಮ ದೇಶದಲ್ಲಿ ಅನೇಕ ಅಕ್ರಮಗಳು ನಡೆಯುತ್ತಿದ್ದರೂ ಭಾರತೀಯರಾದ ನಾವು ನಮ್ಮತನವನ್ನು ಬಿಟ್ಟುಕೊಟ್ಟಿಲ್ಲ. ರಾಷ್ಟ್ರಪ್ರೇಮ ಎಂದರೇನು, ಮಕ್ಕಳಿಗೆ ಎಂಥ ಶಿಕ್ಷಣ ನೀಡಬೇಕು ಎಂಬುದನ್ನು ತಿಳಿಸಿದರು.ಕನ್ನಡ ಸಂಘದ ಅಧ್ಯಕ್ಷ ಎಂ.ಎನ್. ಮಂಜುನಾಥ್ ಮಾತನಾಡಿ, ವಿವೇಕಾ ನಂದರು ಕೇವಲ ವ್ಯಕ್ತಿಯಲ್ಲ ಅವರೊಂದು ರಾಷ್ಟ್ರದ ಧೀಮಂತ ಶಕ್ತಿ ಎಂದರು.ಕಾರ್ಯಕ್ರಮಕ್ಕೂ ಮುನ್ನ ಆದಿ­ಚುಂಚನಗಿರಿಯಿಂದ ಶ್ರೀರಂಗಪಟ್ಟಣ-–ಬೀದರ್ ಹೆದ್ದಾರಿ ಮೂಲಕ ಪಟ್ಟಣ ಪ್ರವೇಶಿಸಿದ ರಥಯಾತ್ರೆಯನ್ನು ತಹಶೀಲ್ದಾರ್ ಸಿ.ಎಂ. ಶಿವಣ್ಣ ಉಪ್ಪಾರ ಹಳ್ಳಿ ಗೇಟ್ ಬಳಿ ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿ­ಕೊಂಡರು. ಸಾರಿಮೇಗಲ­ಕೊಪ್ಪಲು ಕಾಮಧೇನು, ಮಹದೇಶ್ವರ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.ಉಪ್ಪಾರಹಳ್ಳಿ, ಕೋಟೆಬೆಟ್ಟ, ಬದರಿಕೊಪ್ಪಲು ಗ್ರಾಮಗಳ ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರು, ಲಿಂಗದವೀರರು ಎನ್‌. ರುದ್ರೇಶ್‌ ಪ್ರಸಾದ್‌ ಅವರ ವೀರಗಾಸೆ ನೃತ್ಯ ಹಾಗೂ ಜಾನಪದ ಕಲಾತಂಡ ಗಳೊಂದಿಗೆ ಪಟ್ಟಣದಾದ್ಯಂತ ವಿವೇಕಾನಂದರ ರಥವನ್ನು ಮೆರವಣಿಗೆ ನಡೆಸಲಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ವಿವೇಕಾನಂದರ ವೇಷಧಾರಿಗಳಾಗಿ ಗಮನ ಸೆಳೆದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅನಂತರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸಿ. ಮೋಹನ್‌ ಕುಮಾರ್, ತಹಶೀಲ್ದಾರ್ ಸಿ.ಎಂ. ಶಿವಣ್ಣ, ಸಂಸ್ಕೃತ ವಿದ್ವಾಂಸ ಸಿ.ಎ. ಭಾಸ್ಕರ ಭಟ್, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಬಿ. ಕುಮಾರ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಾ.ಪಾರ್ಥಸಾರಥಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಸುರೇಶ್, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎನ್.ಆರ್. ದೇವಾನಂದ್, ವಿಜಯ್‌ಕುಮಾರ್‌ ಹಾಜರಿದ್ದರು.ನೃತ್ಯಾಂಜಲಿ ಕಲಾನಿಕೇತನ ತಂಡ ಭರತನಾಟ್ಯ ಪ್ರದರ್ಶಿಸಿದರು.

ಪ್ರತಿಕ್ರಿಯಿಸಿ (+)