ಗುರುವಾರ , ಜನವರಿ 23, 2020
28 °C

‘ತಪಾಸಣೆ ವೇಳೆ ಕುಸಿದಿದ್ದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಮನೆಗೆಲಸ­ದವಳ ವೀಸಾ ಉಲ್ಲಂಘನೆ ಆರೋ­ಪ­­ದಲ್ಲಿ ಅಮೆರಿಕದ ಅಧಿಕಾರಿಗಳು ಕೈಕೋಳ ತೊಡಿಸಿ ಬಂಧಿಸಿದಾಗ ಹಾಗೂ ವಿವಸ್ತ್ರಗೊಳಿಸಿ ಒಳಾಂಗ­ಗಳನ್ನು ತಪಾಸಣೆ ಮಾಡಿದಾಗ ದುಃಖ­­ದಿಂದ ಕುಸಿದುಹೋಗಿದ್ದೆ’ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಹೇಳಿಕೊಂಡಿದ್ದಾರೆ.‘ರಾಜತಾಂತ್ರಿಕ ರಕ್ಷಣೆ ಇದ್ದರೂ ನನ್ನನ್ನು ಬಂಧಿಸಿ ಪೊಲೀಸ್‌ ಠಾಣೆ­ಯಲ್ಲಿ ಮಾದಕ ವಸ್ತು ವ್ಯಸನಿಗಳ ಜತೆ ಕೂಡಿಟ್ಟಿದ್ದರು. ಕೈಕೋಳ ತೊಡಿ­ಸಿ­ದಾಗ, ವಿವಸ್ತ್ರಗೊಳಿಸಿ ತಪಾ­ಸಣೆ ಮಾಡಿದಾಗ ನಾನು ಅನೇಕ ಸಲ ಕುಸಿದಿದ್ದೆ’ ಎಂದು ಭಾರ­ತದ ವಿದೇ­ಶಾಂಗ ಸಚಿವಾ­ಲಯಕ್ಕೆ ಕಳಿಸಿದ ಇ–ಮೇಲ್‌ನಲ್ಲಿ ಖೋಬ್ರಾಗಡೆ ತಿಳಿಸಿದ್ದಾರೆ.‘ಇಷ್ಟಾದರೂ ನಾನು ವಿಚಲಿತ­ಳಾಗಲಿಲ್ಲ. ನನ್ನೆಲ್ಲ ಸಹೋದ್ಯೋಗಿ­ಗಳು ಹಾಗೂ ನನ್ನ ದೇಶವನ್ನು ಆತ್ಮ­ವಿಶ್ವಾಸ ಮತ್ತು ಹೆಮ್ಮೆಯಿಂದ ಪ್ರತಿ­ನಿಧಿಸ­ಬೇಕು ಎಂಬ ಭಾವನೆಯಲ್ಲಿ ಸಮಾಧಾನಚಿತ್ತಳಾಗಿಯೇ ಇದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)