ಶುಕ್ರವಾರ, ಜನವರಿ 24, 2020
28 °C

‘ತ್ರಿಚಕ್ರ ಸೈಕಲ್ ಚಾಲನೆ, ಬದುಕಿಗೆ ಕೈ ಮಾತ್ರ ಆಸರೆ’

ಲೋಕೇಶ ಪಾಟೀಲ Updated:

ಅಕ್ಷರ ಗಾತ್ರ : | |

ಬೀದರ್‌: ನಗರದ ಬಾವರ್ಚಿಗಲ್ಲಿ ನಿವಾಸಿ ಜಮಿರೊದ್ದೀನ್‌ ಶೇಕ್‌ ಮೊಹಿಯೊದ್ದೀನ್‌ ಎರಡು ಕಾಲು ಮತ್ತು ಬಲಗೈ ಸ್ವಾಧೀನ ಕಳೆದುಕೊಂಡವರು. ಅವರ ದೇಹ ಮತ್ತು ಬದುಕು ಎರಡಕ್ಕೂ ಎಡಗೆೈಯೊಂದೇ ಆಸರೆ!ಶಿವನಗರ ಸಮೀಪದ ಬರೀದ್‌ ಶಾಹಿ ಉದ್ಯಾನದಲ್ಲಿಯೇ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.ಅಂಗವಿಕಲರಾಗಿದ್ದರೂ ಉದ್ಯಾನವನದ ಕಾವಲುಕಾಯುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಉದ್ಯಾನದ ಸ್ವಚ್ಛತೆ ಕುರಿತು ಗಮನಹರಿಸುವ ಕಾವಲು ಕೆಲಸದ ಜೊತೆಗೆ ಆಗಾಗ್ಗೆ ಟಿಕೆಟ್‌ ಹರಿಯುವ ಕೆಲಸವು ಇರುತ್ತದೆ. ಜಮಿರೊದ್ದೀನ್‌ಗೆ ಹುಟ್ಟಿನಿಂದ ಎರಡು ಕಾಲುಗಳಿಲ್ಲ. ಮೂರು ಗಾಲಿಯ ಸೈಕಲ್‌ ಇವರಿಗಿರುವ ಆಧಾರ. ಎಡಗೈ ಸುಸ್ಥಿತಿಯಲ್ಲಿ ಇರುವ ಕಾರಣ ಸೈಕಲ್‌ ಚಲಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಾರೆ.ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಉದ್ಯಾನದ ಕಾವಲುಕಾಯುವುದು.  ಈ ಕೆಲಸಕ್ಕಾಗಿ ಮಾಸಿಕ ರೂ. 2 ಸಾವಿರ ಸಂಬಳ. ಬದುಕು ಇದರಲ್ಲೇ ಸಾಗುತ್ತಿದೆ.ಈ ಮೊದಲು ಅಂಗವಿಕಲರರಿಗಾಗಿ ಇರುವ ಮಾಸಾಶನ ಬರುತ್ತಿತ್ತು. ಸಾಕಾಗುತ್ತಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಸೂಕ್ತ ಕೋರಿಕೆ ಅರ್ಜಿ ಸಲ್ಲಿಸಿದ್ದು, ಆಗಿನ ಜಿಲ್ಲಾಧಿಕಾರಿ ಹರ್ಷಗುಪ್ತಾ  ಅವರ ಕೃಪೆಯಿಂದ ಕೆಲಸ ಸಿಕ್ಕಿತು. ಮನೆಯಲ್ಲಿ ಬಡತನವಿದೆ. ಅಂಗವಿಕಲ ಆದರೂ ಅನ್ಯರಿಗೆ ಹೊರೆಆಗಬಾರದು ಎಂದು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಅದು ಅವರ ಆತ್ಮಸ್ಥೈರ್ಯದ ಮಾತು.

 

ಪ್ರತಿಕ್ರಿಯಿಸಿ (+)