ಶನಿವಾರ, ಜೂನ್ 19, 2021
23 °C

‘ದೀಪಧಾರಿ’ ಜಿಎಸ್‌ಎಸ್‌: ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯ ಕಾಲೇಜು 24 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಡಾ. ಜಿ.ಎಸ್‌. ಶಿವರುದ್ರಪ್ಪ ಅವರ ಸಾಹಿತ್ಯ ಕುರಿತ ರಾಜ್ಯಮಟ್ಟದ ಎರಡು ದಿನಗಳ ವಿಚಾರ ಸಂಕಿರಣ– ‘ದೀಪಧಾರಿ’ ಆಯೋಜಿಸಿದೆ. ಈವರೆಗೂ ಶಿವರಾಮಕಾರಂತ, ಪಂಪ, ಕುವೆಂಪು, ಪುತಿನ, ದ.ರಾ.ಬೇಂದ್ರೆ ಮುಂತಾದ ಸಾಹಿತಿಗಳ ಕುರಿತ ವಿಚಾರ ಸಂಕಿರಣವನ್ನು ಕಾಲೇಜು ಆಯೋಜಿಸಿತ್ತು. ಈ ವರ್ಷ ಜಿಎಸ್‌ಎಸ್‌ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಮತ್ತೆ ಮತ್ತೆ ಓದಿಸಿಕೊಳ್ಳುವ, ಹೊಸ ಹೊಳಹುಗಳು ಅಭಿವ್ಯಕ್ತಗೊಳ್ಳುವ ಶಕ್ತಿ ಅವರ ಸಾಹಿತ್ಯಕ್ಕೆ ಇದೆ. ಹೀಗಾಗಿ ಮತ್ತೊಮ್ಮೆ ಸಮಗ್ರವಾಗಿ ಹೊಸ ಆಲೋಚನೆಗಳಿಗೆ, ಅಧ್ಯಯನಕ್ಕೆ ಒಳಗು ಮಾಡಿಕೊಳ್ಳುವ ಉದ್ದೇಶದಿಂದ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಗುರುವಾರ ಬೆಳಿಗ್ಗೆ 10ಕ್ಕೆ ಡಾ. ಗಿರಡ್ಡಿ ಗೋವಿಂದರಾಜ ಅವರಿಂದ ಉದ್ಘಾಟನೆ. ಅತಿಥಿ– ಡಾ. ಎಚ್‌.ಎಸ್‌. ವೆಂಕಟೇಶ ಮೂರ್ತಿ. ಕೃತಿ ಲೋಕಾರ್ಪಣೆ ಹಾಗೂ ಪರಿಚಯ– ಡಾ. ಬೈರಮಂಗಲ ರಾಮೇಗೌಡ. ಅತಿಥಿ– ವೈ.ವಿ. ಗುಂಡೂರಾವ್‌. ಅಧ್ಯಕ್ಷತೆ– ಪ್ರೊ. ಡಿ.ಎನ್‌. ವೆಂಕಟರಾವ್‌.ಗೋಷ್ಠಿ–1: ಮಹಾಬಲಮೂರ್ತಿ ಕೊಡ್ಲೆಕೆರೆ ಅವರಿಂದ ‘ಜಿಎಸ್‌ಎಸ್‌: ರಮ್ಯ ಕವನಗಳು’ ಹಾಗೂ ಡಾ. ವಿಕ್ರಮ ವಿಸಾಜಿ ಅವರಿಂದ ‘ಜಿಎಸ್‌ಎಸ್‌: ರಮ್ಯೋತ್ತರ ಕವನಗಳು’. ಬೆಳಿಗ್ಗೆ 10.30.  ಗೋಷ್ಠಿ–2: ಡಾ. ಕೆ.ಎಸ್‌. ಪವಿತ್ರಾ, ಬಿ.ಆರ್‌.ಲಕ್ಷ್ಮಣರಾವ್‌, ಡಾ. ತಾರಿಣಿ ಶುಭದಾಯಿನಿ ಹಾಗೂ ಡಾ. ಎಲ್‌. ಹನುಮಂತಯ್ಯ ಅವರಿಂದ  ಕಾವ್ಯವಾಚನ. ಮಧ್ಯಾಹ್ನ 2.30. ಶುಕ್ರವಾರ

ಗೋಷ್ಠಿ–3: ಡಾ. ಓ.ಎಲ್‌. ನಾಗಭೂಷಣಸ್ವಾಮಿ ಹಾಗೂ ಡಾ. ರಹಮತ್‌ ತರೀಕೆರೆ ಅವರಿಂದ ‘ಜಿಎಸ್‌ಎಸ್‌ ಗದ್ಯ’. ಬೆಳಿಗ್ಗೆ 10.ಗೋಷ್ಠಿ–4: ಡಾ. ಎಂ.ಎಸ್‌. ಆಶಾದೇವಿ ಹಾಗೂ ಡಾ. ಚಂದ್ರಶೇಖರ ನಂಗಲಿ ಅವರಿಂದ ‘ಜಿಎಸ್‌ಎಸ್‌ ಅವರ ಪ್ರಾಚೀನ ಹಾಗೂ ಆಧುನಿಕ ಕನ್ನಡ ಕಾವ್ಯ ವಿಮರ್ಶೆ’ ವಿಷಯ ಕುರಿತು ಚರ್ಚೆ. ಬೆಳಿಗ್ಗೆ 11.45. 

ಗೋಷ್ಠಿ–5: ಡಾ. ಎಸ್‌. ನಟರಾಜ್‌ ಬೂದಾಳು ಹಾಗೂ ಡಾ. ಚಿಂತಾಮಣಿ ಕೂಡ್ಲೆಕೆರೆ ಅವರಿಂದ ಜಿಎಸ್‌ಎಸ್‌ ಅವರ ಸೌಂದರ್ಯ ಸಮೀಕ್ಷೆ ಹಾಗೂ ಪ್ರವಾಸ ಸಾಹಿತ್ಯ ಕುರಿತು ಮಾತು. ಮಧ್ಯಾಹ್ನ 2.30.ಸಂಜೆ 4ಕ್ಕೆ ಸಮಾರೋಪ ಸಮಾರಂಭ. ಡಾ. ಸಿದ್ಧಲಿಂಗಯ್ಯ ಅವರಿಂದ ಸಮಾರೋಪ ಭಾಷಣ. ಅತಿಥಿ– ಡಾ. ಹೊನ್ನು ಸಿದ್ಧಾರ್ಥ, ಪ್ರೊ. ಬಿ.ವಿ. ನಾರಾಯಣರಾವ್‌. ಅಧ್ಯಕ್ಷತೆ– ಪ್ರೊ. ಆರ್‌.ವಿ. ಪ್ರಭಾಕರ.

ಸ್ಥಳ: ವಿಜಯ ಕಾಲೇಜು, ಜಯನಗರ 4ನೇ ಹಂತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.