ಮಂಗಳವಾರ, ಜೂನ್ 15, 2021
23 °C

‘ನಾಟಕ ಕ್ಷೇತ್ರದಲ್ಲಿ ಕಂದಗಲ್‌ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಳೇದಗುಡ್ಡ: ರಂಗಭೂಮಿ ಕ್ಷೇತ್ರದಲ್ಲಿ ಕಂದಗಲ್ ಹನಮಂತರಾಯರ ಕೊಡುಗೆ ಅಪಾರವಾದುದು ಎಂದು ದೇವಾಂಗ ಸಮಾಜದ ಅಧ್ಯಕ್ಷ ಅಮಾತೆಪ್ಪ ಕೊಪ್ಪಳ ಹೇಳಿದರು.ಬನಶಂಕರಿ ದೇವಿ ಜಾತ್ರೆಯ ನಿಮಿತ್ತ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆದಿಶಕ್ತಿ ಅರವಿಂದ ಕೃಪಾಪೋಷಿತ ನಾಟಕ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ಕಂದಗಲ್ ಹನಮಂತರಾ ಯರು ರಚಿಸಿದ ಅದ್ಭುತ ರಾಮಾಯಣ ಎಂಬ ಪೌರಾಣಿಕ ನಾಟಕ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೌರಾಣಿಕ ನಾಟಕ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ಮುರುಘಾಮಠದ ಕಾಶೀನಾಥ ಸ್ವಾಮೀಜಿ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

ಅತಿಥಿಗಳಾಗಿ ಸಂಘದ ಅಧ್ಯಕ್ಷ ಶಂಕ್ರಪ್ಪ ಹಾನಾಪೂರ, ಕುಬೇರಪ್ಪ ರೂಡಗಿ, ಹನಮಂತಪ್ಪ ಚಂದರಗಿ, ಮೇಘರಾಜ ಮುಳಗುಂದ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶಂಕರ ರೂಡಗಿ ಸ್ವಾಗತಿಸಿದರು.ಕೃತಿ ಲೋಕಾರ್ಪಣೆ

ಮಹಾಲಿಂಗಪುರ: ‘ಸಾಹಿತ್ಯದ ಪ್ರಕಾರಗಳಲ್ಲಿ ನಾಟಕಕ್ಕೆ ವಿಶೇಷವಾದ ಸ್ಥಾನವಿದ್ದು ಉಳಿದೆಲ್ಲ ಪ್ರಕಾರಗಳಲ್ಲಿ ಏಕತಾನತೆ ಇರುತ್ತದೆ. ನಾಟಕಗಳಲ್ಲಿ ನವರಸಗಳು ತುಂಬಿರುವುದರಿಂದ ಜನರನ್ನು ಅತ್ಯಂತ ಪ್ರಭಾವಿಯಾಗಿ ತಲುಪುವ ಮಾಧ್ಯಮವಾಗಿ ರಂಗಭೂಮಿ ಗುರುತಿಸಲ್ಪಟ್ಟಿದೆ’ ಎಂದು ಚಿಕ್ಕೂರಿನ ಸಾಯಿ ಸ್ಕೂಲ್ ಅಧ್ಯಕ್ಷ ವೆಂಕಟೇಶ ಕಾಮತ ಹೇಳಿದರು.ಸ್ಥಳೀಯ ಸಾಯಿ ಸೇವಾ ಸಂಸ್ಥೆಯ 21ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರೊ.ಬಿ.ಎಚ್. ಮಾರದ ರಚಿಸಿದ ‘ಸಾಯಿಸೇವೆ’ ನಾಟಕ ಕೃತಿಯನ್ನು ಲೋಕಾರ್ಪಣೆ­ಗೊಳಿಸಿ ಅವರು ಮಾತನಾಡಿದರು. ಶಾಲಾ ಮಟ್ಟಗಳಲ್ಲಿ ನಾಟಕಗಳ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ಅವರು ಅಭಿಪ್ರಾಯ ಪಟ್ಟರು.ರಂಗಕರ್ಮಿ ವಿಷ್ಣು ಬಡಿಗೇರ ನಿರ್ದೇಶನದಲ್ಲಿ ಪ್ರೋ.ಬಿ.ಎಚ್. ಮಾರದ ರಚಿಸಿದ ‘ನಾಮಸ್ಮರಣೆ’ ನಾಟಕವನ್ನು ಬಾಲ ವಿಕಾಸ ಮಕ್ಕಳು ಪ್ರದರ್ಶಿಸಿದರು. ಸಿ.ಎಂ. ಕಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ ಬಡಿಗೇರ ನಿರ್ವಹಿಸಿದರು. ಜಿಲ್ಲೆಯ ಎಲ್ಲ ಭಾಗಗಳಿಂದ ಆಗಮಿಸಿದ್ದ ಸಾಯಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಮಾಡಿದರು.ಜಿಲ್ಲಾಸಾಯಿ ಸಮಿತಿ ಅಧ್ಯಕ್ಷ ಎಚ್.ವೈ. ಸಿಕ್ಕೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದೆರು, ಮುದ್ದೇನಹಳ್ಳಿಯ ಸಾಯಿ ಸ್ಕೂಲ್ ವಿಶ್ರಾಂತ ಪ್ರಾಚಾರ್ಯ ಎಚ್.ಎಸ್. ದ್ವಾರಕಾನಾಥ, ಎಂ.ಎಸ್. ಕಾಜಗಾರ ಹಾಗೂ ಕಂಕನವಾಡಿಯ ಮಾರುತಿ ಶರಣರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.