ಬೆಂಗಳೂರು: ‘ಗದ್ಯ ಹಾಗೂ ಪದ್ಯದ ಲಯ ವಿಭಿನ್ನವಾದುದು. ಗದ್ಯದ ಲಯ ನಡಿಗೆಯದ್ದು. ಪದ್ಯದ ಲಯ ನರ್ತನದ್ದು. ಪದ್ಯ ಮಯೂರ ನೃತ್ಯ ಇದ್ದಂತೆ’ ಎಂದು ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಬಣ್ಣಿಸಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಆಶ್ರಯದಲ್ಲಿ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ 11ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ‘ಅನುರಣನ–ಮರೆಯಲಾಗದ ಮಹನೀಯರು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸುಗಮ ಸಂಗೀತ ವಿಶಿಷ್ಟವಾದುದು. ಸುಗಮ ಸಂಗೀತದ ಮೂಲಕ ಉತ್ತಮ ಕವಿತೆಗಳು ಜನರನ್ನು ತಲುಪಿದವು’ ಎಂದು ಅವರು ಹೇಳಿದರು.
ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ‘ಜಿ.ಎಸ್.ಶಿವರುದ್ರಪ್ಪ ಅವರ ‘ಯಾವುದೀ ಪ್ರವಾಹ’ ಗೀತೆಯು ಸಮಾಜದಲ್ಲಿ ಹೊಸ ವೈಚಾರಿಕ ಕ್ರಾಂತಿಗೆ ಕಾರಣವಾಯಿತು’ ಎಂದರು.

ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಮತ್ತು ಮಾಲತಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.ಸುಗಮ ಸಂಗೀತ ಕಾವ್ಯ ಗಾಯನ, ಕಾವ್ಯ
ಪರಂಪರೆ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿದ ಮಹನೀಯರನ್ನು ಕಾರ್ಯಕ್ರಮದಲ್ಲಿ ನೆನಪಿಸಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.