ಬುಧವಾರ, ಜನವರಿ 26, 2022
25 °C

‘ಪೀಪಲ್ಸ್‌ ಚಾಯ್ಸ್‌’ ಅಂತಿಮ ಸುತ್ತಿಗೆ ಕನ್ನಡಿಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಡನ್‌ನ ವೈಲ್ಡ್‌­ಲೈಫ್‌ ಫೋಟೋ­ಗ್ರಾ­ಫರ್‌ ಆಫ್‌ ದ ಇಯರ್‌ ಡಾಟ್‌ ಕಾಂ ನಡೆ­­ಸುವ ‘ಪೀಪಲ್ಸ್‌ ಚಾಯ್ಸ್‌’ ಪ್ರಶ­ಸ್ತಿಯ ಅಂತಿಮ ಸುತ್ತಿಗೆ ಶೃಂಗೇ­ರಿಯ ಎಸ್‌.ಎಸ್‌. ರವಿ­ಪ್ರಕಾಶ್‌ ಅವರ  ‘ಪ್ಯೂರ್‌ ಮ್ಯಾಜಿಕ್’ ಶೀರ್ಷಿ­ಕೆಯ ಛಾಯಾಚಿತ್ರ ಆಯ್ಕೆ­ಯಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಬಿಬಿಸಿ ಮತ್ತು ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಸಹಭಾಗಿತ್ವ ವಹಿಸಿವೆ.ವಿಶ್ವದ 96 ದೇಶದ ಸುಮಾರು 42 ಸಾವಿ­ರಕ್ಕೂ ಹೆಚ್ಚು ಪ್ರವೇಶಗಳು ಬಂದಿದ್ದು, ರವಿಪ್ರಕಾಶ್‌ ಅವರು ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಭಾರತೀಯ.ಅಂತಿಮ ಸುತ್ತಿಗೆ ಆಯ್ಕೆಯಾದ 50 ಛಾಯಾ­ಚಿತ್ರಗಳನ್ನು ಆನ್‌ಲೈನ್‌ ಮತ­ದಾ­­ನದ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡ­ಲಾಗುತ್ತದೆ. ಸೆಪ್ಟೆಂಬರ್‌ 5ರ­ವ­ರೆಗೆ ಆನ್‌ಲೈನ್‌ ಮತದಾನಕ್ಕೆ ಅವ­ಕಾ­ಶ­ವಿ­­ದೆ.   

www.nhm.ac.uk/visitus/wpy/co­m­munity/peoplescho­i­ce/20­14/­33/ puremagic.html

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.