ಶನಿವಾರ, ಫೆಬ್ರವರಿ 27, 2021
27 °C
ಪಂಚರಂಗಿ

‘ಬಾಂಜೊ’ ಚಿತ್ರೀಕರಣದಲ್ಲಿ ರಿತೇಶ್‌, ನರ್ಗೀಸ್‌ ಬ್ಯುಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಾಂಜೊ’ ಚಿತ್ರೀಕರಣದಲ್ಲಿ ರಿತೇಶ್‌, ನರ್ಗೀಸ್‌ ಬ್ಯುಸಿ

ಬಾಲಿವುಡ್‌ ನಟ ರಿತೇಶ್‌ ದೇಶಮುಖ್‌ ಮತ್ತು ನಟಿ ನರ್ಗಿಸ್‌ ಫಕ್ರಿ ತೆರೆ ಹಂಚಿಕೊಳ್ಳಲಿರುವ ‘ಬಾಂಜೊ’ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಮರಾಠಿ ನಿರ್ದೇಶಕ ರವಿ ಜಾಧವ್‌ ಈ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.ತಮ್ಮ ಹೊಸ ಚಿತ್ರ ಪ್ರಾರಂಭವಾದ ಖುಷಿಯನ್ನು ರಿತೇಶ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘‘ಬಾಂಜೊ’ ಚಿತ್ರೀಕರಣ ಶುರು..’ ಎಂದು ಅವರು ಖುಷಿಯಿಂದ ಟ್ವೀಟ್‌ ಮಾಡಿದ್ದಾರೆ.ಇದಕ್ಕೂ ಮುನ್ನ ನಿರ್ದೇಶಕ ಜಾಧವ್‌ ಸಿನಿಮಾದ ಮುಹೂರ್ತದ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ‘ನನ್ನ ಮೊದಲ ಸಿನಿಮಾ ‘ಬಾಂಜೊ’ದ ಮುಹೂರ್ತ ಸಂದರ್ಭ. ಇದು ನನ್ನ ನಾಲ್ಕು ವರ್ಷದ ಶ್ರಮ’ ಎಂಬ ಅಡಿಟಿಪ್ಪಣಿಯನ್ನೂ ಅವರು ಕೊಟ್ಟಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.