ಶನಿವಾರ, ಜನವರಿ 18, 2020
21 °C
ಹೋಬಳಿ ಮಟ್ಟದ ಬೇಡ ಜಂಗಮರ ಸಮಾವೇಶ

‘ಬೇಡ ಜಂಗಮರು ಸಂಘಟಿತರಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾವಗಲ್‌: ‘ಬೇಡ ಜಂಗಮ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅಗತ್ಯ’ ಎಂದು ಅರಸೀಕೆರೆ ತಾಲ್ಲೂಕು ಬೇಡ ಜಂಗಮ ಸಮಾಜ ಅಧ್ಯಕ್ಷ ಕಲ್ಲಸಾದರಹಳ್ಳಿ ಚಂದ್ರಶೇಖರ್‌ ತಿಳಿಸಿದರು.ಜಾವಗಲ್‌ ಸಮೀಪದ ಮಾವುತನಹಳ್ಳಿಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಬೇಡ ಜಂಗಮರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಾಜದ ತಾಲ್ಲೂಕು ಕಾರ್ಯದರ್ಶಿ ತರುಣದೇವ್‌, ಗೌರವಾಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷ ಸಿದ್ದಯ್ಯ ಮಾತನಾಡಿದರು.ಪದಾಧಿಕಾರಿಗಳ ನೇಮಕ: ಜಾವಗಲ್‌ ಹೋಬಳಿ ಬೇಡ ಜಂಗಮ ಸಮಾಜ ಸಂಘವನ್ನು ರಚಿಸಲಾಯಿತು. ಮೂಡನಹಳ್ಳಿ ಮರುಳಸಿದ್ದಯ್ಯ (ಗೌರವಾಧ್ಯಕ್ಷ), ಜಾವಗಲ್‌ ಲೋಕೇಶ್‌ (ಅಧ್ಯಕ್ಷ), ಕುರಾದಹಳ್ಳಿ ಗುರುಸ್ವಾಮಿ (ಕಾರ್ಯದರ್ಶಿ), ಕುಮಾರಸ್ವಾಮಿ (ಉಪಾಧ್ಯಕ್ಷ), ರಘು (ಪ್ರಧಾನ ಕಾರ್ಯದರ್ಶಿ), ರುದ್ರೇಶ್ (ಸಹಕಾರ್ಯದರ್ಶಿ), ಶಿವ ಮೂರ್ತಿ, ಪಂಚಾಕ್ಷರಯ್ಯ (ವಕ್ತಾರರು).

ಪ್ರತಿಕ್ರಿಯಿಸಿ (+)