ಸೋಮವಾರ, ಮಾರ್ಚ್ 1, 2021
25 °C

‘ಭ್ರಷ್ಟಾಚಾರಕ್ಕೆ ನಲುಗಿದ ಭಾರತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭ್ರಷ್ಟಾಚಾರಕ್ಕೆ ನಲುಗಿದ ಭಾರತ’

ಬೆಂಗಳೂರು: ‘ಅಖಂಡತೆ, ಐಕ್ಯತೆ ಎತ್ತಿ ಹಿಡಿದ ನಾಯಕರು ಬಾಳಿದ  ರಾಷ್ಟ್ರದಲ್ಲಿ ಅಭದ್ರತೆ, ಅಶಾಂತಿ, ಜಾತೀಯತೆ, ಭ್ರಷ್ಟತೆಯಿಂದ ನಾವೆಲ್ಲರೂ ನಲುಗಿ ಹೋಗಿದ್ದೇವೆ’ ಎಂದು ಜಾನಪದ ತಜ್ಞ ಗೊ.ರು.ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.ನೇತಾಜಿ ಸುಭಾಷಚಂದ್ರ ಬೋಸ್‌ ಅಭಿವೃದ್ದಿ ಮತ್ತು ಸಂಶೋಧನಾ ಟ್ರಸ್ಟ್ ವತಿಯಿಂದ ರಾಜರಾಜೇಶ್ವರಿನಗರದ ಸುಭಾಷ್‌ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಭಾಷಚಂದ್ರ ಬೋಸ್‌ 120ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ನೈತಿಕತೆ ಕುಂದಿದೆ. ಜನ ಸಾಮಾನ್ಯರು ಬಳಲಿ ಬೆಂಡಾಗಿದ್ದಾರೆ. ನಿಜವಾದ ಸ್ವಾತಂತ್ರ್ಯ ನಮಗೆ ಸಿಕ್ಕಿಲ್ಲ.  ಈವರೆಗೆ ನಮ್ಮನ್ನಾಳುವ ದೊರೆಗಳು, ಅಧಿಕಾರಿಗಳು ಅವರ ಸ್ವಾರ್ಥಕ್ಕೋಸ್ಕರ ನಮ್ಮನ್ನು ಬಳಸಿಕೊಂಡು ಕಸದಂತೆ ಬಿಸಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಬ್ರಿಟಿಷ್‌ರಿಗಿಂತ ನಮ್ಮವರು ಮೂರು ಪಟ್ಟು ಭ್ರಷ್ಟತೆ, ಅನ್ಯಾಯದಲ್ಲಿ ತೊಡಗಿದ್ದಾರೆ. ರಾಷ್ಟ್ರದಲ್ಲಿ ಜಾತೀಯತೆ, ಕೋಮುವಾದ, ಭಯೋತ್ಪಾದನೆ ಹೆಚ್ಚಾಗಿದೆ. ಇದರ ವಿರುದ್ಧ ಹೋರಾಡಲು ಪ್ರಗತಿಪರ ಚಿಂತಕರು, ಸಾಹಿತಿಗಳು, ಯುವಹೋರಾಟಗಾರರು, ದೇಶಪ್ರೇಮಿಗಳು ಸೈನಿಕರಂತೆ ಮುಂದೆ ಬರಬೇಕಾಗಿದೆ’ ಎಂದು ಕರೆ ನೀಡಿದರು.‘ನೇತಾಜಿ ಹೋರಾಟದ ಅರಿವು ಮೂಡಿಸಲು ರಾಷ್ಟ್ರದಲ್ಲೇ ರಾಜರಾಜೇಶ್ವರಿ ನಗರದಲ್ಲಿ ಏಳು ಎಕರೆ ಪ್ರದೇಶದಲ್ಲಿ ಸುಭಾಷ ಭವನ, ಸಂಶೋಧನಾ ಟ್ರಸ್ಟ್‌ ಪ್ರಾರಂಭಿಸಲಾಗಿದೆ’ ಎಂದು  ಟ್ರಸ್ಟ್‌ನ ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಎಂ.ರಾಜ್‌ಕುಮಾರ್‌  ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.