ಬುಧವಾರ, ಜನವರಿ 22, 2020
16 °C

‘ಮೌಢ್ಯತೆ ನಿರ್ಮೂಲನೆ ಕಾಯ್ದೆ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು: ಸಮಾಜದಲ್ಲಿ ಮನೆಮಾಡಿರುವ ಮೌಢ್ಯ ಸಂಪ್ರದಾಯಗಳಿಗೆ ಕಡಿವಾಣ ಹಾಕಲು ಸರ್ಕಾರ ಕಾಯ್ದೆ ಜಾರಿಗೆ ತರುಬೇಕು. ಇದು ಇಂದಿನ ಅಗತ್ಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಹೇಳಿದರು.ಭಾನುವಾರ ಡಾ. ಬಿ.ಆರ್‌. ಅಂಬೇಡ್ಕರ್‌ ಮಹಾಪರಿನಿರ್ವಾಣ ಅಂಗವಾಗಿ ಆಯೋಜಿಸಿದ್ದ ಮೌಢ್ಯ ಕಂದಾಚಾರ ನಿಷೇಧ ಕಾಯ್ದೆ ಕುರಿತ ವಿಚಾರಣ ಸಂಕಿರಣ  ಉದ್ಘಾಟಿಸಿ ಮಾತನಾಡಿ, ಶರಣರು, ಸಂತರು, ದಾರ್ಶನಿಕರು ನಡೆದಾಡಿದ ನೆಲದಲ್ಲಿ ವೈಚಾರಿಕ ಕ್ರಾಂತಿಗಳು ನಡೆಯುತ್ತಲೆ ಬಂದಿವೆ. ಅದೇ ನೆಲದಿಂದ ಮೌಢ್ಯತೆಗಳ ನಿರ್ಮೂಲನ ಕಾಯ್ದೆ ಕುರಿತು ಚಿಂತನೆ ನಡೆದಿರುವುದು ಸ್ವಾಗತಾರ್ಹ ಎಂದರು.ವಿಚಾರವಾದಿ ಲಾಲಹುಸೇನ್‌ ಕಂದಗಲ್ಲ ಮಾತನಾಡಿ, ವಿವಿಧ ಸಂಸ್ಕೃತಿ ಈ ದೇಶದಲ್ಲಿ ಎಲ್ಲ ಸಮುದಾಯಕ್ಕೆ ಅನ್ವಯವಾಗುವ ಸಂವಿಧಾನ ನೀಡಿರುವ ಅಂಬೇಡ್ಕರ್‌ ಅವರು ಅಧ್ಯಯನಶೀಲರು. ಅಂಥ ಮೇಧಾವಿ ಭಾವಚಿತ್ರ ಪೂಜೆ ಮಾಡುವುದರಿಂದ ಅವರ ಸಿದ್ಧಾಂತ ಅನುಷ್ಠಾನ ಸಾಧ್ಯವಿಲ್ಲ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಆಚರಣೆಗಳಿಗೆ ಮೌಲ್ಯ ಬರುತ್ತದೆ ಎಂದರು.ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಮಾತನಾಡಿ, ಯಾವುದೇ ವೈಚಾರಿಕ ವಿಚಾರಗಳು ಅನುಷ್ಠಾನಗೊಳ್ಳಬೇಕಾದರೆ ಅಕ್ಷರ ಕ್ರಾಂತಿಗೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನ ವೃದ್ಧಿಯಿಂದ ಮೌಢ್ಯತೆಗಳನ್ನು ನಿವಾರಿಸಬಹುದು ಎಂದು ಹೇಳಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಸಂಚಾಲಕ ಪ್ರಭುಲಿಂಗ ಮೇಗಳಮನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ರುದ್ರಪ್ಪ ಕಂದಗಲ್ಲ.  ಎಪಿಪಿ ಹಯ್ಯಾಳಪ್ಪ ಬಳಬಟ್ಟಿ. ವಿವಿಧ ಸಂಘಟನೆಗಳ ಮುಖಂಡರಾದ ದುರುಗಪ್ಪ ಸೋಮನಮರಡಿ, ಶಿವಯೋಗಪ್ಪ, ಹರೀಶ ರಾಠೋಡ, ಪ್ರಕಾಶ ಕೆಲ್ಲೂರು, ಗೀತಾದೇವಿ ರಾಠೋಡ, ಹೊನ್ನಪ್ಪ, ಶಿವಗ್ಯಾನಿ, ವೆಂಕಟೇಶ, ಶರಣಪ್ಪ ದಿನ್ನಿ, ಯಂಕಣ್ಣ ಚಿತ್ತಾಪುರ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)