ಭಾನುವಾರ, ಜೂನ್ 13, 2021
29 °C

‘ಯುವರಾಜ್‌ ತಂಡದಲ್ಲಿರಬೇಕಿತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಐಪಿಎಲ್‌ 7ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರನ್ನು ಖರೀದಿಸಲು ಮುಂದಾಗಿದ್ದೆವು. ಆದರೆ ಅವರ ಬೆಲೆ ಹೆಚ್ಚಾಗಿದ್ದರಿಂದ ನಾವು ಬಿಡ್‌ನಿಂದ ಹಿಂದೆ ಸರಿದೆವು. ಅವರು ತಂಡದಲ್ಲಿ ಇರಬೇಕಾಗಿತ್ತು’ ಎಂದು ಕಿಂಗ್ಸ್‌ ಇಲೆವನ್‌ ಪಂಜಾಬ್ ತಂಡದ ಸಹಾಯಕ ಕೋಚ್‌ ಸಂಜಯ್‌ ಬಂಗಾರ್‌ ಅಭಿಪ್ರಾಯಪಟ್ಟಿದ್ದಾರೆ.‘ನಾವು ಹರಾಜಿನ ವೇಳೆ ಯುವರಾಜ್‌ ಅವರನ್ನು ಖರೀದಿಸಿ  ಅವರನ್ನು ಮರಳಿ ತಂಡಕ್ಕೆ ಕರೆತರಲು  ಉತ್ಸುಕರಾಗಿದ್ದೆವು. ಆದರೆ ಅವರ ಬೆಲೆ ಭಾರಿ ಪ್ರಮಾಣದಲ್ಲಿ ಏರಿತು. ನಾವು ಯುವಿಗೆ ಅಷ್ಟು ಮೊತ್ತ ನೀಡಿ ಖರೀದಿಸುವ ಸ್ಥಿತಿಯಲ್ಲಿರಲಿಲ್ಲ. ಅವರು ಈಗ ಆರ್‌ಸಿಬಿ ತಂಡದ ಪಾಲಾಗಿದ್ದು, ಅವರಿಗೆ ಶುಭ ಹಾರೈಸುತ್ತೇನೆ’ ಎಂದು ಅವರು ಹೇಳಿದ್ದಾರೆ.‘ಆಸೀಸ್‌ ವೇಗಿ ಮಿಷೆಲ್‌ ಜಾನ್ಸನ್‌ ತಂಡದಲ್ಲಿರುವುದರಿಂದ ನಾವು ಸಂತಸಗೊಂಡಿದ್ದೇವೆ. ಅವರ ಅಂತರರಾಷ್ಟ್ರೀಯ ಅನುಭವ ತಂಡದ ನೆರವಿಗೆ ಬರಲಿದೆ. ನಾವು ಬಯಸ್ಸಿದ್ದ  ಸಮರ್ಥ ವೇಗದ ಬೌಲರ್‌ನ ಸ್ಥಾನವನ್ನು  ಅವರು ತುಂಬಲಿದ್ದಾರೆ ಎಂಬ ವಿಶ್ವಾಸವಿದೆ.  ಜಾನ್ಸನ್‌ ಇರುವ ಕಾರಣ ತಂಡ ಸಮತೋಲನವನ್ನು ಕಾಯ್ದುಕೊಂಡಿದೆ’  ಎಂದು ಬಂಗಾರ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.