ಕೋಟ (ಬ್ರಹ್ಮಾವರ): ೨೦೨೦ ರ ವೇಳೆ ಭಾರತ ಜಗತ್ತಿನಲ್ಲಿ ಪ್ರಬಲಶಕ್ತಿಯಾಗಿ ಬೆಳೆಯಲಿದೆ. ಇದು ನಿಜವಾಗಬೇಕಾದಲ್ಲಿ ಇಂದಿನ ಯುವಶಕ್ತಿ ದುಡಿಯುವ ಮನಸ್ಸು ಮತ್ತು ಕಾಯಕವನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಸ್ರೂರು ಶಾರದಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಧಾಕೃಷ್ಣ ಶೆಟ್ಟಿ ಹೇಳಿದರು.

ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಯುವಜನತೆಗೆ ಇದು ಸಾಧಿಸುವ ವಯಸ್ಸು. ಆದ್ದರಿಂದ ಉದ್ಯೋಗ ಸಂಬಂಧಿ ಕೌಶಲಗಳನ್ನು ಬೆಳೆಸಿಕೊಂಡು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಲ್ಲಿ ಮತ್ತು ಈ ನಿಟ್ಟಿನಲ್ಲಿ ಮನಸ್ಸಿನ ಮೇಲೆ ಹಿಡಿತ ಸಾಧಿಸಿದಲ್ಲಿ ಯುವಶಕ್ತಿ ಸಮಾಜಮುಖಿಯಾಗಬಲ್ಲದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಯೋಗಾನಂದ ಮಾತನಾಡಿ, ಇಂದು ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜನರ ವಿಶ್ವಾಸಗಳಿಸಿರುತ್ತವೆ. ಶಿಕ್ಷಣಕ್ಕೆ ಮಾನವೀಯ ಮುಖವಿರಬೇಕು. ಮಾನವೀಯ ಸಂಬಂಧಗಳನ್ನು ಬೆಳೆಸಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಬೇಕೆಂದರು.

ಯುವ ಉದ್ಯಮಿ ಗೀತಾನಂದ ಟ್ರಸ್ಟ್ನ ಪ್ರಶಾಂತ್ ಎ. ಕುಂದರ್, ಗುತ್ತಿಗೆದಾರ ಎಂ.ಅರುಣ್ಕುಮಾರ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಹೆಚ್.ಕುಂದರ್, ಭಾಸ್ಕರ್ ಶೆಟ್ಟಿ, ವಿಜಯ್ಕುಂದರ್, ಪ್ರೌಢಶಾಲಾ ಮುಖ್ಯಸ್ಥ ಪ್ರಕಾಶ್ ಹೆಬ್ಬಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ್, ಉಪಾಧ್ಯಕ್ಷೆ ರೇಖಾ ಸಿ.ಎಸ್, ಕಾರ್ಯದರ್ಶಿ ಪ್ರಕಾಶ್ ಕುಂದರ್, ಜೊತೆಕಾರ್ಯದರ್ಶಿ ಸುಚಿತ್ರಾ ಉಪಸ್ಥಿತರಿದ್ದರು.

ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾಲೇಜಿನಲ್ಲಿ ಸೇವೆಸಲ್ಲಿಸಿ ಪ್ರಸ್ತುತ ಶಂಕರನಾರಾಯಣ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಉದಯಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಕೆಂಜೂರು ವಸಂತರಾಜ್ ಶೆಟ್ಟಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.ಡಾ.ರಾಜೇಂದ್ರ ಎಸ್. ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ. ರೇಖಾ ಸಿ.ಎಸ್ ವಂದಿಸಿದರು. ನಿಖಿಲ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಕೋಟ ಗ್ರಾ.ಪಂ. ಅಧ್ಯಕ್ಷ ಶಿವಪೂಜಾರಿ ಧ್ವಜಾರೋಹಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.