ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ₨20 ಸಾವಿರ ಕೋಟಿ ರಫ್ತು ವಹಿವಾಟು ಗುರಿ ತಲುಪಲು ತಯಾರಿಕಾ ವಲಯಕ್ಕೆ ಗರಿಷ್ಠ ಉತ್ತೇಜನ ನೀಡುವ ಅಗತ್ಯ ಇದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ ಹೇಳಿದ್ದಾರೆ. ಒಟ್ಟಾರೆ ರಫ್ತು ವಹಿವಾಟಿನಲ್ಲಿ ತಯಾರಿಕಾ ವಲಯದ ಪಾಲು ಶೇ 75ರಷ್ಟಿದೆ. ಆದರೆ, ಇತ್ತೀಚಿನ ತಿಂಗಳುಗ ಳಲ್ಲಿ ತಯಾರಿಕಾ ವಲಯದ ಪ್ರಗತಿ ಗಣನೀಯವಾಗಿ ಕುಸಿದಿದೆ.

ಜಾಗತಿಕ ಮಾರುಕಟ್ಟೆ ಅನಿಶ್ಚಿತತೆಯಿಂದ ರಫ್ತುದಾ ರರು ಸಹ ಸವಾಲು ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ತಯಾರಿಕಾ ವಲಯದ ಪ್ರಗತಿ ಅಕ್ಟೋಬರ್ನಲ್ಲಿ ಶೇ 2ಕ್ಕೆ ಕುಸಿತ ಕಂಡಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು ಶೇ 9.9ರಷ್ಟಿತ್ತು. ಏಪ್ರಿಲ್–ನವೆಂಬರ್ ಅವಧಿಯಲ್ಲಿ ರಫ್ತು ಶೇ 6.27ರಷ್ಟು ಹೆಚ್ಚಿದ್ದು, ₨12.64 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

₨18.84 ಲಕ್ಷ ಕೋಟಿ ಆಮದು ವಹಿ ವಾಟು ದಾಖಲಾಗಿದೆ. ಇದರಿಂದ ವಿತ್ತೀಯ ಕೊರತೆ ₨6.2 ಲಕ್ಷ ಕೋಟಿಗೆ ತಗ್ಗಿದೆ ಎಂದರು. ‘ತಯಾರಿಕಾ ವಲಯದ ಕೊಡುಗೆ ಯನ್ನು ‘ಜಿಡಿಪಿ’ಯ ಶೇ 25ಕ್ಕೆ ಹೆಚ್ಚಿ ಸಲು ಕೇಂದ್ರ ಸರ್ಕಾರ ‘ರಾಷ್ಟ್ರೀಯ ತಯಾರಿಕಾ ನೀತಿಯನ್ನು (ಎನ್ಎಂಪಿ) ಜಾರಿಗೆ ತಂದಿದೆ. ಈ ಮೂಲಕ 2022ರ ವೇಳೆಗೆ ₨1 ಕೋಟಿ ಉದ್ಯೋಗಾವಕಾಶ ಸೃಷ್ಟಿ ಅಂದಾಜು ಮಾಡಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.