‘ಸಾವಿರ ಪದಗಳಿಗೆ ಒಂದು ಛಾಯಾಚಿತ್ರ ಸಮಾನ’ ಎಂಬ ಮಾತು ಕಲಾವಿದ ರವಿಕುಮಾರ್ ಕಾಶಿ ಅವರ ಫೋಟೊಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಅಷ್ಟು ಸೂಕ್ಷ್ಮ ಒಳನೋಟಗಳನ್ನು ಹೊಂದಿದ ಚಿತ್ರಗಳನ್ನು ಅವರು ಸೆರೆಹಿಡಿದಿದ್ದಾರೆ. ತುಕ್ಕು ಹಿಡಿದ ಕಬ್ಬಿಣ, ಗೋಡೆ ಚಿತ್ರದಲ್ಲಿ ಗೀಚಿದ ಕಲೆ, ಬಣ್ಣ ಹಚ್ಚದ ಹಸಿಗೋಡೆ, ಹಳೆ ಬಾಗಿಲು... ಹೀಗೆ ಸಣ್ಣ ಸಣ್ಣ ವಸ್ತುಗಳಲ್ಲೂ ಕಲೆಯನ್ನು ಹುಡುಕುವ ಇವರ ಕ್ಯಾಮೆರಾ ಕಣ್ಣು ಸೆರೆಹಿಡಿದ ಚಿತ್ರಗಳು ಅದ್ಭುತ.

ರವಿಕುಮಾರ್ ಅವರು ತಮ್ಮ ಮನೆಯಲ್ಲಿನ ಒಂದೊಂದು ಜಾಗ, ಪ್ರವಾಸ ಮಾಡಿದ ಸ್ಥಳಗಳಲ್ಲೂ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಚಿತ್ರಗಳಿಗೆ ಹೊಸ ಸ್ಪರ್ಶ ನೀಡಿದ್ದಾರೆ. ಇದುವರೆಗೂ ನೋಡಿದ ಚಿತ್ರಗಳು ಅಮೂರ್ತ ಚಿತ್ರಗಳಂತೆ ಕಾಣುತ್ತವೆ ಎಂದು ಹೇಳಿಕೊಳ್ಳುತ್ತಾರೆ ರವಿಕುಮಾರ್ ಕಾಶಿ.

ಅಂದಹಾಗೆ, ರವಿಕುಮಾರ್ ಕಾಶಿ ಅವರ ‘ರಿಮೆಂಬರ್ಡ್ ಅಬ್ಸ್ಟ್ರಾಕ್ಷನ್ಸ್’ ಹೆಸರಿನ ಛಾಯಾಚಿತ್ರಗಳ ಪ್ರದರ್ಶನ ನಗರದಲ್ಲಿ ಇಂದಿನಿಂದ (ಡಿ.4) ನಡೆಯಲಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಅಮೆರಿಕ, ಇಂಗ್ಲೆಂಡ್, ಕೊರಿಯಾ, ಜೋರ್ಡಾನ್ನಲ್ಲಿ ತೆಗೆದ ಚಿತ್ರಗಳು ಪ್ರದರ್ಶನದಲ್ಲಿವೆ.

ಜಯನಗರದ ಅಂಗಡಿಯೊಂದರ ಮುಚ್ಚಿದ ರೋಲಿಂಗ್ ಷಟರ್ನ ಒಂದು ಭಾಗ, ಶ್ರೀರಾಂಪುರದಲ್ಲಿನ ನಿರ್ಮಾಣ ಹಂತದ ಕಟ್ಟಡದ ಗೋಡೆಯಲ್ಲಿನ ನಸುಗೆಂಪು ಬಣ್ಣ, ಕಳ್ಳಕಾಕರ ರಕ್ಷಣೆಗಾಗಿ ಕಾಂಪೌಂಡ್ಗೆ ಹಾಕಿದ ಮಳೆಗಳಿರುವ ಚಿತ್ರ ಅದ್ಭುತ ಕಲಾಕೃತಿಯಂತೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ.

ರವಿಕುಮಾರ್ ಅವರ ಛಾಯಾಚಿತ್ರಗಳಷ್ಟೇ ಅಲ್ಲದೇ ಇನ್ಸ್ಟಾಲೇಷನ್ಗಳೂ ಗಮನಸೆಳೆಯುತ್ತವೆ. ಫೈನ್ ಆರ್ಟ್ಸ್ನಲ್ಲಿ ಪದವಿ ಮುಗಿಸಿರುವ ಇವರು ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಇವರ ಛಾಯಾಚಿತ್ರಗಳ ಪ್ರದರ್ಶನ ಮುಂಬೈ, ಹಾಂಕಾಂಗ್ನಲ್ಲೂ ನಡೆದಿವೆ.

ಅಂದಹಾಗೆ, ರವಿಕುಮಾರ್ ಕಾಶಿ ಅವರ ಛಾಯಾಚಿತ್ರಗಳ ಪ್ರದರ್ಶನ ಡಿಸೆಂಬರ್ 21ರವರೆಗೆ ನಡೆಯಲಿದೆ. ಸಂಜೆ 6.30ರಿಂದ 8.30.
ಸ್ಥಳ: ಗ್ಯಾಲರಿ ಸುಮುಖ, ನಂ24/10, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡನ್. ಮಾಹಿತಿಗೆ 2229 2230.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.