ನಗರದ ಐಟಿಸಿ ವಿಂಡ್ಸರ್ ಹೋಟೆಲ್ಗೆ ಆ ದಿನದ ಸಂಜೆ ಓಟದ ಕಳೆ ಬಂದಿತ್ತು. ನೆರೆದವರೆಲ್ಲಾ ಉತ್ಸಾಹದಿಂದ ಮಾತಿನ ಅರಮನೆಯಲ್ಲಿ ಮುಳುಗಿದ್ದರು. ಅಂದವಾಗಿ ಸೀರೆ ತೊಟ್ಟಿದ್ದ ವಿದೇಶಿ ಮಹಿಳೆಯ ನಗುಮುಖ ಎಲ್ಲರನ್ನೂ ಸೆಳೆಯುತ್ತಿತ್ತು.

ದೇಶ ವಿದೇಶದ ಅನೇಕರು ಇಲ್ಲಿ ಜಮಾಯಿಸಿದ್ದು ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಆವೃತ್ತಿಯ ಅನಾವರಣ ಸಮಾರಂಭಕ್ಕೆ. 7ನೇ ಆವೃತ್ತಿಯ 10ಕೆ ಸ್ಪರ್ಧೆಗೆ ಮೇ18ರಂದು ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು.

ಟಿಸಿಎಸ್ ಉಪಾಧ್ಯಕ್ಷ ನಾಗರಾಜ್ ಐಜ್ರಿ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಕಳೆಗಟ್ಟಲೆಂಬಂತೆ ಐದು ನಿಮಿಷ ಆಕ್ಸಿಜನ್ ತಂಡದಿಂದ ನೃತ್ಯ ಕಾರ್ಯಕ್ರಮವೂ ಇತ್ತು. ನಿರೂಪಕಿ ಪಲ್ಲವಿ ನಿಮಗಾಗಿ ಕೊಡಗಿನ ಕೊಡವ ನೃತ್ಯ, ಭರತನಾಟ್ಯ ಹಾಗೂ ಮಂಗಳೂರಿನ ಯಕ್ಷಗಾನವನ್ನು ಪ್ರಸ್ತುತಪಡಿಸಲಿದ್ದೇವೆ ಎಂದರು. ಆದರೆ ಮಂಗಳೂರಿನ ತೆಂಕುತಿಟ್ಟಿಗೆ ಬದಲಾಗಿ ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧವಾದ ಬಡಗುತಿಟ್ಟು ಯಕ್ಷಗಾನದ ತುಣುಕನ್ನು ಪ್ರದರ್ಶಿಸಲಾಯಿತು. ಅದೂ ಅಲ್ಲದೆ ಈ ಮೂರು ನೃತ್ಯ ಪ್ರಕಾರಕ್ಕೆ ವಿಶೇಷ ಸಂಗೀತವನ್ನು ಬೆರೆಸಿದ್ದರಿಂದ ನೃತ್ಯದಲ್ಲಿ ನೈಜತೆ ಮಾಯವಾಗಿತ್ತು.

ನಂತರದಲ್ಲಿ 10ಕೆ ಓಟಕ್ಕೆ ಸಹಭಾಗಿತ್ವ ನೀಡಿದ ಬೆಂಗಳೂರು ಕೇರ್ನ ಮುರ್ರೆ ಕಲ್ಸಾ, ರೇಡಿಯೊ ಮಿರ್ಚಿಯ ರಶ್ಮಿ ಶರ್ಮಾ, ಫೋರ್ಟಿಸ್ ಆಸ್ಪತ್ರೆಯ ವಿವೇಕ್ ಜೈವಾಲೆ, ಬಿಎಂಡಬ್ಲ್ಯುನ ಫ್ರಾಂಕ್ ಸ್ಚೊಲೊಡೆರ್, ಟಿಸಿಎಸ್ನ ವಿಶಾಲ್ ಜುಂಜುನ್ವಾಲಾ, ನೈಕಿ ಇಂಡಿಯಾದ ಅವಿನಾಶ್ ಪಂಥ್, ಕಿಂಗ್ಫಿಶರ್ನ ಉಮರ್ ಸಿಂಗ್ ಶೆಖಾವತ್, ಐಟಿಸಿಯ ವಿವೇಕ್ ರಾಜಧಾನ್, ಕರ್ನಾಟಕ ರಾಜ್ಯ ಅಥ್ಲೀಟ್ ಒಕ್ಕೂಟದ ಎನ್. ಚಂದ್ರಶೇಖರ್ ರೈ ಹಾಗೂ ರಾಯಭಾರಿ ನಟ ಪುನೀತ್ ರಾಜ್ಕುಮಾರ್ ಅವರನ್ನು ಒಳಗೊಂಡ ಸಂವಾದ ಕಾರ್ಯಕ್ರಮ ನಡೆಯಿತು.

ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದಂತೆ ಕಾಣುತ್ತಿದ್ದ ಪುನೀತ್ ತಮ್ಮತ್ತ ಪ್ರಶ್ನೆ ಬಂದಾಗ ಮಾತ್ರ ಎಚ್ಚೆತ್ತಂತೆ ಕಾಣುತ್ತಿದ್ದರು. ನಿರೂಪಕಿ ಕೇಳಿದ ‘ಯಾವ ಬಣ್ಣದ ಕಾರನ್ನು ನೀವು ಮೊದಲು ಓಡಿಸಿದ್ದು’ ಎಂಬ ಪ್ರಶ್ನೆಗ ತುಸು ಯೋಚಿಸಿ ‘ಸಿಯಾನ್’ ಎಂದರು. ಕೂಡಲೇ ಅಲ್ಲ ಅಲ್ಲ ‘ಗ್ರೀನ್’ ಎಂದಾಗ ಸಭಾಂಗಣದಲ್ಲಿ ನಗು.
ಅವಸರದಲ್ಲಿದ್ದ ಪುನೀತ್ ‘ಮೆಟ್ರೊ’ ಮಾತಿಗೆ ಕೆಲಕ್ಷಣ ಸಿಕ್ಕಿದರು.

10ಕೆ ಅನುಭವ ಹೇಳಿ?
ಕಳೆದ ಮೂರು ವರ್ಷದಿಂದ ನಾನು ನಿರಂತರವಾಗಿ ಭಾಗವಹಿಸುತ್ತಿದ್ದೇನೆ. ತುಂಬಾ ಖುಷಿ ಎನಿಸುತ್ತದೆ. ಓಟದ ಬಗ್ಗೆ ಏನೋ ವ್ಯಾಮೋಹವಿದೆ. ಆರೋಗ್ಯಕ್ಕೆ ಹಾಗೂ ಫಿಟ್ನೆಸ್ಗೆ ಇದು ತುಂಬಾ ಸಹಕಾರಿ. ಸಾವಿರಾರು ಜನರೊಂದಿಗೆ ಓಡುವಾಗ ನನ್ನನ್ನು ನಾನು ಮರೆಯುತ್ತೇನೆ. ರಾಘಣ್ಣ ಕೂಡ ಓಟಪ್ರಿಯ. ಎಲ್ಲಕ್ಕಿಂತ ಹೆಚ್ಚಾಗಿ ಹಣ ನೀಡಿ ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿರುವ ಆತ್ಮತೃಪ್ತಿ ಬೇರೆ ರೀತಿಯ ಖುಷಿ ನೀಡುತ್ತದೆ. ಹೀಗಾಗಿ 10ಕೆಯಲ್ಲಿ ಭಾಗಿಯಾಗಲು ನಾನು ಯಾವಾಗಲೂ ಉತ್ಸುಕನಾಗಿರುತ್ತೇನೆ.

ಈ ಬಾರಿ ಹೊಸದಾಗಿ 10ಕೆಯಲ್ಲಿ ಭಾಗವಹಿಸುವವರಿಗೆ ನಿಮ್ಮ ಸಲಹೆ?
ಒಂದೇ ದಿನ 10 ಕಿ.ಮೀ. ಓಡುವುದು ಸುಲಭದ ಮಾತೇನಲ್ಲ. ಆದರೂ ಅಲ್ಲಿ ಬಂದಿರುವ ಸ್ಪರ್ಧಿಗಳನ್ನು ನೋಡಿದಾಗ ನಮ್ಮಲ್ಲಿರುವ ಓಟಗಾರನಿಗೆ ಶಕ್ತಿ ಬರುತ್ತದೆ. ಈಗಿನಿಂದಲೇ ಓಟದ ಅಭ್ಯಾಸ ನಡೆಸಿ.
ಪ್ರತಿದಿನ ಒಂದೊಂದು ಕಿ.ಮೀ. ಹೆಚ್ಚು ಓಡಿ. ದೇಶ ವಿದೇಶದ ಅನೇಕ ಸ್ಪರ್ಧಿಗಳೊಂದಿಗೆ ಓಟಕ್ಕಿಳಿದಾಗ ಸುಸ್ತಾಗಿದ್ದು ತಿಳಿಯುವುದೇ ಇಲ್ಲ.

ಇತ್ತೀಚೆಗೆ ಯಾವ ಸಿನಿಮಾ ನೋಡಿದ್ದೀರಿ?
ಪ್ರತಿದಿನ ಸಿನಿಮಾ ನೋಡುತ್ತೇನೆ. ಹಾಲಿವುಡ್ ಸಿನಿಮಾವನ್ನು ಹೆಚ್ಚಾಗಿ ವೀಕ್ಷಿಸುತ್ತೇನೆ. ಹೀಗಾಗಿ ಹೆಸರು ನೆನಪಿಟ್ಟುಕೊಳ್ಳುವುದು ಕಷ್ಟ. ನಿನ್ನೆಯಷ್ಟೆ ವುಡಿ ಅಲೇನ್ ಅವರ ‘ಬ್ಲೂ ಜಾಸ್ಮಿನ್’ ಸಿನಿಮಾ ನೋಡಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಅದ್ಭುತ ಚಿತ್ರವದು. ಎಲ್ಲರೂ ನೋಡಲೇಬೇಕು.

ಡಬ್ಬಿಂಗ್ ಜಟಾಪಟಿ ಬಗ್ಗೆ ಹೇಳಿ?
ಡಬ್ಬಿಂಗ್ ಬೇಡ ಎನ್ನುವ ಹೋರಾಟವನ್ನು ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದೇವೆ. ಮುಂದೆಯೂ ಹೋರಾಟ ನಡೆಯುತ್ತದೆ. ಇನ್ನು ಕೆಲವರು ‘ಸಿನಿಮಾವನ್ನು ಡಬ್ ಮಾಡೇಮಾಡುತ್ತೇವೆ’ ಎಂದರೆ ಕಾನೂನು ರೀತಿ ಕ್ರಮ ಜರುಗಿಸುವಂತಿಲ್ಲ. ಹೀಗಾಗಿ ಈ ಹೋರಾಟಕ್ಕೆ ಎಂದು ಕೊನೆ ಎನ್ನುವುದು ಗೊತ್ತಿಲ್ಲ. ಡಬ್ಬಿಂಗ್ನಿಂದ ಕನ್ನಡ ಸಿನಿಮಾಕ್ಕೆ ಏನೂ ಆಗುವುದಿಲ್ಲ. ಕಲಾವಿದರಿಗೂ ಯಾವ ತೊಂದರೆಯಿಲ್ಲ. ಆದರೆ ಒಂದು ಸಿನಿಮಾಕ್ಕೆ ಅನೇಕ ಟೆಕ್ನಿಶಿಯನ್ಗಳ ಕೊಡುಗೆ ಇರುತ್ತದೆ. ಕನ್ನಡದವರಷ್ಟೇ ಎಲ್ಲಾ ಭಾಷೆಯವರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರ ಬದುಕಿಗೆ ಡಬ್ಬಿಂಗ್ನಿಂದ ದೊಡ್ಡ ಹೊಡೆತ ಬೀಳುತ್ತದೆ.

ಇತ್ತೀಚೆಗೆ ಬೇರೆ ಭಾಷೆಗಳಿಂದ ನಿರ್ದೇಶಕರನ್ನು ಕರೆತರುತ್ತಿದ್ದೀರಲ್ಲ?
ತಪ್ಪೇನಿಲ್ಲ. ಪ್ರತಿಭೆಗೆ ಯಾವಾಗಲೂ, ಎಲ್ಲ ಕಡೆಯೂ ಮನ್ನಣೆ ಇದ್ದೇ ಇರುತ್ತದೆ. ಕನ್ನಡದ ಅನೇಕ ನಟ-–ನಟಿಯರು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲವೆ. ಅದು ತಪ್ಪಲ್ಲ ಎಂದಮೇಲೆ ಬೇರೆ ಭಾಷಾ ನಿರ್ದೇಶಕರು ನಮ್ಮಲ್ಲಿಗೆ ಬಂದು ಚಿತ್ರ ನಿರ್ದೇಶಿಸುವುದರಲ್ಲಿ ಯಾವ ತಪ್ಪೂ ಇಲ್ಲ.

ನಿಮ್ಮ ಕುಟುಂಬದ ಸದಸ್ಯರೊಬ್ಬರು ರಾಜಕೀಯಕ್ಕೆ ಬರುತ್ತಿದ್ದಾರಲ್ಲ?
ರಾಜಕೀಯ ಅವರವರರಿಷ್ಟ.

ಹೋಳಿ ಹಬ್ಬ ಹೇಗೆ ಆಚರಿಸುತ್ತೀರಿ?
ಹೋಳಿನಾ....! ಕೋಳಿ ತಿಂದು ಹೋಳಿ ಮಾಡು ಅಷ್ಟೇ (ನಗು). ತಮಾಷೆಗೆ ಹಾಗೆಂದೆ. ಹೋಳಿ ಹಬ್ಬವನ್ನು ನಾನು ಅಷ್ಟಾಗಿ ಆಚರಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.