ಗುರುವಾರ , ಜೂನ್ 24, 2021
22 °C

‘ವಿರೋಧಿಗಳ ಮಾತು ನಂಬಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ನಾನು ಕೆಟ್ಟವನು ಎಂದು ಅಪಪ್ರಚಾರ ಮಾಡುವ ವಿರೋಧಿಗಳ ಮಾತಿಗೆ ಬೆಲೆ ಕೂಡಬೇಡಿ. ಅಭಿವೃದ್ದಿ ಕಾರ್ಯಗಳಲ್ಲಿ ರಾಜೀ ಮಾಡಿ­ಕೊಳ್ಳುವ ಸ್ವಭಾವ ನನ್ನದಲ್ಲ. ಇದು ಕೆಲವರಿಗೆ ಕಹಿ ಎನಿಸಿರಬಹುದು. ನಾನು ಅಭಿವೃದ್ದಿಯ ಕನಸ್ಸುಳ್ಳವನು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು.ಶನಿವಾರ ಇಲ್ಲಿನ ರಾಜೂಗೌಡ ಅವರ ಮನೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತ­ನಾಡಿದರು.

ಈ ಭಾಗದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾರಾಯಣ­ಪುರ ಜಲಾಶಯ ವ್ಯಾಪ್ತಿಯ ಕಾಲುವೆ­ಗಳ ನವೀಕರಣಕ್ಕೆ ₨4 ಸಾವಿರ ಕೋಟಿ ಹಣ ಒದಗಿಸಿರುವುದು ಬಿಜೆಪಿ ಕೂಡು­ಗೆ­ಯಾಗಿದೆ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.ಈ ಭಾಗದ ಅಭಿವೃದ್ದಿಯ ಹಿನ್ನೆಲೆ­ಯಲ್ಲಿ ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದು ಬಿಜೆಪಿಯ ದೂರ ದೃಷ್ಟಿಯಾಗಿದೆ ಎಂದರು. ನೀರಾವರಿ ವಂಚಿತರಿಗೆ ನೀರಾವರಿ ಕಲ್ಪಿಸುವ ಉದ್ದೇಶದಿಂದ ಬೊೋನಾಳ ಸೆರಿದಂತೆ ವಿವಿಧ ಏತ ನೀರಾವರಿ ಮತ್ತು ಹಲವಾರು ಯೋಜನೆಗಳಿಗೆ ಕೋಟ್ಯಂ­ತರ ರೂಪಾಯಿ ಅನುದಾನ ಒದಗಿಸಿದ್ದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದರು.ಕಾಂಗ್ರೆಸ್‌ನಲ್ಲಿ ಚಾಡಿಕೋರರಿಗೆ ಮಣೆ ಹಾಕಲಾಗುತ್ತದೆ. ಸರ್ವಾಧಿಕಾರಿ ಧೋರಣೆಯುಳ್ಳ ಕಾಂಗ್ರೆಸ್‌ನಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಈ ಬಾರಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶಿವನಗೌಡ ನಾಯಕರಿಗೆ ಮತ ನೀಡವಂತೆ ಮನವಿ ಮಾಡಿದರು.ಅಪ್ಪಾಸಾಹೇಬ ಪಾಟೀಲ, ಚಂದ್ರ­ಶೇಖರ ಜಡಿಮರಳ, ಎಚ್.ಸಿ.­ಪಾಟೀಲ, ಯಲ್ಲಪ್ಪ, ನಿಂಗಣ್ಣ ಬಾದ್ಯಾ­ಪುರ, ಮಾತನಾಡಿದರು.

ರಾಜಾ ಹನುಮಪ್ಪ ನಾಯಕ, ಚಂದ್ರಕಾಂತ ಕಡೇಚೂರು, ಭೀಮಾ­ಶಂಕರ ಬಿಲ್ಲವ್, ವೇಣುಮಾಧವ, ರಾಜಾ ಜಯರಾಂ ನಾಯಕ, ಪಾರಪ್ಪ ಗುತ್ತೇದಾರ, ಕಲೀಮ ಜಹಾ­ಗೀರ­ದಾರ, ಪ್ರಕಾಶ ಗುತ್ತೇದಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.