ಶನಿವಾರ, ಫೆಬ್ರವರಿ 27, 2021
31 °C
ಹೈದರಾಬಾದ್‌ ವಿವಿ ಕುಲಪತಿ ಅಪ್ಪಾ ರಾವ್‌ ಹೇಳಿಕೆ

‘ವೇಮುಲ ಅಮಾನತಿಗೆ ಒತ್ತಡ ಇರಲಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವೇಮುಲ ಅಮಾನತಿಗೆ ಒತ್ತಡ ಇರಲಿಲ್ಲ’

ಹೈದರಾಬಾದ್‌ (ಪಿಟಿಐ): ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ವೇಮುಲ ರೋಹಿತ್‌ ಅಮಾನತಿಗೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ ಎಂದು ವಿವಿ ಕುಲಪತಿ ಅಪ್ಪಾ ರಾವ್‌ ಹೇಳಿದ್ದಾರೆ.

‘ರೋಹಿತ್‌ ಮತ್ತು ಇತರೆ ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತು ಮಾಡಲು ಸಚಿವರು ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಯಾವುದೇ ಒತ್ತಡ ಇರಲಿಲ್ಲ’ ಎಂದು ಅಪ್ಪಾ ರಾವ್‌ ತಿಳಿಸಿದ್ದಾರೆ.

‘ಅಮಾನತು ಮಾಡಿದ ಕ್ರಮ ತನ್ನ ಆತ್ಮಹತ್ಯೆಗೆ ಕಾರಣ ಎಂದು ರೋಹಿತ್‌ ಎಲ್ಲೂ ಉಲ್ಲೇಖಿಸಿಲ್ಲ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಳ್ಳಲು ಅಮಾನತು ಕ್ರಮ ಕಾರಣ ಎಂದು ಹೇಳುವುದು ಕಷ್ಟ’ ಎಂದಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದೊಂದಿಗೆ ವಿಶ್ವವಿದ್ಯಾಲಯದ ಪತ್ರ ವ್ಯವಹಾರ ನಿರಂತರ ಪ್ರಕ್ರಿಯೆ. ಆತ್ಮಹತ್ಯೆ ಘಟನೆಗೆ ಅದನ್ನು ತಳುಕು ಹಾಕುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

‘ದಲಿತ– ದಲಿತೇತರ ಸಂಘರ್ಷವಲ್ಲ’

ವಿದ್ಯಾರ್ಥಿ ಆತ್ಮಹತ್ಯೆ ಘಟನೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

‘ವಿದ್ಯಾರ್ಥಿ ಆತ್ಮಹತ್ಯೆ ವಿಚಾರವನ್ನು ದಲಿತ ಮತ್ತು ದಲಿತೇತರರ ನಡುವಿನ ಸಂಘರ್ಷ ಎಂದು ಬಿಂಬಿಸುತ್ತಿರುವುದು ಸರಿಯಲ್ಲ’ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.