ಹಳ್ಳೂರ (ಮೂಡಲಗಿ): ಸತ್ಯದಿಂದ ನಡೆದು ಸತ್ಕಾರ್ಯದಲ್ಲಿ ತೊಡಗುವು ದರ ಮೂಲಕ ಜೀವನದಲ್ಲಿ ಶಾಂತಿ ಪಡೆದುಕೊಳ್ಳಬೇಕು’ ಎಂದು ರಾಜಸ್ಥಾ ನದ ಬಾಡವೀರ ದ್ಯಾನಾನಂದ ಸ್ವಾಮಿ ಗಳು ಹೇಳಿದರು.

ಇಲ್ಲಿ ವಿಶ್ವಶಾಂತಿಗಾಗಿ ನಡೆಯುತ್ತಿ ರುವ ಮಹಾರುದ್ರಯಜ್ಞ ಹಾಗೂ ಸರ್ವಧರ್ಮ ಸಮ್ಮೇಳನದ ಉದ್ಘಾ ಟನಾ ಸಮಾರಂಭದಲ್ಲಿ ಮಾತನಾ ಡಿದರು. ಜಗತ್ತಿನ ಎಲ್ಲ ಧರ್ಮಗಳು ಸಹಬಾಳ್ವೆ, ಸದ್ಭಾವನೆಯ ಮೂಲಕ ದೇಶದ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜಗತ್ತಿನ ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ದೀಪ ಧ್ವನಿಗಳಾಗಿವೆ ಎಂದರು.

ಗ್ರಾಮದ ಜೈನಮುನಿ ಮುಕ್ತಿಸಾಗರ ಅವರು ಮಾತನಾಡಿ, ಎಲ್ಲ ಧರ್ಮಗಳು ಒಂದೆಯಾಗಿದ್ದು, ದಾನ, ಧರ್ಮದ ಮೂಲಕ ಮುಕ್ತಿಯನ್ನು ಪಡೆದುಕೊಳ್ಳಬೇಕು ಎಂದರು.

ಸಂಘಟಕರಾದ ಡಾ. ಅಲ್ಲಪ್ರಭು ಸ್ವಾಮಿಜಿ ಮಾತನಾಡಿ ಇದು ಎರಡನೇ ಸಮ್ಮೇಳನವಾ ಗಿದ್ದು, ನಾಡಿನ ವಿವಿಧೆಡೆಯಿಂದ ಧರ್ಮ ಗುರು ಗಳು, ಭಕ್ತರು ಭಾಗವಹಿಸುತ್ತಿದ್ದು, ಪುಣ್ಯದ ಕಾರ್ಯವಾಗಿದೆ ಎಂದರು.

ಮಧ್ಯಪ್ರದೇಶದ ಭಗವಾನ್ಜಿ ವೇದಾಂ ತಾರ್ಚ, ವಾರಣಾಸಿಯ ಡಾ. ಜಗದೀಶ್ವರಾ ನಂದ, ವಾರಣಾಸಿಯ ಪರ ಮಾತ್ಮಾನಂದ ಸ್ವಾಮೀಜಿ, ಪೋಲೆಂಡ್ನ ಯೋಗಾನಂದ ಸ್ವಾಮಿಜಿ, ಹರಿದ್ವಾರದ ನಾಗಾಬಾಬಾ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಸಕ್ಕರೆ ಮಹಾಮಂಡಳದ ಅಧ್ಯಕ್ಷ ಆರ್.ಟಿ. ಪಾಟೀಲ ಮತ್ತು ಗೋಕಾಕದ ಅಶೋಕ ಪಾಟೀಲ ಭಾಗವಹಿಸಿದ್ದರು.

ಸಮಾರಂಭದ ಪೂರ್ವದಲ್ಲಿ ಹಳ್ಳೂರ ಮತ್ತು ಕಪ್ಪಲಗುದ್ದಿಯ ಸುಮಂಗಲಿಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಂತರ ವಾರಣಾಶಿಯ ಋಷಿ ಬಾಬಾ ಮಹಾ ರಾಜರ ಅಧ್ಯಕ್ಷತೆಯಲ್ಲಿ ಯಜ್ಞಕಟ್ಟೆಯಲ್ಲಿ ನಿರ್ಮಿ ಸಿದ 27 ಯಜ್ಞಕುಂಡಗಳಲ್ಲಿ ಸಾಮೂಹಿಕವಾಗಿ ಮಹಾಯಜ್ಞ ಪ್ರಾರಂಭಗೊಂಡಿತು. ಕಾಶಿ ಪಂಡಿತರು ಸೇರಿದಂತೆ ವಿವಿಧ ಧರ್ಮಗುರುಗಳು ಯಜ್ಞದಲ್ಲಿ ಭಾಗವಹಿಸಿದ್ದರು.

ಮಡಿವಾಳ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.