ಮಂಗಳವಾರ, ಜೂನ್ 15, 2021
24 °C

‘ಸಿಐಐ’ ಯುವ ಉದ್ಯಮಿಗಳ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದ್ಯಮಿ­ಯಾಗುವ ಕನಸು ನನಸಾಗಿಸಲು ಸೂಕ್ತ ಸಮಯ ಎಂಬು ದೇನೂ ಇರುವು­ದಿಲ್ಲ. ಉದ್ಯಮ ಆರಂಭಿ ಸಲು ಕಾಲ ಕೂಡಿಬರಬೇಕೆಂದೇನೂ ಇಲ್ಲ ಎಂದು ‘ನ್ಯೂ ಸಿಲ್ಕ್‌ರೂಟ್’ ಕಂಪೆನಿ ಪಾಲು­ದಾರ ಜಾಕೋಬ್ ಕುರಿಯನ್ ಹೇಳಿದರು.ಇಲ್ಲಿ ಇತ್ತೀಚೆಗೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಯುವ ಭಾರತೀಯ ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿ, ಗೆಲುವು ಎಲ್ಲರಿಗೂ ಸುಲಭವಾಗಿ ದಕ್ಕದು. ಪ್ರತಿ ಗೆಲುವಿನ ಹಿಂದೆ ಕನಿಷ್ಠ ೮ ವೈಫಲ್ಯಗಳು ಇರುತ್ತವೆ. ಯುವ ಉದ್ಯಮಿ ಎದೆಗುಂದ ಬಾರದು. ಸಮಗ್ರತೆ, ಉನ್ನತ ಗುಣಮ ಟ್ಟಕ್ಕೆ ಆದ್ಯತೆ, ಸಹವರ್ತಿ ಕಂಪೆನಿಗಳ ಜತೆ ಮೈತ್ರಿ, ಸದಾಕಾಲ ಭವಿಷ್ಯದತ್ತ ಸ್ಪಷ್ಟ ನೋಟ ಯಶಸ್ಸಿನ ಒಳಗುಟ್ಟುಗಳು ಎಂದು ಅವರು ಕಿವಿಮಾತು ಹೇಳಿದರು.ಯುವ ಉದ್ಯಮಿಗಳಿಗೆ ಹಣವೇ ಮುಖ್ಯ ಚಾಲಕ ಶಕ್ತಿಯಾಗದಿರಲಿ. ನಡ ವಳಿಕೆಯೇ ಸದಾಕಾಲಕ್ಕೂ ಮುಖ್ಯ ಪ್ರೇರ ಣೆಯಾಗಿರಲಿ ಎಂದು ‘ಕರ್ಲಾನ್ ಲಿ.’ ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಪೈ ಗಮನ ಸೆಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.