ವಾಷಿಂಗ್ಟನ್ (ಪಿಟಿಐ): ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಇನ್ನೂ ರಾಜತಾಂತ್ರಿಕ ದಾರಿಗಳು ಮುಚ್ಚಿಲ್ಲವಾದ್ದರಿಂದ ಆ ದೇಶ ದಲ್ಲಿ ಸೇನಾ ಕಾರ್ಯಾ ಚರಣೆ ಕೈಗೊಳ್ಳುವುದಿಲ್ಲ ಎಂದು ಅಮೆ ರಿಕ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಒಬಾಮ, ‘ರಷ್ಯಾ ವಿರುದ್ಧ ನೇರ ಸಂಗ್ರಾಮಕ್ಕೆ ಇಳಿಯಲು ನಮಗೆ ಆಸಕ್ತಿ ಇಲ್ಲ, ಇದು ಉಕ್ರೇನ್ಗೆ ಅಷ್ಟೇ ಅಲ್ಲ ಯಾರಿಗೂ ಬೇಕಿಲ್ಲ, ಆದರೆ ನಾವು ಈ ವಿಷಯದಲ್ಲಿ ಉಕ್ರೇನ್ ಜನರ ಪರವಾಗಿ ನಿಲ್ಲುತ್ತೇವೆ, ತತ್ವಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ನಮ್ಮ ಎಲ್ಲ ರಾಜತಾಂತ್ರಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಬಲವಾದ ಅಂತರ ರಾಷ್ಟ್ರೀಯ ಸಂದೇಶವನ್ನು ಪುಟಿನ್ ಅವರಿಗೆ ರವಾನಿಸುತ್ತೇವೆ’ ಎಂದು ಒಬಾಮ ಹೇಳಿದರು.

‘ಉಕ್ರೇನ್ ದೇಶದ ಕಾನೂನು ಹಾಗೂ ಅಂತರ ರಾಷ್ಟ್ರೀಯ ಕಾನೂನಿನ ಅಡಿಯಲ್ಲೇ ಕ್ರಿಮಿಯಾ ಗಣರಾಜ್ಯದ ಜನ ಬದಲಾವಣೆ ಕಂಡು ಕೊಳ್ಳಬೇಕು, ಬದಲಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರತಿ ನಿಧಿಗಳ ಇಲ್ಲವೆ ಬಂದೂಕಿನ ನೆರಳಿನ ಕೆಳಗೆ ಇದಕ್ಕೆ ಅವಕಾಶ ನೀಡುವಂತಿಲ್ಲ’ ಎಂದು ಒಬಾಮ ಹೇಳಿದರು.

ರಷ್ಯಾಗೆ ‘ನ್ಯಾಟೊ’ ಎಚ್ಚರಿಕೆ: ಉಕ್ರೇನ್ನಿಂದ ಕ್ರಿಮಿಯಾ ಗಣರಾಜ್ಯ ಕಿತ್ತುಕೊಂಡು ತನ್ನ ದೇಶಕ್ಕೆ ಸೇರಿಸಿಕೊಂಡ ರಷ್ಯಾ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ನೇತೃತ್ವದ ಮಿತ್ರ ಪಡೆ ‘ನ್ಯಾಟೊ’ ಇದರ ಪರಿಣಾಮವನ್ನು ಮುಂದಿನ ದಿನ ಗಳಲ್ಲಿ ಪುಟಿನ್ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ‘ಕ್ರಿಮಿಯಾದಲ್ಲಿ ನಡೆದ ಜನಮತ ಗಣನೆ ಅಕ್ರಮ, ಈ ವಿಷಯದಲ್ಲಿ ರಷ್ಯಾ ಎಲ್ಲ ಮೂಲಭೂತ ತತ್ವಗಳನ್ನು ಉಲ್ಲಂಘಿಸಿದೆ’ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಆ್ಯಂಡರ್ಸ್ ಫೊಗ್ ರಾಸ್ಮ್ಸೆನ್ ಅಸ ಮಾಧಾನ ವ್ಯಕ್ತಪಡಿಸಿದರು.

‘ಸೇನಾ ಬಲಪ್ರಯೋಗದ ಮೂಲಕ ಕ್ರಿಮಿ ಯಾವನ್ನು ತನ್ನ ವಶಕ್ಕೆ ಪಡೆದುಕೊಂಡಿರುವ ರಷ್ಯಾ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ದಂತಾಗಿದೆ. ಮೇಲಾಗಿ ಉಕ್ರೇನ್ ದೇಶದ ಸಾರ್ವಭೌಮತ್ವಕ್ಕೂ ಇದರಿಂದ ಧಕ್ಕೆಯಾಗಿದೆ. ಐರೋಪ್ಯ ರಾಷ್ಟ್ರಗಳ ಭದ್ರತೆ ಹಾಗೂ ಸ್ಥಿರತೆಗೂ ಈ ಬೆಳವಣಿಗೆ ಬೆದರಿಕೆ ಎನಿಸಿದೆ’ ಎಂದು ರಾಸ್ಮ್ಸೆನ್ ಹೇಳಿದರು.

‘1994ರಲ್ಲಿ ಉಕ್ರೇನ್ನ ಸಾರ್ವಭೌಮತೆ ಎತ್ತಿಹಿಡಿದ ರಾಷ್ಟ್ರಗಳ ಪೈಕಿ ರಷ್ಯಾ ಸಹ ಒಂದಾಗಿತ್ತು. ಉಕ್ರೇನ್ ವಿರುದ್ಧ ಸೇನಾ ಬಲಪ್ರಯೋಗ ಮಾಡುವು ದಿಲ್ಲ ಎಂದೂ ರಷ್ಯಾ ಆ ಸಂದರ್ಭ ಮಾತುಕೊಟ್ಟಿತ್ತು, ಆದರೆ ಈಗ ಆ ಒಪ್ಪಂದವನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ನ್ಯಾಟೊ ರಷ್ಯಾದ ಜತೆ ಯಾವುದೇ ನಾಗರಿಕ ಇಲ್ಲವೇ ಸೇನಾ ಸಭೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ’ ಎಂದೂ ರಾಸ್ಮ್ಸೆನ್ ವಿವರಿಸಿದರು.

‘ನ್ಯಾಟೊ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಭೆ ಮುಂದಿನ ತಿಂಗಳು ಆರಂಭದಲ್ಲಿ ಬ್ರಸೆಲ್್ಸ ನಲ್ಲಿ ನಡೆಯಲಿದ್ದು ಆ ಸಂದರ್ಭ, ರಷ್ಯಾ ಕ್ರಮದ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದೂ ಅವರು ತಿಳಿಸಿದರು.

ಅಮೆರಿಕದ ಪೂರ್ಣ ಬೆಂಬಲ
ಈ ನಡುವೆ ಕ್ರಿಮಿಯಾ ಗಣರಾಜ್ಯದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯಲು ಉಕ್ರೇನ್ ನಿರ್ಧರಿಸಿದೆ. ಈ ಸಂದರ್ಭ ಉಕ್ರೇನ್ ರಕ್ಷಣಾ ಕಾರ್ಯದರ್ಶಿ ಐಹೊರ್ ಟೆನ್ಯೂಕ್ ಅವರೊಂದಿಗೆ ಸಮಾ ಲೋಚನೆ ನಡೆಸಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಚಕ್ ಹೆಗೆಲ್, ಉಕ್ರೇನ್ಗೆ ಅಮೆರಿಕದ ಪೂರ್ಣ ಬೆಂಬಲ ಇದೆ ಎಂದು ಭರವಸೆ ನೀಡಿದರು.

ಉಕ್ರೇನ್ ಸೇನಾ ಪಡೆ ತೋರಿದ ಸಂಯಮವನ್ನು ಪ್ರಶಂಸಿರುವ ಹೆಗೆಲ್, ರಷ್ಯಾ ಪರ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಮೃತಪಟ್ಟ ಉಕ್ರೇನ್ ಸೈನಿಕನಿಗೆ ಸಂತಾಪ ಸೂಚಿಸಿದರು ಎಂದು ಪೆಂಟಗಾನ್ ಪತ್ರಿಕಾ ಕಾರ್ಯದರ್ಶಿ ರೇರ್ ಅಡ್ಮಿರಲ್ ಜಾನ್ ಕಿರ್ಬಿ ತಿಳಿಸಿದರು.

ಈ ನಡುವೆ ಪರಿಸ್ಥಿತಿಯನ್ನು ಖುದ್ದಾಗಿ ತಿಳಿಯಲು ವಿದೇಶಾಂಗ ಖಾತೆಯ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ವೆಂಡಿ ಶೆರ್ಮಾನ್ ಅವರನ್ನು ಉಕ್ರೇನ್ಗೆ ಕಳುಹಿಸಿ ಕೊಡಲಾಗುತ್ತದೆ ಎಂದು ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.