ಭಾನುವಾರ, ಮೇ 22, 2022
28 °C
ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣಕ್ಕೆ 18,923 ಕೋಟಿ ರೂ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್

1ನೇ ತರಗತಿ ಹುಡುಗಿಗೆ ದಿನಕ್ಕೆ ರೂ 2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕಾರ್ಪೋರೇಟ್ ವಲಯ, ದಾನಿಗಳು ಹಾಗೂ ಸಂಘ ಸಂಸ್ಥೆಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಶಾಲೆಯನ್ನು `ಶಿಕ್ಷಣ ಸಾಮರಸ್ಯ ವಿದ್ಯಾಕೇಂದ್ರ'ಗಳಾಗಿ ಪರಿವರ್ತಿಸಲು ಸರ್ಕಾರ ತೀರ್ಮಾನಿಸಿದೆ.2013-14ನೇ ಸಾಲಿನ ಬಜೆಟ್‌ನಲ್ಲಿ ಈ ವಿಷಯ ಪ್ರಕಟಿಸಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾತಿ ಉತ್ತೇಜಿಸಲು ಹೆಣ್ಣು ಮಕ್ಕಳಿಗೆ ಪ್ರತಿದಿನದ ಹಾಜರಾತಿಗೆ ಎರಡು ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.* ಪ್ರಾಥಮಿಕ ಶಿಕ್ಷಣಕ್ಕೆ  ರೂ15,680 ಕೋಟಿ ಅನುದಾನ

* ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ. ಉತ್ತಮ ತರಬೇತಿ ಪಡೆದ ಶಿಕ್ಷಕರ ನೇಮಕ

* ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ವಿದ್ಯಾರ್ಹತೆ ಹೆಚ್ಚಿಸಲು ಯೋಚನೆ

* ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪರೀಕ್ಷಾ ಮಾಹಿತಿ

* ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹಂತ ಹಂತವಾಗಿ ಡಿಜಿಟಲ್ ಜ್ಞಾನ ಕೇಂದ್ರಗಳ ಸ್ಥಾಪನೆ

* 500ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇರುವ ದೊಡ್ಡ ಶಾಲೆಗಳಿಗೆ ಬಿಸಿಯೂಟ ತಯಾರಿಕೆಗೆ   ರೂ10 ಕೋಟಿ ವೆಚ್ಚದಲ್ಲಿ ಸ್ಟೀಮ್   ಬಾಯ್ಲರ್‌ಗಳ ವ್ಯವಸ್ಥೆ

* ಮಾತೃಭಾಷೆ ಜೊತೆಗೆ 1ನೇ ತರಗತಿಯಿಂದ ಪರಿಣಾಮಕಾರಿಯಾಗಿ ಇಂಗ್ಲಿಷ್ ಭಾಷೆ ಕಲಿಕೆ

* ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಟೆಲಿಶಿಕ್ಷಣ ಕಾರ್ಯಕ್ರಮ

* ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಹಂತ ಹಂತವಾಗಿ ದೂರಸಂವೇದಿ ಶಿಕ್ಷಣ ಕಾರ್ಯಕ್ರಮ ಜಾರಿ

* ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ  ರೂ 3 ಕೋಟಿ

* ಉನ್ನತ ಶಿಕ್ಷಣ

* ಈ ಬಾರಿ ಉನ್ನತ ಶಿಕ್ಷಣಕ್ಕೆ  ರೂ3,243 ಕೋಟಿ ಅನುದಾನ

* 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ಸ್ಥಾಪನೆ

* ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ಸುಸಜ್ಜಿತ 15 ಹೊಸ ಕಾಲೇಜುಗಳ ಸ್ಥಾಪನೆ

* ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ನೈಪುಣ್ಯ ನಿಧಿ ಕಾರ್ಯಕ್ರಮ

* ಮುಕ್ತ ಮೂಲ ನಾಯಕತ್ವ ಕಾರ್ಯಕ್ರಮದಡಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ 10 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ

* ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ

* ವಾರ್ಷಿಕ ರೂ2.5 ಲಕ್ಷಕ್ಕಿಂತ ಕಡಿಮೆ ಆದಾಯದ ಬಡ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ಬ್ಯಾಂಕಿನಿಂದ ಸಾಲ ಪಡೆದರೆ `ರಾಜೀವ್‌ಗಾಂಧಿ ಶಿಷ್ಯವೇತನ'

* ವಿಶ್ವವಿದ್ಯಾಲಯ, ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಇನೋವೇಷನ್ ಕ್ಲಬ್‌ಗಳ ಸ್ಥಾಪನೆ

* ಎಚ್‌ಐವಿ, ಕುಷ್ಠರೋಗ ಪೀಡಿತರ ಅರ್ಹ ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ, ವಿದ್ಯಾರ್ಥಿ ವೇತನ

* ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿ

* ಗದಗದಲ್ಲಿ ಕರ್ನಾಟಕ ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆ

* ಗುಲ್ಬರ್ಗದ ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದ ಸ್ಥಾಪಿಸಲಾಗುವ ಪಾಲಿ, ಸಂಸ್ಕೃತ ಹಾಗೂ ತುಲನಾತ್ಮಕ ತತ್ವಶಾಸ್ತ್ರದ ಅಂತರರಾಷ್ಟ್ರೀಯ ಅಧ್ಯಯನ ಸಂಸ್ಥೆಗೆ ಅನುದಾನ

* ಮಹಿಳಾ ವಿವಿ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶದಿಂದ ಮಂಡ್ಯದಲ್ಲಿ ವಿಸ್ತರಣಾ ಕೇಂದ್ರ ಸ್ಥಾಪಿಸಲು  ರೂ30 ಕೋಟಿ ಅನುದಾನ

* ಮೈಸೂರು ವಿವಿಯಲ್ಲಿ ನಾಲ್ವಡಿ ಒಡೆಯರ್ ಸಾಮಾಜಿಕ ಅಭಿವೃದ್ಧಿ ಅಧ್ಯಯನ ಪೀಠ ಸ್ಥಾಪನೆ

* ಬೆಳಗಾವಿಯ ರಾಣಿಚೆನ್ನಮ್ಮ, ವಿಜಾಪುರ ಮಹಿಳಾ ವಿವಿ ಹಾಗೂ ದಾವಣಗೆರೆ ವಿವಿಗೆ ತಲಾ  ರೂ5 ಕೋಟಿ ಅನುದಾನ

* 25 ಸರ್ಕಾರಿ ಕಾಲೇಜುಗಳಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸಿಹೆಚ್ಚಿಸಿ ಶೈಕ್ಷಣಿಕ ಸ್ವಾಯತ್ತತೆಗೆ ಅರ್ಹಗೊಳಿಸಲು ತಲಾ  ರೂ2 ಕೋಟಿ ಅನುದಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.