ಮಂಗಳವಾರ, ಏಪ್ರಿಲ್ 20, 2021
29 °C

1 ಲಕ್ಷ ಗಡಿ ದಾಟಿದ ಎಟಿಎಂ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ದೇಶದಾದ್ಯಂತ ಇರುವ ಒಟ್ಟು `ಎಟಿಎಂ~ಗಳ ಸಂಖ್ಯೆ  ಅಕ್ಟೋಬರ್ ಅಂತ್ಯಕ್ಕೆ 1ಲಕ್ಷದ ಗಡಿ ದಾಟಿದೆ ಎಂದು ರಾಷ್ಟ್ರೀಯ ಪಾವತಿ ಸಂಸ್ಥೆ (ಎನ್‌ಪಿಸಿಐ)   ಹೇಳಿದೆ.



ಸದ್ಯ ದೇಶದಲ್ಲಿ 1,04,500 `ಎಟಿಎಂ~ಗಳಿವೆ. (10 ಲಕ್ಷ ಜನರಿಗೆ 80 `ಎಟಿಎಂ~ನಂತೆ ) ಇದರಲ್ಲಿ ಸ್ಟೇಟ್ ಬ್ಯಾಂಕ್ ಸಮೂಹ (ಎಸ್‌ಬಿಐ) 61,500 `ಎಟಿಎಂ~ ಹೊಂದಿದ್ದು, ಶೇ 59ರಷ್ಟು ಪಾಲು ಹೊಂದಿದೆ.



ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು ದೇಶದಲ್ಲಿ ಒಟ್ಟು 41,800 (ಶೇ 40), ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು 1,150 (ಶೇ 1) `ಎಟಿಎಂ~ ಹೊಂದಿವೆ. ಮುಂದಿನ 2 ವರ್ಷಗಳಲ್ಲಿ ಹೆಚ್ಚುವರಿಯಾಗಿ ಇನ್ನೂ 1 ಲಕ್ಷ `ಎಟಿಎಂ~ ಸ್ಥಾಪಿಸುವ ಯೋಜನೆ ಬ್ಯಾಂಕುಗಳ ಮುಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.