ಬುಧವಾರ, ಮೇ 18, 2022
23 °C

10ನೇ ಕಲ್ಯಾಣಪರ್ವಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ಅಕ್ಟೋಬರ್ 9 ರಿಂದ ಮೂರು ದಿನಗಳವರೆಗೆ ಇಲ್ಲಿನ ಸಸ್ತಾಪುರ ರಸ್ತೆಯಲ್ಲಿನ ಬಸವ ಮಹಾಮನೆ ಆವರಣದಲ್ಲಿ ನಡೆಯುವ ಕಲ್ಯಾಣಪರ್ವಕ್ಕಾಗಿ ವೇದಿಕೆ ಮತ್ತು ಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.ಈ ಸಲ 10 ನೇ ಕಲ್ಯಾಣಪರ್ವ ಇರುವುದರಿಂದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಸುಮಾರು 2 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರಿಗೆ ಕುಳಿತುಕೊಳ್ಳಲು ಬೃಹತ್ ಮಂಟಪ ನಿರ್ಮಾಣವಾಗುತ್ತಿದೆ. ಅಲ್ಲದೆ ಬಸವ ಮಹಾಮನೆ ಆವರಣದಲ್ಲಿಯೇ ಭಕ್ತಾದಿಗಳಿಗೆ ಮೂರು ದಿನಗಳವರೆಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದರೂ ಯಾವುದೇ ತೊಂದರೆ ಆಗುವುದಿಲ್ಲ. ಕೆಲವರು ಪ್ರತಿಸಲ ವಿರೋಧಿಸುವುದನ್ನೇ ಕೆಲಸ ಮಾಡಿಕೊಂಡರೂ ಇದುವರೆಗಿನ ಕಾರ್ಯಕ್ರಮಗಳು ಯಶಸ್ವಿಯಾಗಿಯೇ ನಡೆದಿದೆ ಎಂದು ಕಾರ್ಯಕ್ರಮದ ಸಂಘಟಕರಾದ ಜಗದ್ಗುರು ಚೆನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ.ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಅಕ್ಟೋಬರ್ 9 ರಂದು ಬೆಳಿಗ್ಗೆ 10.30 ಗಂಟೆಗೆ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಉದ್ಘಾಟಿಸುವರು. ಧಾರವಾಡದ ಮಾತೆ ಗಂಗಾದೇವಿ ಧ್ವಜಾರೋಹಣ ನೆರವೆರಿಸುವರು. ಮಾತೆ ಮಹಾದೇವಿ ನೇತೃತ್ವ ವಹಿಸುವರು. ಆಂಧ್ರಪ್ರದೇಶದ ಸಂಸದ ಸುರೇಶ ಶೆಟಗಾರ್, ಶಾಸಕರಾದ ಶರಣಬಸಪ್ಪ ದರ್ಶನಾಪುರ, ರಹೀಮಖಾನ್ ಬೀದರ, ಮಾಲಿಕಯ್ಯ ಗುತ್ತೇದಾರ ಅಫಜಲಪುರ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸೀಮ ಪಟೇಲ್, ಮೀನಾಕ್ಷಿ ಸಂಗ್ರಾಮ, ಬಾಬುರಾವ ಮದಕಟ್ಟಿ, ಶ್ರೀಕಾಂತ ಸ್ವಾಮಿ, ಡಾ.ಎಸ್.ಎಸ್.ಗುಬ್ಬಿ, ರಾಜಕುಮಾರ ಹಂಚಿನಾಳ ಆಯ್.ಎಂ.ಎ ಅಧ್ಯಕ್ಷ ಡಾ.ಸಿ.ಎಸ್.ಮಾಲಿಪಾಟೀಲ, ಬೈಲಪ್ಪ ಕೊಟಗಿ ಪಾಲ್ಗೊಳ್ಳುವರು.ಅಂದು ಮಧ್ಯಾಹ್ನ ರಾಷ್ಟ್ರೀಯ ಬಸದಳದ ಅಧಿವೇಶನ ನಡೆಯುತ್ತದೆ. ಲಿಂಗಾಯತಧರ್ಮ ಮಹಾಸಭಾ ಸಂಘಟನೆ ಕುರಿತು ಚರ್ಚಿಸಲಾಗುತ್ತದೆ. ಸಂಜೆ ಧರ್ಮಚಿಂತನಗೋಷ್ಠಿ ನಡೆಯುತ್ತದೆ. ಕಾಂಗ್ರೆಸ್ ಸಮಿತಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು ಉದ್ಘಾಟಿಸುವರು. ಶಾಸಕಿ ಅರುಣಾ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಬಾಯಿ ಬೌದ್ಧೆ, ಗುಲ್ಬರ್ಗ ನಗರಸಭೆ ಸದಸ್ಯೆ ಆರತಿ ತಿವಾರಿ, ಡಾ.ಇಂದುಮತಿ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು.10 ರಂದು ಮಧ್ಯಾಹ್ನ ಧರ್ಮಚಿಂತನಗೋಷ್ಠಿ ನಡೆಯಲಿದ್ದು ಪಶು ಸಂಗೋಪನಾ ಸಚಿವ ರೇವು ನಾಯಕ್ ಬೆಳಮಗಿ ಉದ್ಘಾಟಿಸುವರು. ಮಾಜಿ ಶಾಸಕ ಸುಭಾಷ ಕಲ್ಲೂರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲಪಾಟೀಲ ಗಾದಗಿ, ಶಿವಶರಣಪ್ಪ ನಿಗ್ಗುಡಗಿ, ಸುರೇಶ ಸಜ್ಜನ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಡಿ.ಕೆ.ಸಿದ್ರಾಮ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಪಾಲ್ಗೊಳ್ಳುವರು.ಅಂದು ಸಂಜೆ 6 ಗಂಟೆಗೆ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಗೋಷ್ಠಿ ನಡೆಯುತ್ತದೆ. ರಾಜ್ಯ ಹೆಳವ ಸಮಾಜದ ಅಧ್ಯಕ್ಷ ಈ.ಕೃಷ್ಣಪ್ಪ ಉದ್ಘಾಟಿಸುವರು. ಕಾಡಾ ಮುಖ್ಯ ಲೆಕ್ಕಾಧಿಕಾರಿ ಎಸ್.ದಿವಾಕರ್  ಪಾಲ್ಗೊಳ್ಳುವರು.11 ರಂದು ಬೆಳಿಗ್ಗೆ 10.30 ಗಂಟೆಗೆ ಶೂನ್ಯಪೀಠಾರೋಹಣದ ವಾರ್ಷಿಕೋತ್ಸವ ನಡೆಯುತ್ತದೆ. ಮಧ್ಯಾಹ್ನ 12 ಗಂಟೆಗೆ ಬಸವಧರ್ಮದ ವಿಜಯೋತ್ಸವ ಮತ್ತು ಸಮಾರೋಪ ಸಮಾರಂಭ ನಡೆಯುತ್ತದೆ. ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್ ಉದ್ಘಾಟಿಸುವರು. ಮುಖಂಡರಾದ ಶಿವಾನಂದ ಮಂಠಾಳಕರ್, ದಿಲೀಪಕುಮಾರ ತಾಳಂಪಳ್ಳಿ, ಮಹಾರಾಷ್ಟ್ರದ ಮಾಜಿ ಸಚಿವ ಬಸವರಾಜ ಪಾಟೀಲ ಮುರುಮ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಚೆನ್ನಬಸವಾನಂದ ಸ್ವಾಮೀಜಿ ತಿಳಿಸಿದರು. ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ಹೈದ್ರಾಬಾದ್‌ನ ಬಸವಲಿಂಗ ಸ್ವಾಮಿ, ಬಸವಪ್ರಭು ಸ್ವಾಮಿ, ವೀರಶೆಟ್ಟಿ ಇಮ್ಡಾಪುರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.