ಶನಿವಾರ, ಜನವರಿ 18, 2020
26 °C

10 ಮಂದಿಗೆ ‘ಶ್ರೇಷ್ಠ ಪಶುವೈದ್ಯ’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕರ್ನಾಟಕ ಪಶುವೈದ್ಯಕೀಯ ಸಂಘ­ದ ಆಶ್ರಯದಲ್ಲಿ ಡಿಸೆಂಬರ್‌ 14–15ರಂದು ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ‘ರಾಜ್ಯ­ಮಟ್ಟ­ದ ಪಶುವೈದ್ಯಕೀಯ ತಾಂತ್ರಿಕ ವಿಚಾ­ರ ಸಂಕಿರಣ–2013’ ನಡೆಯಲಿದೆ.ಈ ದ್ವೈವಾರ್ಷಿಕ ಸಮ್ಮೇಳನದಲ್ಲಿ ರಾಜ್ಯ­ದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಪಶುವೈದ್ಯರಿಗೆ ‘ಶ್ರೇಷ್ಠ ಪಶುವೈದ್ಯ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಟಿ.­ಶ್ರೀನಿವಾಸ ರೆಡ್ಡಿ ಶುಕ್ರವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಹೇಳಿದರು.ಉತ್ತರಕನ್ನಡದ ಶಿರಸಿಯ ಡಾ. ಜಿ.­ವಿ. ಹೆಗಡೆ, ತುಮಕೂರು ಕುಣಕೇನ­ಹಳ್ಳಿ­ಯ ಡಾ.ಡಿ.ವಿ. ಕಾಂತರಾಜು, ಬೆಂಗಳೂರು ಮಿಲ್ಕ್‌ ಯೂನಿಯನ್‌ನ ಡಾ.­ಟಿ. ಗುರುಲಿಂಗಪ್ಪ, ಬೆಂಗಳೂರು ಪಶು ಆರೋಗ್ಯ ಮತ್ತು ಜೈವಿಕ ಕೇಂದ್ರದ ಡಾ.­ಎಂ.­ಡಿ.ವೆಂಕಟೇಶ್‌, ಬೆಂಗಳೂರು ಎನ್‌ಡಿ­ಆರ್‌ಎ ಡಾ.ಕೆ.ಪಿ.ರಮೇಶ, ಗುಲ್ಬರ್ಗ ಶರಣಶಿರಸಗಿಯ ಡಾ. ಪ್ರಹ್ಲಾದ್‌ ಮದ್ದೂರ್, ಮೈಸೂರಿನ ಡಾ.­ಅರುಣ, ಕೊಪ್ಪಳದ ಡಾ. ತಿಪ್ಪಣ್ಣ ತಳ­ಕಲ್, ಶಿವಮೊಗ್ಗದ ಡಾ, ವೀರಣ್ಣ ಕೆ.ಸಿ, ಹಾಗೂ ಬಳ್ಳಾರಿಯ ಡಾ. ಟಿ. ಶಶಿಧರ ಅವರಿಗೆ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪ್ರತಿಕ್ರಿಯಿಸಿ (+)