ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಮೀ. ಓಟ: ಕೃಷ್ಣಪ್ಪ, ಆಲ್ಫಾ ಪ್ರಥಮ

Last Updated 14 ಡಿಸೆಂಬರ್ 2012, 10:06 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿಯ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕೂಟದ ಎರಡನೇ ದಿನವಾದ ಗುರುವಾರ ಪುರುಷರ 10 ಸಾವಿರ ಮೀಟರ್ ಓಟದ ಪುರುಷರ ವಿಭಾಗದಲ್ಲಿ ಜೆಎಸ್‌ಎಸ್ ಕಾಲೇಜಿನ ಕೃಷ್ಣಪ್ಪ ಸಂತಿ ಹಾಗೂ ಮಹಿಳೆಯರ ವಿಭಾಗದಲ್ಲಿ  ಹುಬ್ಬಳ್ಳಿಯ ನೆಹರು ಕಾಲೇಜಿನ ಸಿ. ಆಲ್ಫಾ  ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ಕೃಷ್ಣಪ್ಪ 30:07:04 ನಿ. ದಲ್ಲಿ ಗುರಿ ತಲುಪಿದರು. ಮೊದಲ ದಿನ ನಡೆದ ಪುರುಷರ 5 ಸಾವಿರ ಮೀಟರ್ ಓಟನಲ್ಲೂ ಅವರು ಪ್ರಥಮ ಸ್ಥಾನ ಪಡೆದಿದ್ದರು. ಸಿ. ಆಲ್ಫಾ  51:53:03 ನಿ. ಅವಧಿಯಲ್ಲಿ ಓಟ ಪೂರೈಸಿದರು. 1500 ಮೀ ಓಟದಲ್ಲಿ  ಶ್ರುತಿ ದೇವಶೆಟ್ಟಿ ಪ್ರಥಮ ಸ್ಥಾನ (6:12:93 ನಿ) ಪಡೆದರು. ಕೂಟದ ಮೊದಲ ದಿನ 800 ಮೀಟರ್ ಓಟದಲ್ಲೂ ಅವರು ಮೊದಲ ಸ್ಥಾನ ಪಡೆದಿದ್ದರು.

ಫಲಿತಾಂಶ ಪುರುಷರ ವಿಭಾಗ
10 ಸಾವಿರ ಮೀಟರ್ ಓಟ: ಕೃಷ್ಣಪ್ಪ ಸಂತಿ (ಜೆಎಸ್‌ಎಸ್ ಕಾಲೇಜು, ಧಾರವಾಡ. 30:07:04 ನಿ. )-1 ಶಿವಾನಂದ ಹತ್ತಿಕಟಗಿ (ಜೆಎಸ್‌ಎಸ್ ಕಾಲೇಜು, ಧಾರ ವಾಡ) -2,  ಜೆ. ಕಾಶಪ್ಪ ( ಪಿ.ಜಿ.ಜಿಮ್ಖಾನ, ಕರ್ನಾಟಕ ವಿ.ವಿ) -3
110 ಮೀ. ಹರ್ಡಲ್ಸ್: ಕಾಸ್ಟಾನ್ಸಿಯೊ ( ಎಸ್‌ಡಿಎಂ ಪದವಿ ಕಾಲೇಜು, ಹೊನ್ನಾವರ. 18.47 ನಿ.)-1, ನಾಗರಾಜ ಜಿ.ನಾಯಕ ( ಪ್ರಥಮ ದರ್ಜೆ ಕಾಲೇಜು, ಹೊನ್ನಾವರ) -2, ಮೊಹಮ್ಮದ್ ಹಿಜ್ದಾಲ್ ( ಅಂಜುಮನ್ ಕಾಲೇಜು, ಭಟ್ಕಳ)-3.

1500 ಮೀಟರ್ ಓಟ: ಚನ್ನಬಸಪ್ಪ ಜಾಲಿಹಾಳ ( ಜೆಎಸ್‌ಎಸ್ ಕಾಲೇಜು, 4:15:68 ನಿ. )-1, ರವಿ ಬಂಡಿ ವಡ್ಡರ ( ಕಾಡಸಿದ್ಧೇಶ್ವರ ಕಾಲೇಜು, ಹುಬ್ಬಳ್ಳಿ) -2, ವಿವೇಕ ಎಂ.ನಾಯ್ಕ ( ಪ್ರಥಮ ದರ್ಜೆ ಕಾಲೇಜು, ಕುಮಟಾ) -3
400 ಮೀಟರ್ ಓಟ: ಗಣೇಶ ನಾಯ್ಕ- ( ಜೆಎಸ್‌ಎಸ್ ಕಾಲೇಜು, ಧಾರವಾಡ. 51:15 ಸೆ)-1, ವಿ. ಪ್ರವೀಣಕುಮಾರ್ (ಜೆಎಸ್‌ಎಸ್ ಕಾಲೇಜು)- 2, ಎ.ಎಂ.ಚವರದಾರ್ (ಅಂಜುಮನ್ ಕಾಲೇಜು) -3+

ಹೈಜಂಪ್: ಎಚ್.ಎನ್.ಅಗಸನಮಟ್ಟಿ ( ಬಿಇಎಸ್ ಮರ್ಚಂಟ್ ಕಾಲೇಜು, ಬ್ಯಾಡಗಿ. 1.67 ಮೀ. )-1, ನಾಗರಾಜ ಗೌಡ (ಪ್ರಥಮ ದರ್ಜೆ ಕಾಲೇಜು. ಅಂಕೋಲಾ)-2, ಮಿಥುನ್ ಎಂ.ಅಣ್ವೇಕರ್ (ಪ್ರಥಮ ದರ್ಜೆ ಕಾಲೇಜು. ಕಾರವಾರ)- 3

ಜಾವೆಲಿನ್ ಥ್ರೋ: ಗಣೇಶ ಗೌಡ (ಪ್ರಥಮ ದರ್ಜೆ ಕಾಲೇಜು, ಶಿರಸಿ. 52.41 ಮೀ.)-1, ಎಸ್.ಎಚ್.ಗುಂಜಾವತಿ (ಪ್ರಥಮ ದರ್ಜೆ ಕಾಲೇಜು- ಕಲಘಟಗಿ)- 2,  ರಾಜೀವ ಹೆಗಡೆ (ಎಂ.ಎಂ. ಕಾಲೇಜು, ಶಿರಸಿ)-3.
ಟ್ರಿಪಲ್ ಜಂಪ್: ಸಂಪತ್ ಬಂಗಾಡಿ ( ಶಿಗ್ಗಾಂವಿ. 13.08 ಮೀ.)-1, ಯೋಗೇಶ ವಿ.ಕುಮಟಾಕರ (ಪ್ರಥಮ ದರ್ಜೆ ಕಾಲೇಜು-ಯಲ್ಲಾಪುರ)-2, ಗುರುಪಾದ ಬಿ.ಗೌಡ (ಪ್ರಥಮ ದರ್ಜೆ ಕಾಲೇಜು, ಕುಮಟಾ)-3.

ಮಹಿಳೆಯರ ವಿಭಾಗ
10 ಸಾವಿರ ಮೀಟರ್ ಓಟ: ಸಿ. ಆಲ್ಫಾ (ನೆಹರು ಕಾಲೇಜು, ಹುಬ್ಬಳ್ಳಿ. 51:53:03 ನಿ.)-1, ರಶ್ಮಿ ಲಕ್ಕುಂಡಿ ( ಕಾಡಸಿದ್ಧೇಶ್ವರ ಕಾಲೇಜು, ಹುಬ್ಬಳ್ಳಿ)-2, ಎಂ.ಜಿ.ಆರ್.ದಾಮಿನಿ (ಜೆಎಸ್‌ಎಸ್ ಕಾಲೇಜು, ಧಾರವಾಡ)-3.
1500 ಮೀಟರ್ ಓಟ: ಶ್ರುತಿ ದೇವಶೆಟ್ಟಿ (ಪ್ರಥಮ ದರ್ಜೆ ಕಾಲೇಜು, ಧಾರವಾಡ. 6:12:93 ನಿ.)-1, ಗಂಗೂಬಾಯಿ ಮೇಗನಿ (ಪ್ರಥಮ ದರ್ಜೆ ಕಾಲೇಜು, ಹಳಿಯಾಳ)-2, ವಿಜಯಲಕ್ಷ್ಮೀ ಪೂಜಾರ (ಕಾಡಸಿದ್ಧೇಶ್ವರ ಕಾಲೇಜು, ಹುಬ್ಬಳ್ಳಿ)- 3

400 ಮೀಟರ್ ಓಟ: ಎನ್.ಅನಿತಾ ( ಕೆಸಿಡಿ ಕಾಲೇಜು. 1:03:11 ನಿ. )-1, ರಂಜಿತಾ ನಾಯ್ಕ (ಕೆಎಲ್‌ಇ ಕಲಾ, ವಾಣಿಜ್ಯ ಕಾಲೇಜು. ಅಂಕೋಲಾ)-2, ಎಂ.ಕೆ.ಕಾವ್ಯಾ (ಸಿಎಸ್‌ಐ ಕಾಲೇಜು, ಧಾರವಾಡ)-3

ಜಾವೆಲಿನ್ ಥ್ರೋ:  ಸುಷ್ಮಾ ಭಂಡಾರಿ ( ಎಸ್‌ಡಿಎಂ ಪದವಿ ಕಾಲೇಜು, ಹೊನ್ನಾವರ. 36:22 ಮೀ.)-1, ಜಿ.ಸೀಮಾ (ಸರ್ಕಾರಿ ಕಲಾ, ವಿಜ್ಞಾನ ಕಾಲೇಜು, ಕಾರವಾರ)- 2, ರಾಖಿ ನಾಯ್ಕ ( ಜೆಎಸ್‌ಎಸ್ ಕಾಲೇಜು, ಧಾರವಾಡ)- 3
ಟ್ರಿಪಲ್ ಜಂಪ್: ಚಂದ್ರವ್ವ ಸನಾದಿ ( ಜೆಎಸ್‌ಎಸ್ ಕಾಲೇಜು. 10.74 ಮೀ.),  ಪೂಜಾ ನಾಯ್ಕ (ಶಿವಾಜಿ ಕಲಾ, ವಾಣಿಜ್ಯ ಕಾಲೇಜು, ಬಾಡಾ)-2, ಸುಧಾ ದೊಡಗೌಡರ (ಸಿಬಿಎಸ್ ಕಾಲೇಜು)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT