ಬೆಂಗಳೂರು: ಬಿಇಎಲ್ ನೌಕರರಿಗೆ ವಾರ್ಷಿಕ ಬೋನಸ್ಗೆ ಬದಲಾಗಿ ನೀಡ ಲಾಗುತ್ತಿರುವ ‘ಪ್ಲಾಂಟ್ ಪರ್ಫಾರ್ಮನ್ಸ್ ಇನ್ಸೆಂಟೀವ್’ (ಪಿಪಿಐ) ನೀಡಲು ವಿಳಂಬ ಮಾಡು ತ್ತಿರುವ ಆಡಳಿತ ವರ್ಗದ ಧೋರಣೆ ಖಂಡಿಸಿ ಇದೇ ೧೧ ರಂದು ಬಿಇಎಲ್ನ 9 ಘಟಕಗಳಲ್ಲಿ ಮುಷ್ಕರ ನಡೆಸಲು ಸಂಯುಕ್ತ ಕ್ರಿಯಾ ರಂಗ ನಿರ್ಧರಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗದ ಅಧ್ಯಕ್ಷ ಪ್ರೊ. ಬಿ.ಕೆ. ಚಂದ್ರಶೇಖರ್, ೨೦೧೨-–೧೩ನೇ ಸಾಲಿನಲ್ಲಿ ಬಿಇಎಲ್ನ ವಾರ್ಷಿಕ ವಹಿವಾಟು ₨ ೬೦೧೨ ಕೋಟಿ ರೂಪಾಯಿ ಇತ್ತು. ಇದರಲ್ಲಿ ₨ ೧೧೦೪ ರೂಪಾಯಿ ಲಾಭ ಇದೆ. ಕಾಲ ಕಾಲಕ್ಕೆ ಪಿಪಿಐ ಹಣವನ್ನು ನೀಡುತ್ತಿದ್ದ ಸಂಸ್ಥೆ ಈಗ ಆರು ತಿಂಗಳಿಂದ ನೌಕರರಿಗೆ ಹಣ ನೀಡಿಲ್ಲ ಎಂದು ಆರೋಪಿಸಿದರು.

ಪಿಪಿಐ ಯೋಜನೆಯನ್ನು ೧೯೯೪–-೯೫ರಲ್ಲಿ ಬೋನಸ್ ಕಾಯ್ದೆಯಿಂದ ಹೊರಗುಳಿಯುವ ಕಾರ್ಮಿಕರಿಗಾಗಿ ರೂಪಿಸಲಾಗಿದ್ದು, ಈ ಯೋಜನೆ ಯನ್ನು 3ವರ್ಷಗಳಿಗೊಮ್ಮೆ ಪರಿಷ್ಕ ರಣೆ ಮಾಡಲಾಗುತ್ತಿತ್ತು. ಅದರಂತೆ ಈ ಬಾರಿ ಪಿಪಿಐ ಯೋಜನೆಯ ಪರಿಷ್ಕರಣೆ ಆಗಬೇಕಿದೆ ಎಂದರು.

ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಂಸ್ಥೆಯ ೯ ಘಟಕಗಳ ಕಾರ್ಮಿಕರು ಏಕಕಾಲಕ್ಕೆ ಕೆಲಸವನ್ನು ಸ್ಥಗೊತಗೊ ಳಿಸಿ, ಪ್ರತಿಭಟನೆ ನಡೆಸಲಿದ್ದಾರೆ. ಬೆಂಗ ಳೂರಿನಲ್ಲಿ ಜಾಲಹಳ್ಳಿಯ ಬಿಇಎಲ್ ಕಾರ್ಖಾನೆ ಎದುರು ಬೆಳಗ್ಗೆ ೬.೩೦ಕ್ಕೆ ಪ್ರತಿಭಟನೆ ನಡೆಯಲಿದ್ದು, ೧೧ ಸಾವಿರ ಕಾರ್ಮಿಕರು ಭಾಗವಹಿಸಲಿದ್ದಾರೆ. ಒಂದುವೇಳೆ ಆಡಳಿತ ವರ್ಗ ಬೇಡಿಕೆ ಗಳಿಗೆ ಒಪ್ಪಿಗೆ ನೀಡಿದರೆ ಪ್ರತಿಭಟನೆ ಕೈ ಬಿಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.