ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

120 ಬಗೆ ಕೇಶವಿನ್ಯಾಸ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಲಂಡನ್‌(ಪಿಟಿಐ): ‘ಉಕ್ಕಿನ ಮಹಿಳೆ’ ಎಂದು ಕರೆಸಿ­ಕೊಂಡಿದ್ದ ಬ್ರಿಟನ್‌್ ಮಾಜಿ ಪ್ರಧಾನಿ ಮಾರ್ಗ­ರೇಟ್‌್ ಥ್ಯಾಚರ್‌ ಅವರು ಕೇಶ­ವಿನ್ಯಾಸಕ್ಕೆ ಹೆಚ್ಚಿನ ಗಮನ ಕೊಡುತ್ತಿದ್ದರಂತೆ.

1984ರಲ್ಲಿ ಅವರು 120 ಬಾರಿ ಬ್ಯೂಟಿ ಪಾರ್ಲರ್‌ಗೆ ಭೇಟಿ ನೀಡಿದ್ದರು ಎನ್ನುವುದು ಅವರ ದಿನಚರಿ ನೋಡಿದರೆ ತಿಳಿಯುತ್ತದೆ.
ಕೇಶಾಲಂಕಾರ, ದಿರಿಸು ಹಾಗೂ ಟ್ರೇಡ್‌­ಮಾರ್ಕ್‌ ಕೈಚೀಲಗಳಿಂದ ಪ್ರಸಿದ್ಧಿ ಪಡೆದಿದ್ದ  ಥ್ಯಾಚರ್‌, 1979ರಿಂದ 1990ರವರೆಗೆ ಪ್ರಧಾನಿಯಾಗಿದ್ದರು.  ಥ್ಯಾಚರ್‌ ಜೀವನ ಶೈಲಿ­ ಬಹಿ­ರಂಗ­ಪಡಿ­ಸುವ ದಿನ­ಚರಿ ಯಲ್ಲಿ ಅವರ ಕೇಶವಿನ್ಯಾ­ಸದ ಬಗ್ಗೆಯೂ ಪ್ರಸ್ತಾಪವಿದೆ.

25 ಮೀನುಗಾರರ ಬಂಧನ
ಕೊಲಂಬೊ(ಐಎಎನ್ಎಸ್):
ಶ್ರೀಲಂಕಾ ನೌಕಾಪಡೆ ಭಾರತದ 25 ಮೀನುಗಾರರನ್ನು ಶುಕ್ರವಾರ ಬಂಧಿಸಿದೆ.

ಇದರೊಂದಿಗೆ ಡಿಸೆಂಬರ್‌ನಿಂದ ಈವರೆಗೆ ಬಂಧನಕ್ಕೊಳಗಾದ ಭಾರತದ ಮೀನುಗಾರರ ಸಂಖ್ಯೆ 180ಕ್ಕೆ ಏರಿದೆ. ಈ ಪ್ರಕರಣ ಭಾರತ ಹಾಗೂ ಶ್ರೀಲಂಕಾ ನಡುವೆ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಸೋನಿಯಾ ಮನವಿ
ನ್ಯೂಯಾರ್ಕ್‌ (ಪಿಟಿಐ):
ನವದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೂಡ­ಲಾಗಿರುವ ಮಾನವಹಕ್ಕು ಉಲ್ಲಂಘನೆ ಮೊಕ­ದ್ದಮೆಯನ್ನು ವಜಾಗೊಳಿಸಬೇಕೆಂದು ಕೋರಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಮೆರಿಕ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಫೆಬ್ರುವರಿ 7ರಂದು ನ್ಯೂಯಾ­ರ್ಕ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ಸೋನಿಯಾ ಅರ್ಜಿ ಸಲ್ಲಿಸಲಿದ್ದಾರೆ.

ಬಾಲ ಆರೋಪಿಗೆ ಜಾಮೀನು
ಮೆಲ್ಬರ್ನ್(ಪಿಟಿಐ):
ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿ­ಸ­ಲಾಗಿದ್ದ  ಬಾಲ ಆರೋಪಿಗೆ ಆಸ್ಟ್ರೇಲಿಯಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

‘ತನಿಖೆಯಲ್ಲಿ ಪೊಲೀಸರೊಂದಿಗೆ ನೆರ­ವಾ­ಗುತ್ತೇನೆ  ಹಾಗೂ  ಇತರ ಆರೋಪಿಗ­ಳೊಂದಿಗೆ ಸೇರುವುದಿಲ್ಲ’ ಎಂದು ಆರೋಪಿ ಹೇಳಿಕೆ ನೀಡಿದ ನಂತರ ಬಾಲ ನ್ಯಾಯಾಲಯ ಜಾಮೀನು ನೀಡಿದೆ. ಉದ್ದೇಶ ಪೂರ್ವಕ­ವಾಗಿಯೇ ಇತರ ದುಷ್ಕರ್ಮಿ­ಗಳೊಂದಿಗೆ ಸೇರಿ ಹಲ್ಲೆ ನಡೆಸಿದ ಆರೋಪ ಈತನ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT