ಮನಿಲಾ (ಎಪಿ): ಭೀಕರ ‘ಹೈಯಾನ್’ ಚಂಡಮಾರುತದಿಂದಾಗಿ ಫಿಲಿಪ್ಪೀನ್ಸನಲ್ಲಿ ಸುಮಾರು 1,200ಕ್ಕೂ ಹೆಚ್ಚು ಜನರು ಮೃತಪಟ್ಟಿರಬಹುದು ಎಂದು ರೆಡ್‌ಕ್ರಾಸ್ ಸಂಸ್ಥೆಯ ಸ್ಥಳೀಯ ಪ್ರತಿನಿಧಿಗಳು ಹೇಳಿದ್ದಾರೆ. ಆದರೆ ಇವರು ಸತ್ತವರ ಸಂಖ್ಯೆಯ ಖಚಿತ ಮಾಹಿತಿಯನ್ನು ಒದಗಿಸಿಲ್ಲ.

ಆದರೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಡ್ವರ್ಡೊ ಡೆಲ್ ರೊಸಾರಿಯೊ ಅವರ ಪ್ರಕಾರ; ಕನಿಷ್ಠ 138 ಮಂದಿ ಸತ್ತಿದ್ದಾರೆ ಮತ್ತು 40 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಮಧ್ಯೆ, ಈವರೆಗಿನ ದಾಖಲೆಯಲ್ಲಿ ಇರುವುದಕ್ಕಿಂತ ಅತಿ ಉಗ್ರ ಚಂಡಮಾರುತ ‘ಹೈಯಾನ್’ ಅಪ್ಪಳಿಸಿದ್ದರಿಂದ ಫಿಲಿಪ್ಪೀನ್ಸ್‌ನ ಲೆಯಟೆ ದ್ವೀಪದ ಟಕ್ಲೊಬಾನ್ ನಗರದಲ್ಲಿ ನೂರಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ನಗರದ ವಿವಿಧ ರಸ್ತೆ ಗಳಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ನಾಗರಿಕ ವಿಮಾನ ಯಾನ ಸಂಸ್ಥೆಯ ಉಪ ಮಹಾ ನಿರ್ದೇಶಕ ಕ್ಯಾಪ್ಟನ್ ಜಾನ್ ಅಂಡ್ರ್ಯೂ ತಿಳಿಸಿದ್ದಾರೆ. ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಸಂಪೂರ್ಣವಾಗಿ ಕುಸಿದಿದೆ ಎಂದಿದ್ದಾರೆ.

ಗಂಟೆಗೆ 235 ಕಿ.ಮೀ. ವೇಗದ ಗಾಳಿಯೊಂದಿಗೆ ಕಡಲತೀರಕ್ಕೆ ಅಪ್ಪಳಿಸಿದ ‘ಹೈಯಾನ್’ ಭಾರಿ ಪ್ರಮಾಣದ ಹಾನಿ ಉಂಟು ಮಾಡಿದೆ. ಗಾಳಿ ವೇಗವನ್ನು ಪರಿಗಣನೆಗೆ ತೆಗೆದುಕೊಂಡಾಗ ಇದುವರೆಗಿನ ಎಲ್ಲಾ ಚಂಡಮಾರುತಕ್ಕಿಂತ ‘ಹೈಯಾನ್’ ಭೀಕರವಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಗಿನ ಜಾವ ಚಂಡಮಾರುತ ಅಪ್ಪಳಿಸಿ ಸಾವು– ನೋವುಗಳು ಉಂಟಾಗಿದ್ದರೂ ಸಂಪರ್ಕ ಕಡಿತದಿಂದಾಗ ಸ್ಪಷ್ಟ ಮಾಹಿತಿ ದೊರಕಿರಲಿಲ್ಲ. ನಾಲ್ವರು ಸತ್ತ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿತ್ತು ಎಂದು ಆಡ್ರ್ಯೂ ತಿಳಿಸಿದ್ದಾರೆ.

ಚಂಡಮಾರುತ ಅಪ್ಪಳಿಸಿದ ರಭಸಕ್ಕೆ ಮನೆ ಮೇಲ್ಛಾವಣಿಗಳು ಹಾರಿ ಹೋಗಿವೆ, ಅನೇಕ ಮನೆಗಳು ನೆಲಸಮವಾಗಿವೆ, ಅಲ್ಲಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿದುಹೋಗಿದೆ ಎಂದು ಲೆಯಟೆ ದ್ವೀಪದ ಗವರ್ನರ್ ರೊಜರ್ ಮೆರ್ಕ್ಯಾಡೊ ತಿಳಿಸಿದ್ದಾರೆ. ಇಡೀ ದಿನ ದಟ್ಟವಾದ ಕಪ್ಪು ಮೋಡ ಆವರಿಸಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಹಗಲಿನಲ್ಲೂ ಕತ್ತಲೆ ಆವರಿಸಿತ್ತು ಎಂದು ಹೇಳಿದ್ದಾರೆ.

ವಿಯೆಟ್ನಾಂನಲ್ಲೂ ಜನರ ಸ್ಥಳಾಂತರ
ಹನಾಯ್ (ಎಎಫ್‌ಪಿ): ಫಿಲಿ ಪ್ಪೀನ್ಸ್ ಕಡಲತೀರಕ್ಕೆ ಅಪ್ಪಳಿಸಿದ ಹೈಯಾನ್ ಚಂಡಮಾರುತವು ನಂತರ ವಿಯೆಟ್ನಾಂ ಕಡಲತೀರದ ಕಡೆಗೆ ಸಾಗುತ್ತಿದೆ.
ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಯೆಟ್ನಾಂ ಸರ್ಕಾರವು ಕಡಲ ತೀರದ ಪಟ್ಟಣ ಮತ್ತು ಗ್ರಾಮಗಳ ಸುಮಾರು ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.

ಭಾನುವಾರ ಬೆಳಗಿನ ಜಾವ ಕೇಂದ್ರ ವಿಯೆಟ್ನಾಂನ ಕಡಲತೀರಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದನಾಂಗ್ ಮತ್ತು ಕ್ವಾಂಗ್ ಗಾಯಿ ಪ್ರಾಂತ್ಯದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಚಂಡ ಮಾರುತ ಹಾನಿಯನ್ನು ಎದುರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.