13ನೇ ವರ್ಷ ಕಾಲಿಟ್ಟ ಶರ್ಮಿಳಾ ಉಪವಾಸ
ಇಂಫಾಲ (ಪಿಟಿಐ): ಸೇನೆಗೆ ವಿಶೇಷ ಅಧಿಕಾರ ನೀಡುವ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಮಣಿಪುರದ `ಉಕ್ಕಿನ ಮಹಿಳೆ~ ಶರ್ಮಿಳಾ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸೋಮವಾರ 13ನೇ ವರ್ಷಕ್ಕೆ ಕಾಲಿಟ್ಟಿದೆ.
2000 ನವೆಂಬರ್ 2ರಲ್ಲಿ ಅಸ್ಸಾಂ ರೈಫಲ್ಸ್ನ ಯೋಧರು ಇಂಫಾಲ ಸಮೀಪದ ಮಲೋಮ ಎಂಬಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಬಲಿಯಾಗಿದ್ದರು. ಇದನ್ನು ವಿರೋಧಿಸಿ ಸೇನೆಗೆ ವಿಶೇಷ ಅಧಿಕಾರವನ್ನು ನೀಡಿರುವ ಕಾಯ್ದೆಯನ್ನು ವಾಪಸು ಪಡೆಯುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತೆ, ಅಂಕಣಕಾರರಾಗಿದ್ದ ಶರ್ಮಿಳಾ 2000 ನ. 5ರಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.