ಸೋಮವಾರ, ಮಾರ್ಚ್ 1, 2021
23 °C

13ರಿಂದ ಜಿನಬಿಂಬ ಮಹಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

13ರಿಂದ ಜಿನಬಿಂಬ ಮಹಾಭಿಷೇಕ

ಅರಸೀಕೆರೆ: ಪಟ್ಟಣದ ಅರಸೀಕೆರೆ–ಹುಳಿಯಾರು ರಸ್ತೆ ಬದಿಯಿರುವ ಸಹಸ್ರ ಜಿನಕೂಟ ಜಿನಾಲಯದಲ್ಲಿ ಸಹಸ್ರಕೂಟ ಜಿನಬಿಂಬ ಮಹಾಭಿಷೇಕ ಪೂಜಾ ಮಹೋತ್ಸವ ಕಾರ್ಯಕ್ರಮ ಫೆ. 13ರಿಂದ 17ರವರೆಗೆ ಧಾರ್ಮಿಕ ವಿಧಿ– ವಿಧಾನಗಳೊಂದಿಗೆ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಕದಂಬಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.ಅಂದು ಬೆಳಿಗ್ಗೆ 10.30 ಗಂಟೆಗೆ  ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯ­ಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ದಿಗಂಬರ ಜೈನ ಸಹಸ್ರಕೂಟ ಜಿನಾಲಯ ಸೇವಾ ಸಮಿತಿ ಕಾರ್ಯಾಧ್ಯಕ್ಷ ಎ.ಪಿ. ದಶರಥಶೆಟ್ಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.ವಿಚಾರಪಟ್ಟ ಕ್ಷುಲ್ಲಕಶ್ರೀ ಸಿದ್ಧಾಂತಕಶ್ರೀ ಪಾಲ್ಗೊಳ್ಳಲಿದ್ದಾರೆ. ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿ­ಚೌಡಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಪುರಸಭೆ ಅಧ್ಯಕ್ಷ ಮೋಹನ್‌ ಕುಮಾರ್‌, ತಹಶೀಲ್ದಾರ್‌ ಕೇಶವ­ಮೂರ್ತಿ, ಡಿವೈಎಸ್‌ಪಿ ಮಂಜುನಾಥ್‌ ಅತಿಥಿಗಳಾಗಿ ಆಗಮಿಸುವರು ಎಂದು ಅವರು ತಿಳಿಸಿದರು.ವಿಶೇಷ ಆಹ್ವಾನಿತರಾಗಿ ವಿದ್ವಾಂಸ­ರಾದ ಡಾ.ಹಂ.ಪ. ನಾಗರಾಜಯ್ಯ, ಡಾ.ಕಮಲಾ ಹಂಪನಾ, ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ ಎಸ್‌. ಜಿತೇಂದ್ರ ಕುಮಾರ್‌, ದಿಗಂಬರ ಜೈನ ಸಹಸ್ರಕೂಟ ಜಿನಾಲಯ ಸೇವಾ ಮಂಡಳಿಯ ಮಾಜಿ ಅಧ್ಯಕ್ಷ ಡಿ. ಜಿನದತ್ತಶೆಟ್ಟಿ, ಅರಸೀಕೆರೆ ವರ್ಧಮಾನ ಸ್ಥಾನಕ ವಾಸಿ ಜೈನಸಂಘ ಅಧ್ಯಕ್ಷ ಮಹಾವೀರ್‌ ಜೀಬೋಹ್ರಾ,

ಶ್ವೇತಾಂಬರ ಜೈನಮೂರ್ತಿ ಪೂಜಕ ಸಂಘದ ಅಧ್ಯಕ್ಷ ಫಾರಸ್‌ಮಲ್‌ಜೀ ವೇದಮುತ್ತ, ಹೊಸದುರ್ಗ ಮಾಜಿ ಶಾಸಕ ಇಲ್ಕಲ್‌ ವಿಜಯ್‌ಕುಮಾರ್‌, ದಿಗಂಬರ ಜೈನ ಸಮಾಜ ಜಿಲ್ಲಾಧ್ಯಕ್ಷ  ಎಚ್‌.ಪಿ. ನಾಗೇಂದ್ರಯ್ಯ, ಕರ್ನಾಟಕ ದಿಗಂಬರ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕೇಸರಿರತ್ನರಾಜಯ್ಯ ಭಾಗ­ವಹಿಸ­ಲಿದ್ದಾರೆ ಎಂದು ಹೇಳಿದರು.ಅಭಿಷೇಕ: ಫೆ. 16ರಂದು ಬೆಳಿಗ್ಗೆ 8ಗಂಟೆಗೆ ಪಲ್ಲಕ್ಕಿಯಲ್ಲಿ ತೀರ್ಥಂಕರ ಭಗವಂತರ ಪ್ರತಿಮೆಯನ್ನು ಪೂರ್ಣ­ಕುಂಭ ಮಂಗಲ ಕಳಶಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯೊಂದಿಗೆ ತರಲಾಗುವುದು. ಬೆಳಿಗ್ಗೆ 9ಗಂಟೆಗೆ ಸಹಸ್ರಕೂಟ ಜಿನಬಿಂಬಕ್ಕೆ 1,008 ಕಳಶಗಳಿಂದ ಜಲಾಭಿಷೇಕ ಆರಂಭ, ಬೆಳಿಗ್ಗೆ 10.30 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಮಧ್ಯಾಹ್ನ 2ಗಂಟೆಗೆ ಪಂಚಾಮೃತಾಭಿಷೇಕ ನಡೆಯುವುದು ಎಂದು ಅವರು ವಿವರಿಸಿದರು.ಕಲ್ಪತರು ನಾಡೆನಿಸಿದ ಅರಸೀಕೆರೆ ಪಟ್ಟಣದಲ್ಲಿ ಕ್ರಿಶ್ತಶಕ 13ನೇ ಶತಮಾನದಲ್ಲಿ ಹೊಯ್ಸಳ ಅರಸರ ದಂಡನಾಯಕ ರೇಚಿಮಯ್ಯ ಮತ್ತು ಪತ್ನಿ ಗೌರಾದೇವಿ ಅವರಿಂದ ಸಹಸ್ರಕೂಟ ಜಿನಾಲಯವು ನಿರ್ಮಾಣ­ಗೊಂಡಿತು.ಶ್ರವಣಬೆಳಗೊಳ ಎಸ್‌ಡಿಜೆಎಂಐ ವ್ಯವಸ್ಥಾಪನಾ ಸಮಿತಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ, ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ಹಾಗೂ ದಿಗಂಬರ ಜೈನ ಸಹಸ್ರಕೂಟ ಜಿನಾಲಯ ಸೇವಾ ಮಂಡಲಿ ಸದಸ್ಯರು ಹಾಗೂ ಸಮಸ್ತ ದಿಗಂಬರ ಜೈನ ಸಮಾಜದ ವತಿಯಿಂದ ದುಃಸ್ಥಿತಿಯಲ್ಲಿದ್ದ ಸಹಸ್ರಕೂಟ ಜಿನಾಲಯವನ್ನು ನವೀಕರಣ­ಗೊಳಿಸಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಸೇವಾ ಮಂಡಳಿಯ ಸದಸ್ಯರಾದ ಡಿ. ಜಿನದತ್ತ ಶೆಟ್ಟಿ, ಎಚ್‌. ಮೃತ್ಯುಂಜಯ, ಇಜಾರಿ ವಸುಪಾಲ್‌, ಜೆ. ಶಾಂತರಾಜು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.