13 ಮಂದಿ ಐಎಸ್ ಬೆಂಬಲಿಗರ ಬಂಧನ

ನವದೆಹಲಿ (ಪಿಟಿಐ): ದೇಶದಾದ್ಯಂತ ಶುಕ್ರವಾರ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಒಟ್ಟು 13 ಮಂದಿ ಐಎಸ್ ಬೆಂಬಲಿಗರನ್ನು ಬಂಧಿಸಿದೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಿಂದ 13 ಮಂದಿಯನ್ನು ಬಂಧಿಸಲಾಗಿದೆ. ಈ 13 ಮಂದಿ ‘ಜನೂದ್– ಉಲ್– ಖಲೀಫಾ –ಇ– ಹಿಂದ್’ ಎಂಬ ಭಯೋತ್ಪಾದನಾ ಸಂಘಟನೆ ಜತೆಗೆ ಗುರುತಿಸಿಕೊಂಡಿದ್ದರು. ಈ ಸಂಘಟನೆ ಬಹುತೇಕ ಐಎಸ್ ಸಿದ್ಧಾಂತಗಳನ್ನೇ ಅಳವಡಿಸಿಕೊಂಡಿದೆ ಎನ್ನಲಾಗಿದೆ.
ಬಂಧಿತರ ಪೈಕಿ ಮುಂಬೈ ನಿವಾಸಿ ಮುನಾಬೀರ್ ಮುಸ್ತಾಕ್ ತನ್ನನ್ನು ಈ ಸಂಘಟನೆಯ ನಾಯಕ (ಅಮೀರ್) ಎಂದು ಘೋಷಿಸಿಕೊಂಡಿದ್ದ. ಆತನಿಂದ ಎಂಟು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ.
‘ಜನೂದ್– ಉಲ್– ಖಲೀಫಾ –ಇ– ಹಿಂದ್’ ಸಂಘಟನೆ ದೇಶದ ವಿವಿಧ ಕಡೆಗಳಲ್ಲಿ ಬಾಂಬ್ ದಾಳಿ ನಡೆಸಲು ಉದ್ದೇಶಿಸಿತ್ತು. ವಿದೇಶೀಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲೂ ಸಂಘಟನೆ ಸಂಚು ರೂಪಿಸಿತ್ತು ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.