ಬಳ್ಳಾರಿ: ಸುಮಾರು ₹ 159 ಕೋಟಿ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 14 ಗಣಿ ಕಂಪೆನಿಗಳಿಗೆ ಅರಣ್ಯ ಇಲಾಖೆಯು ಅಂತಿಮ ನೋಟಿಸ್ ಜಾರಿ ಮಾಡಿದೆ.

ದೊಡ್ಡ ಮೊತ್ತದ ಈ ತೆರಿಗೆಯನ್ನು ಪಾವತಿ ಮಾಡುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ ಈ ಕಂಪೆನಿಗಳು ನಿರ್ಲಕ್ಷ್ಯ ತೋರಿದ್ದರಿಂದ ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಗುರುವಾರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಣಾವತ್, ಅಂತಿಮ ನೋಟಿಸ್ ಜಾರಿಗೊಳಿಸಲು ಅನುಮತಿ ಪಡೆದುಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಪಾವತಿಸದಿದ್ದರೆ ಕಂಪೆನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನೂ ಗಣಿ ಮಾಲೀಕರಿಗೆ ನೀಡಲಾಗಿದೆ. ಆದರೆ ಈ ತೆರಿಗೆಯನ್ನು ಶೇ 18ರಷ್ಟು ಬಡ್ಡಿ ಜೊತೆಗೆ ಯಾವಾಗ ಬೇಕಾದರೂ ಪಾವತಿಸುವ ಅವಕಾಶವೂ ಕರ್ನಾಟಕ ಅರಣ್ಯ ಕಾಯ್ದೆಯಲ್ಲಿ ಇರುವುದರಿಂದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟ ಎನ್ನುತ್ತಾರೆ ಅಧಿಕಾರಿ ಗಳು.

ಜಿಲ್ಲೆಯಲ್ಲಿ ಎ. ಬಿ. ಮತ್ತು ಸಿ ಕೆಟಗರಿಯಲ್ಲಿ ಒಟ್ಟು 99 ಗಣಿ ಕಂಪೆನಿಗಳಿದ್ದು, ಆ ಪೈಕಿ 21 ಚಾಲನೆಯಲ್ಲಿವೆ. ಉಳಿದವು ಇನ್ನೂ ಆರಂಭವಾಗಿಲ್ಲ. ಚಾಲನೆಯಲ್ಲಿರುವ ಪೈಕಿ ತೆರಿಗೆ ಪಾವತಿಸದ ಕಂಪೆನಿಗಳಿಗೆ ನೋಟಿಸ್ ನೀಡಲಾಗಿದೆ.

ಎಫ್ಡಿಟಿ ಏನು?: ಅರಣ್ಯ ಇಲಾಖೆಯ ಭೂಮಿಯನ್ನು ಬಳಸಿ ಉತ್ಪಾದನಾ ಚಟುವಟಿಕೆ ನಡೆಸುವ ಕಂಪೆನಿಗಳು ಅರಣ್ಯ ಅಭಿವೃದ್ಧಿ ತೆರಿಗೆ (ಫಾರೆಸ್ಟ್ ಡೆವಲಪ್ಮೆಂಟ್ ಟ್ಯಾಕ್ಸ್ –ಎಫ್ಡಿಟಿ) ಪಾವತಿಸಬೇಕು. ಈ ತೆರಿಗೆ ಉತ್ಪನ್ನಗಳ ಮಾರಾಟ ಬೆಲೆಯ ಶೇ 12ರಷ್ಟು ಇರಬೇಕು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲವು ಗಣಿ ಮಾಲೀಕರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶೇ 6ರಷ್ಟು ತೆರಿಗೆ ಪಾವತಿಸುವಂತೆ ಸೂಚಿಸಿತ್ತು. ಆನಂತರ ತೆರಿಗೆ ಮೊತ್ತವನ್ನು ಅಂದಾಜಿಸಲು ಅರಣ್ಯ ಇಲಾಖೆಯು ತಂಡವೊಂದನ್ನು ರಚಿಸಿತ್ತು. ಕಂಪೆನಿಗಳು ಉತ್ಪನ್ನ ಮಾರಾಟದ ದಾಖಲೆಗಳನ್ನು ಸಲ್ಲಿಸದ ಕಾರಣ, ಈ ತಂಡವು ಸರ್ಕಾರಿ ನಿಯಮದ ಪ್ರಕಾರ ತೆರಿಗೆ ಮೊತ್ತವನ್ನು ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.