ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು: ರಂಗಾಯಣವು ಜ.14 ರಿಂದ 22 ರ ವರಿಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಂಡಿದೆ.

`ಈ ಬಾರಿಯ ಬಹುರೂಪಿ ನಾಟಕೋತ್ಸವದ ಆಶಯ ಸಾಹಿತ್ಯವಾಗಿದೆ. ಎಂಟು ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ವಿಚಾರಧಾರೆಯನ್ನು ಒಟ್ಟಾರೆಯಾಗಿ ನಾಟಕೋತ್ಸವದ ಕೇಂದ್ರ ವಿಷಯವನ್ನಾಗಿ ಇಟ್ಟುಕೊಂಡು ಈ ಬಾರಿಯ ಬಹುರೂಪಿಯನ್ನು ರೂಪಿಸಲಾಗಿದೆ~ ಎಂದು ರಂಗಾಯಣದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಸುಮಾರು 24 ರಂಗತಂಡಗಳು ನಾಟಕೋತ್ಸವದಲ್ಲಿ ಭಾಗವಹಿಸುತ್ತಿವೆ. ಇವುಗಳಲ್ಲಿ 16 ನಾಟಕಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರ ಕಥೆ, ಕಾದಂಬರಿ, ಸಾಹಿತ್ಯ ಕುರಿತಂತೆಯೇ ಇವೆ. ಎಂಟು ಕನ್ನಡ ನಾಟಕಗಳು, ಎಂಟು ಪರಭಾಷಾ ನಾಟಕಗಳು, ಎರಡು ವೃತ್ತಿ ಕಂಪೆನಿ ನಾಟಕಗಳು, ಎರಡು ಮಕ್ಕಳ ನಾಟಕಗಳು, ಎರಡು ಜಾನಪದ ನಾಟಕಗಳು, ಒಂದು ಯಕ್ಷಗಾನ, ಒಂದು ಗೊಂಬೆಯಾಟ ಸಹ ಸೇರಿವೆ~ ಎಂದು ಮಾಹಿತಿ ನೀಡಿದರು.

ವಿಚಾರ ವಿನಿಯಮ, ಪುಸ್ತಕ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, 50 ಬೀದಿ ನಾಟಕಗಳು, ಜಾನಪದ ನೃತ್ಯ, ಕಾವ್ಯ ವಾಚನ, ಚಲನಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ, ಕವಿ ಗೀತಗಾಯನ ಕಾರ್ಯಕ್ರಮ, ವಿದ್ಯಾರ್ಥಿ ಗಳಿಗಾಗಿ ಥಟ್ ಅಂತ ಹೇಳಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ-ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT