ಶನಿವಾರ, ಜನವರಿ 18, 2020
26 °C

16ರಿಂದ ಬಾಣಂತಮ್ಮ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕೊಡ್ಲಿಪೇಟೆ ಸಮೀಪದ ಬೆಂಬಳೂರು ಬಾಣಂತಮ್ಮ ಜಾತ್ರೆ ಜನವರಿ 16 ರಂದು ನಡೆಯಲಿದೆ.ಅಂದು ಬೆಳಿಗ್ಗೆ 9 ಗಂಟೆಗೆ ಜಾತ್ರಾ ವಿಧಿಗಳು ಪ್ರಾರಂಭವಾಗಿ ಮಧ್ಯಾಹ್ನ 12ರವರೆಗೆ ಜರುಗುತ್ತದೆ. ನಂತರ 2ಗಂಟೆಗೆಯಿಂದ ಸಂಜೆ 5ರವರೆಗೆ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ನಡೆಯಲಿದೆ. ಇತಿಹಾಸ ಪ್ರಸಿದ್ಧ ಜಾತ್ರೆಯಲ್ಲಿ ಕೊಡ್ಲಿಪೇಟೆ, ಶನಿವಾರಸಂತೆ ಸೇರಿದಂತೆ ಹಾಸನ ಜಿಲ್ಲೆಯ ಯಸಳೂರು ಹೋಬಳಿಯ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಪ್ರಸಾದ್ ಪಟೇಲ್ ತಿಳಿಸಿದ್ದಾರೆ.ಜಾತ್ರೆ ಪ್ರಯುಕ್ತ ಜನವರಿ 15 ರಂದು ಬೆಳಿಗ್ಗೆಯಿಂದ ಮಡೆಪೂಜೆಗಾಗಿ ಗ್ರಾಮದ ಪಟೇಲರ ಮನೆಯಲ್ಲಿ ಭಕ್ತಾದಿಗಳಿಂದ ಹಸಿರುಹೊರೆ ಕಾಣಿಕೆಗಳನ್ನು ಸ್ವೀಕರಿಸಲಾಗುವುದು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)