ಗುರುವಾರ , ಫೆಬ್ರವರಿ 25, 2021
30 °C
ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ

16 ಪದಕ ಪಡೆದ ವಿದ್ಯಾರ್ಥಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

16 ಪದಕ ಪಡೆದ ವಿದ್ಯಾರ್ಥಿನಿ

ಬಾಗಲಕೋಟೆ: ಬಿ.ಎಸ್‌ಸಿ ತೋಟಗಾರಿಕೆ ಪದವಿಯಲ್ಲಿ 16 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಮೈಸೂರು ತೋಟಗಾರಿಕೆ ಕಾಲೇಜಿನ  ವಿದ್ಯಾರ್ಥಿನಿ, ಕೇರಳ ಮೂಲದ ಓ.ಆರ್‌.ಅಶ್ವತಿ ಜ್ಯೋತ್ಸ್ನಾ ಆ ಪದಕಗಳನ್ನು ಘಟಿಕೋತ್ಸವ ಸಮಾರಂಭದಲ್ಲಿ  ತಂದೆಯ ಕೊರಳಿಗೆ ಹಾಕಿ ಸಂಭ್ರಮಿಸಿದರು.ಇದರಿಂದ ಭಾವುಕರಾದ ತಂದೆ ರಾಧಾಕೃಷ್ಣನ್‌, ಮಗಳನ್ನು ಅಪ್ಪಿ ಖುಷಿ ಹಂಚಿಕೊಂಡರು. ಅಶ್ವತಿ ಅವರ ತಂದೆ–ತಾಯಿ ಇಬ್ಬರೂ ನಿವೃತ್ತ ಶಿಕ್ಷಕರು.

ಸಹಕುಲಾಧಿಪತಿಯಾದ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಪದಕ ಪ್ರದಾನ ಮಾಡಿದರು.ಕೃಷಿಕನ ಮಗಳ ಹೆಮ್ಮೆಯ ಸಾಧನೆ

ಬಾಗಲಕೋಟೆ:
ಬಿಎಸ್‌ಸಿ ತೋಟಗಾರಿಕೆ ಪದವಿಯಲ್ಲಿ 16 ಚಿನ್ನದ ಪದಕ ಪಡೆದ ಕೇರಳ ಮೂಲದ ಓ.ಆರ್‌.ಅಶ್ವತಿ ಜ್ಯೋತ್ಸ್ನಾ ತಂದೆ ವೃತ್ತಿಯಲ್ಲಿ ಶಿಕ್ಷಕ ಹಾಗೂ ಕೃಷಿಕ.

ಮಗಳ ಸಾಧನೆ ಬಗ್ಗೆ ಮಾತನಾಡಿದ ಅವರು ‘ನಾನು ಶಿಕ್ಷಕನಾಗಿದ್ದರೂ ಮೂಲತಃ ಕೃಷಿಕ. ಎರಡು ಎಕರೆ ಹೊಲವಿದ್ದು, ಅದರಲ್ಲಿ ಭತ್ತ, ಅಡಿಕೆ, ತರಕಾರಿ ಬೆಳೆಯುತ್ತೇನೆ’ ಎಂದರು.‘ಮಗಳನ್ನು ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಓದಿಸಬೇಕು ಎಂದುಕೊಂಡಿದ್ದೆ. ಆದರೆ, ಸರ್ಕಾರಿ ಸೀಟು ಸಿಗದ ಕಾರಣ ಬಿ.ಎಸ್‌ಸಿ ತೋಟಗಾರಿಕೆಗೆ ಸೇರಿದ್ದಳು. ಇದೀಗ ವಿಶ್ವವಿದ್ಯಾಲಯಕ್ಕೆ ಅತಿ ಹೆಚ್ಚು ಬಂಗಾರದ ಪದಕ ಪಡೆದುಕೊಂಡಿದ್ದಾಳೆ.  ಇಂತಹ ಮಗಳನ್ನು ಪಡೆದಿರುವುದು ನನ್ನ ಭಾಗ್ಯ’ ಎಂದರು.ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕೆ ಎಂ.ಎಸ್‌ಸಿ (ತರಕಾರಿ ವಿಭಾಗ) ವ್ಯಾಸಂಗ ಮಾಡುತ್ತಿರುವ ಅಶ್ವತಿ, ರೈತ ಪರವಾದ ಸಂಶೋಧನಾ ಕಾರ್ಯದಲ್ಲಿ ತೊಡಗುವ ಉದ್ದೇಶದಿಂದ ಪಿಎಚ್‌.ಡಿ ಮಾಡಿ ನಂತರ ಸರ್ಕಾರಿ ಉದ್ಯೋಗ ಸೇರುವ ಗುರಿ ಹೊಂದಿದ್ದಾರೆ. ದಕ್ಷಿಣ ಕೊರಿಯಾದ ಸೋಲ್‌ನಲ್ಲಿ 2014 ಜೂನ್‌ನಲ್ಲಿ ನಡೆದ ಅಧ್ಯಯನ ವಿನಿಮಯ ಕಾರ್ಯಾಗಾರದಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಅವರು  ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದರು.ಕೇಂದ್ರ ಕೃಷಿ ಮತ್ತು ಸಹಕಾರಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ಅಶೋಕ ದಳವಾಯಿ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಡಾ.ಡಿ.ಎಲ್.ಮಹೇಶ್ವರ್‌ ವಿಶ್ವವಿದ್ಯಾಲಯದ ಪ್ರಗತಿ ಪರಿಚಯ ಮಾಡಿಕೊಟ್ಟರು. ಬಂಗಾರ ಪದಕ ವಿಜೇತರು: ಪಿಎಚ್‌.ಡಿ: ಶ್ರೀಲತಾ ವಸಂತು (3 ಪದಕ).

ಎಂ.ಎಸ್‌ಸಿ: ದೀಪಾ ಪೂಜಾರ, ಮಹಾವೀರ ಮುತ್ತೂರ ಮತ್ತು ಆಕಾಂಕ್ಷಾ ಮಹೀಂದ್ರಿಕರ  ತಲಾ 3 ಪದಕ), ಆಕಾಂಕ್ಷಾ ಶ್ರೀವಾಸ್ತವ, ಎಷ್‌.ಪಿ.ಜೈಶಂಕರ, ವಿ.ಹರ್ಷವರ್ಧನ ಗೌಡ ಮತ್ತು ಜಿ.ಎನ್‌.ಮಂಜೇಶ್‌ (ತಲಾ 2 ಪದಕ) ಎಚ್‌.ಆರ್‌.ನಿರ್ಮಲಾ, ಯು.ಪ್ರೇಮ್‌ಚಂದ್‌ ಮತ್ತು ಎಂ.ವಿ.ರೇಖಾ (ತಲಾ ಒಂದು ಪದಕ)ತೋಟಗಾರಿಕೆ ಬಿ.ಎಸ್‌ಸಿ:  ಹರೀಶ ಪಾಟೀಲ 4, ಎನ್.ಡಿ.ವಿನಯ್‌ ಹಾಗೂ ಎನ್‌.ಮಂಜುನಾಥ್‌ ತಲಾ 3, ಆರ್‌.ಓ.ಮಹೇಶ್‌, ಶ್ರೀನಿವಾಸ ಬಗಾಡೆ ಮತ್ತು ಬಿ.ಜಿ.ಬೇಬಿ ಸಾಂತಿನಿ ತಲಾ ಎರಡು ಹಾಗೂ ಪ್ರತೀಕ್ಷಾ ವಾಮನ ಮತ್ತು ಭವ್ಯಾ ನರಸಿಂಹರೆಡ್ಡಿಗೆ ತಲಾ ಒಂದು ಚಿನ್ನದ ಪದಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.