ಮಂಗಳವಾರ, ಏಪ್ರಿಲ್ 13, 2021
25 °C

18ಕ್ಕೆ ಶಿವಶಂಕರಪ್ಪಗೆ ನಾಗರಿಕ ಸನ್ಮಾನ

ಪ್ರಜಾವಾರ್ತೆ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ನ. 18ರಂದು ಸಂಜೆ 4ಕ್ಕೆ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.ಮೈದಾನದ ಹಾನಗಲ್ ಕುಮಾರಸ್ವಾಮಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, ಪಂಚಮಸಾಲಿ ಪೀಠದ ಸಿದ್ದಲಿಂಗೇಶ್ವರ ಸ್ವಾಮೀಜಿ,  ಜಯಮೃತ್ಯುಂಜಯ  ಸ್ವಾಮೀಜಿ ಸೇರಿದಂತೆ  30ಕ್ಕೂ ಹೆಚ್ಚು  ಮಠಾಧೀಶರು  ಭಾಗವಹಿಸುವರು ಎಂದು  ನಾಗರಿಕ ಸನ್ಮಾನ  ಸಮಿತಿಯ  ಪ್ರಧಾನ  ಕಾರ್ಯದರ್ಶಿ ಅಥಣಿ ಎಸ್. ವೀರಣ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ವಿಜಾಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ನಿವೃತ್ತ ನ್ಯಾಯಾಧೀಶ ಶಿವರಾಜ ವಿ. ಪಾಟೀಲ, ಗೊ.ರು. ಚನ್ನಬಸಪ್ಪ, ಮೌಲಾನಾ ಇಬ್ರಾಹಿಂ ಸಖಾಫಿ,  ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ, ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್, ಸಚಿವ ಎಂ.ಪಿ. ರೇಣುಕಾಚಾರ್ಯ, ಪ್ರಭಾಕರ ಕೋರೆ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಈ ನಾಗರಿಕ ಸನ್ಮಾನ ವೀರಶೈವ ಸಮಾಜಕ್ಕೆ ಸೀಮಿತವಾಗದೇ, ಎಲ್ಲ ಜಾತಿ, ಧರ್ಮದ ಜನರು ಸೇರಿ ನಡೆಸುವ ಕಾರ್ಯಕ್ರಮವಾಗಿದೆ. 108 ವರ್ಷಗಳ ಇತಿಹಾಸ ಇರುವ ಸಭಾದ 23ನೇ ಅಧ್ಯಕ್ಷರಾಗಿ ದಾವಣಗೆರೆ ನಗರದ ಶಾಮನೂರು ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಪಕ್ಷಾತೀತವಾದ ಈ ಕಾರ್ಯಕ್ರಮಕ್ಕೆ ಹೊರ ರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದಾರೆ ಎಂದು ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಎ.ಸಿ. ಜಯಣ್ಣ, ಕೆ.ಆರ್. ಜಯದೇವಪ್ಪ, ಎಸ್.ಎಚ್. ಪಟೇಲ್, ಅಣಬೇರು ರಾಜಣ್ಣ, ಎಂ. ಶಿವಕುಮಾರ್, ಎ.ಆರ್.  ಉಜ್ಜನಪ್ಪ, ಕೆ. ಮಲ್ಲಪ್ಪ, ಎಚ್.ಕೆ. ರಾಮಚಂದ್ರಪ್ಪ, ಸೈಯದ್ ಸೈಫುಲ್ಲಾ, ಕಾಸಲ್ ಎಸ್. ವಿಠಲ್, ಡಿ. ಬಸವರಾಜ್, ದಿನೇಶ್ ಕೆ. ಶೆಟ್ಟಿ, ಎಂ.ಜಿ. ಪುಟ್ಟಸ್ವಾಮಿ, ಚಂದ್ರಣ್ಣ, ದೇವರಮನಿ ಶಿವಕುಮಾರ್, ಬಿ.ಎಚ್. ವೀರಭದ್ರಪ್ಪ, ಎಂ.ಟಿ. ಸುಭಾಷ್‌ಚಂದ್ರ ಉಪಸ್ಥಿತರಿದ್ದರು.ತಾಲ್ಲೂಕಿನಿಂದ 10 ಸಾವಿರ ಮಂದಿ

ನ. 18ರಂದು ನಡೆಯುವ ಶಿವಶಂಕರಪ್ಪ ಅವರ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ದಾವಣಗೆರೆ ತಾಲ್ಲೂಕಿನಿಂದ 10 ಸಾವಿರ ಮಂದಿ ಭಾಗವಹಿಸುವರು ಎಂದು ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗಪ್ಪ, ಕಾರ್ಯದರ್ಶಿ ಎಸ್.ಜಿ. ರುದ್ರೇಶ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.