ಶುಕ್ರವಾರ, ಮೇ 14, 2021
25 °C

2ಜಿ: ಕನಿಮೊಳಿಗೆ ಸಮನ್ಸ್ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಜಾರಿ ನಿರ್ದೇಶ ನಾಲಯ (ಇ.ಡಿ) ಸಮನ್ಸ್ ಜಾರಿ ಮಾಡಿದೆ.ಖುದ್ದು ಹಾಜರಾಗಬೇಕು ಅಥವಾ ಅಧಿಕೃತ ಪ್ರತಿನಿಧಿಯೊಬ್ಬರಿಂದ ಹಣಕಾಸು ದಾಖಲಾತಿಗಳು ಮತ್ತು ಹೇಳಿಕೆಯ ಧ್ವನಿಮುದ್ರಣವನ್ನು ಏಪ್ರಿಲ್ 26ರಂದು ತಲುಪಿಸಬೇಕು ಎಂದು ಸೂಚಿಸಿರುವುದಾಗಿ  ಜಾರಿ ನಿರ್ದೇಶ ನಾಲಯದ ಮೂಲಗಳು ತಿಳಿಸಿವೆ.2ಜಿ ಹಗರಣದಲ್ಲಿ ಬಂಧಿತರಾಗಿದ್ದ ಕನಿಮೊಳಿ ಅವರನ್ನು  ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಮತ್ತು ಮುಂದಿನ ವಿಚಾರಣೆಯನ್ನು ಇ.ಡಿ.ಗೆ ವಹಿಸಲಾಗಿತ್ತು.ಡಿಎಂಕೆ ಕುಟುಂಬದ ಒಡೆತನದ ಕಲೈಂಞರ್ ಟಿವಿ ಚಾನೆಲ್‌ಲ್ಲಿ ಕನಿಮೊಳಿ ಶೇ20ರಷ್ಟು ಪಾಲು ಹೊಂದಿದ್ದು, ಈ ಚಾನೆಲ್‌ಗೆ 200 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿರುವ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಲಿದೆ. 2ಜಿ ಹಗರಣಕ್ಕೆ ಸಂಬಂಧಿಸಿ ದಂತೆ ಹಲವೆಡೆ ಹಣಕಾಸು ವ್ಯವಹಾರ ಗಳ ಬಗ್ಗೆಯೂ ಇ.ಡಿ. ಪರಿಶೀಲಿ ಸುತ್ತಿದ್ದು, ಈ ಮುಂಚೆ ಕನಿಮೊಳಿ ಅವರ ಆದಾಯ, ಆಸ್ತಿ ಮತ್ತು ವೈಯಕ್ತಿಕ ಹೂಡಿಕೆ ಬಗ್ಗೆ ತನಿಖೆ ನಡೆಸಲಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.