ಭಾನುವಾರ, ಏಪ್ರಿಲ್ 11, 2021
21 °C

2 ಜಿ ಹಗರಣಕ್ಕೆ ಒಂದು ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಾಗೂ ರಾಜಕೀಯ, ಕಾರ್ಪೊರೇಟ್ ವಲಯಗಳ ದಿಗ್ಗಜರುಗಳೇ ಭಾಗಿಯಾಗಿದ್ದ 2 ಜಿ ತರಂಗಾಂತರ  ಹಗರಣದ ವಿಚಾರಣೆಗೀಗ ಬರೋಬ್ಬರಿ ಒಂದು ವರ್ಷ.

ಸಿಬಿಐ ವಿಶೇಷ  ನ್ಯಾಯಾಧೀಶ ಒ. ಪಿ. ಸೈನಿ ಅವರ ನೇತೃತ್ವದಲ್ಲಿ ಕಳೆದ ವರ್ಷದ ನವೆಂಬರ್ 11ರಂದು ಆರಂಭಗೊಂಡ ವಿಚಾರಣೆಯಲ್ಲಿ ಇದುವರೆಗೆ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೊಳಿ ಸೇರಿದಂತೆ 17 ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮೂರು ದೂರಸಂಪರ್ಕ ಸಂಸ್ಥೆಗಳೂ ಸೇರಿವೆ. ಒಂದು ವರ್ಷದ ವಿಚಾರಣೆಯ ಅವಧಿಯಲ್ಲಿ  ಸುಮಾರು 100 ಸಾಕ್ಷ್ಯಗಳ ವಿಚಾರಣೆ ನಡೆಸಿ 3000 ಪುಟಗಳಷ್ಟು ಹೇಳಿಕೆಯನ್ನು ದಾಖಲಿಸಿರುವುದು ನ್ಯಾಯಾಲಯದ ಹೆಗ್ಗಳಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.