ಭಾನುವಾರ, ಜನವರಿ 26, 2020
18 °C

2 ವರ್ಷಕ್ಕೆ 100 ವಿಶೇಷ ಮಳಿಗೆ: ‘ಎಜಿಎಲ್‌’ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ಎರಡು ವರ್ಷಗ ಳಲ್ಲಿ 100ಕ್ಕೂ ಅಧಿಕ ವಿಶೇಷ ಮಳಿಗೆ ಗಳನ್ನು ಆರಂಭಿಸಲಾಗುವುದು ಎಂದು ಸೆರಾಮಿಕ್ ಟೈಲ್ಸ್ ತಯಾರಿಕಾ ಕಂಪೆನಿ ‘ಏಷ್ಯನ್ ಗ್ರಾನೈಟೊ ಇಂಡಿಯ ಲಿ.’ (ಎಜಿಎಲ್) ಅಧ್ಯಕ್ಷ ಕಮಲೇಶ್ ಪಟೇಲ್ ಹೇಳಿದರು. ನಗರದಲ್ಲಿ ಗುರುವಾರ ಕಂಪೆನಿಯ 44ನೇ ವಿಶೇಷ ಮಳಿಗೆ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕಂಪೆನಿಯ ಉತ್ಪನ್ನಗಳಿಗೆ ಕರ್ನಾಟಕ ಉತ್ತಮ ಮಾರುಕಟ್ಟೆಯಾ ಗಿದೆ.

ಕಂಪೆನಿಯ ಆದಾಯದ ದೊಡ್ಡ ಪಾಲು ದಕ್ಷಿಣ ಭಾರತದಿಂದಲೇ ಬರುತ್ತಿದೆ ಎಂದರು. ಕಳೆದೊಂದು ದಶಕದಲ್ಲಿ ಟೈಲ್ಸ್ ಉದ್ಯಮ ಹೆಚ್ಚು ಸಂಘಟಿತವಾಗಿದ್ದು, ವಿವಿಧ ವಲಯದಲ್ಲಿ ಹೊಸ ಬಳಕೆದಾ ರರು ಬರುತ್ತಿದ್ದು, ವಿಶಿಷ್ಟ ವಿನ್ಯಾಸದ ನೆಲಹಾಸುಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)