ಚಡಚಣ: ಪ್ರಸಕ್ತ ಹಂಗಾಮಿನಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿತು ಎಂದು ರೈತ ಅಸಹಾಯಕನಾಗಿರುವಾಗಲೇ ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆವರೆಗೆ ಸುಮಾರು 24 ಗಂಟೆಗಳ ವರೆಗೆ ಸುರಿಯುತ್ತಿರುವ ಜಿಟಿ ಜಿಟಿ ಮಳೆ ರೈತರ ಮೊಗದಲ್ಲಿ ಮತ್ತೆ ಸಂತಸ ಮೂಡಿಸಿದೆ.

ಸಾಲ ಮಾಡಿ ಗದ್ದೆ ಹಸನು ಮಾಡಿ ಬಿತ್ತನೆಗೆ ದಿನಗಣನೆ ಮಾಡುತ್ತಿದ್ದ ರೈತ, ಮೋಡಗಳತ್ತ ಮುಖ ಮಾಡಿ, ವರುಣನ ಕೃಪೆಗೆ ಕಾಯುತ್ತಿದ್ದ. ವಾಡಿಕೆಯಂತೆ ಪ್ರತಿ ವರ್ಷ ಜೂನ್ ಅಂತ್ಯದೊಳಗೆ ಕನಿಷ್ಠ 90ಮಿ.ಮೀಮಳೆಯಾಗಬೇಕು. ಆದರೆ ಅಷ್ಟು ಮಳೆ ಇನ್ನು ಆಗಿಲ್ಲ. ಆದರೂ ಗುರುವಾರ ಮತ್ತು ಶುಕ್ರವಾರ ಸುರಿಯುತ್ತಿರುವ ಮಳೆ ಇಂಡಿ ತಾಲ್ಲೂಕಿನ ರೈತರ ಮೂಗದಲ್ಲಿ ಹೊಸ ಕಳೆ ಮೂಡಿಸಿದೆ. ಚಡಚಣ, ಬಳ್ಳೊಳ್ಳಿ ಹಾಗೂ ಇಂಡಿ ಹೋಬಳಿಗಳ ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ರೈತರು ಜಿಟಿ ಜಿಟಿ ಮಳೆ ನಿಂತೊಡನೆ ಬಿತ್ತನೆ ಮಾಡಲು ಸಜ್ಜಾಗಿದ್ದಾನೆ.

`ಇನ್ನೂ ಕೆಲವು ಗ್ರಾಮಗಳಲ್ಲಿ ಬಿತ್ತನೆ ಮಾಡಲು ಬೇಕಾದ ಕನಿಷ್ಠ ಮಳೆಯಾಗಿಲ್ಲ. ಜಿಟಿ ಜಿಟಿ ಮಳೆಯಾದರೂ ಮಣ್ಣು ಹಸಿಯಾಗಿಲ್ಲ. ಹೀಗಾಗಿ ಬಿತ್ತನೆ ಸಾಧ್ಯವಿಲ್ಲ ಎನ್ನುತ್ತಾರೆ' ಹಾವಿನಾಳ ಗ್ರಾಮದ ಅಲ್ಲಾವುದ್ದಿನ ಮೂಲಿಮನಿ.

`ಬಿತ್ತನೆಗೆ ಹಿನ್ನೆಡೆಯಾಗಿದ್ದರಿಂದ ಹೆಸರು ಬಿತ್ತನೆ ಸಾಧ್ಯವಿಲ್ಲ. ಇನ್ನೂ ತೊಗರಿ, ಶೇಂಗಾ, ಸೂರ್ಯ ಕಾಂತಿ ಮುಂತಾದವುಗಳನ್ನು ಮಾತ್ರ ಬಿತ್ತನೆ ಮಾಡಬಹುದು' ಎನ್ನುತ್ತಾರೆ ರೈತ ಸಾಹೇಬಗೌಡ ಬಿರಾದಾರ.

ಜನ ಜೀವನ ಅಸ್ಥವ್ಯಸ್ತ: ಗುರುವಾರ ಮಧ್ಯಾಹ್ನದಿಂದ ಇಂಡಿ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿರುವುದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.