ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24x7 ನೀರು ಪೂರೈಕೆಗೆ ರೂ 7000 ಕೋಟಿ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ, ಪಟ್ಟಣಗಳಲ್ಲಿ 24x7 (ಹಗಲಿರುಳೂ) ನೀರು ಪೂರೈ­ಸುವ ಯೋಜನೆಗೆ ಕೇಂದ್ರ ಸರ್ಕಾರ ರೂ 7000 ಕೋಟಿ ಮಂಜೂರು ಮಾಡಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಚಾವ್ಲಾ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ನಡೆದ ‘ನಗರಾಡಳಿತದಲ್ಲಿನ ನವೀನ ಅಂಶಗಳು’ ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಅನುದಾನದಲ್ಲಿ 40 ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿ­ಸ­­ಲಾಗಿದೆ. ಆರಂಭದಲ್ಲಿ ಮೈಸೂರು, ಹುಬ್ಬಳ್ಳಿ–ಧಾರವಾಡ, ಗುಲ್ಬರ್ಗ ಮತ್ತು ಬೆಳಗಾವಿಯಲ್ಲಿ ಜಾರಿಗೊಳಿಸ­ಲಾಗುವುದು ಎಂದು ತಿಳಿಸಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ 24x7 ನೀರು ಪೂರೈಸುವುದು ಬೇಡವಾಗಿದೆ.  24x7 ನೀರು ಪೂರೈಸುವುದು ಸಮಸ್ಯೆಯೇ ಅಲ್ಲ. ತಂತ್ರಜ್ಞಾನದ ಸಮಸ್ಯೆಯೂ ಇಲ್ಲ.  ಆದರೆ, ಅಸಮರ್ಥ ಅಧಿಕಾರಿಗಳು, ಭ್ರಷ್ಟಾಚಾರ ಮತ್ತು ಕೆಲವು ಕ್ರಿಮಿನಲ್‌ ಜನರಿಂದ ಈ ಯೋಜನೆ ಕುಂಠಿತ­ವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನೀರು ಸರಬರಾಜು ದಂಧೆ: ಸ್ಥಳೀಯ ಸಂಸ್ಥೆಗಳ ಹಲವು ಜನಪ್ರತಿನಿಧಿಗಳು ಕೊಳವೆಬಾವಿ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ದಂಧೆ ನಡೆಸುತ್ತಿದ್ದಾರೆ.  ಅವರಿಗೆ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವುದೇ ಮುಖ್ಯವಾಗಿದೆ. ಅಧಿಕಾರಿಗಳು ಇಂತಹ­ವರನ್ನು ಎದುರಿಸಿ ಯೋಜನೆ­ಗಳನ್ನು ಅನುಷ್ಠಾನಗೊ­ಳಿಸಲು ಮುಂದಾಗಬೇಕು ಎಂದು ರಾಜೀವ್‌ ಚಾವ್ಲಾ ಹೇಳಿದರು.

4200 ಹುದ್ದೆಗಳ ಭರ್ತಿ

ನಗರಾಭಿವೃದ್ಧಿ ಇಲಾಖೆಯಲ್ಲಿ 4200 ಹುದ್ದೆಗಳನ್ನು ಭರ್ತಿ ಮಾಡಲು ಚಾಲನೆ ನೀಡಲಾಗಿದೆ ಎಂದು ನಗರಾಭಿ­ವೃದ್ಧಿ ಸಚಿವ ವಿನಯ್‌ ಕುಮಾರ್‌ ಸೊರಕೆ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆಯ ಯೋಜನೆ­ ಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನ­ಗೊಳಿಸಲು ಭೂಬ್ಯಾಂಕ್‌ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮುಖ್ಯ­ಮಂತ್ರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದರು. ಪೌರಾಡಳಿತ ಸಚಿವ ಖಮರುಲ್‌ ಇಸ್ಲಾಂ, ಪೌರಾಡಳಿತ  ನಿರ್ದೇಶಕಿ ಡಾ.ಎನ್‌. ಮಂಜುಳಾ ಉಪಸ್ಥಿತರಿದ್ದರು.

ರಕ್ತ ಕುಡಿಯುತ್ತೀರಿ!
‘ಯೋಜನೆಗಳ ಯಶಸ್ವಿಗೆ ಅಧಿಕಾರಿಗಳು ಬೆವರು ಮತ್ತು ರಕ್ತ ಹಾಕಬೇಕು. ಆದರೆ, ನೀವು ರಕ್ತ ಮಾತ್ರ ಕುಡಿಯುತ್ತೀರಿ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಚಾವ್ಲಾ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

‘ಸ್ಥಳೀಯ ಸಂಸ್ಥೆಗಳು ನೀರಿನ ದರವನ್ನು ಪರಿಷ್ಕರಿಸಬೇಕು ಮತ್ತು ಪೋಲು ತಡೆಯಲು ನೀರಿನ ಲೆಕ್ಕಪತ್ರ ಮಾಡಿಸಬೇಕು. ಅಪಾರ ಪ್ರಮಾಣದಲ್ಲಿ ನೀರು ಬಳಕೆ ಮಾಡುವವರಿಗೆ ಪ್ರೋತ್ಸಾಹ ನೀಡಬಾರದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT